ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಬಿಟ್ಹಾಕಿ, ಭಾರತದಲ್ಲಿ ಟೀಂ ಇಂಡಿಯಾ ಸೋಲಿಸುವುದು ಈಗ ಮುಖ್ಯ: ಗ್ರೇಮ್ ಸ್ವಾನ್

ಪ್ರಸ್ತುತ ಆಸ್ಟ್ರೇಲಿಯಾ ವಿಶ್ವದ ಅತ್ಯುತ್ತಮ ತಂಡವಲ್ಲ. ಅದರ ಗೀಳನ್ನು ಬಿಟ್ಟು ಆಸ್ಟ್ರೇಲಿಯಾವನ್ನೇ ಮಣಿಸಿರುವ ಭಾರತವನ್ನು ಭಾರತದಲ್ಲಿ ಸೋಲಿಸುವುದು ಮುಖ್ಯ. ಅದರ ಕಡೆ ಹೆಚ್ಚು ಗಮನ ಕೊಡಿ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಹೇಳಿದ್ದಾರೆ.

Published: 22nd January 2021 03:08 PM  |   Last Updated: 22nd January 2021 05:46 PM   |  A+A-


Graeme Swann

ಗ್ರೇಮ್ ಸ್ವಾನ್

Posted By : Vishwanath S
Source : IANS

ಲಂಡನ್: ಪ್ರಸ್ತುತ ಆಸ್ಟ್ರೇಲಿಯಾ ವಿಶ್ವದ ಅತ್ಯುತ್ತಮ ತಂಡವಲ್ಲ. ಅದರ ಗೀಳನ್ನು ಬಿಟ್ಟು ಆಸ್ಟ್ರೇಲಿಯಾವನ್ನೇ ಮಣಿಸಿರುವ ಭಾರತವನ್ನು ಭಾರತದಲ್ಲಿ ಸೋಲಿಸುವುದು ಮುಖ್ಯ. ಅದರ ಕಡೆ ಹೆಚ್ಚು ಗಮನ ಕೊಡಿ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಹೇಳಿದ್ದಾರೆ.

ಭಾರತದ ನೆಲದಲ್ಲಿ ಟೀಂ ಇಂಡಿಯಾ 2012ರಿಂದ ಅಜೇಯರಾಗಿದ್ದಾರೆ. ಇದನ್ನು ಇಂಗ್ಲೆಂಡ್ ತಂಡ ಗಮನಹರಿಸಬೇಕಾದ ಪ್ರಮುಖ ಅಂಶ ಎಂದು ಮಾಜಿ ಇಂಗ್ಲೆಂಡ್ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರವರಿ 5ರಿಂದ ಪ್ರಾರಂಭವಾಗುವ ನಾಲ್ಕು ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಟೀಂ ಇಂಡಿಯಾವನ್ನು ಎದುರಿಸಲಿದೆ. ಬಳಿಕ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಅಜಿಂಕ್ಯ ರಹಾನೆ ನೇತೃತ್ವದ ತಂಡವು ಆಸ್ಟ್ರೇಲಿಯಾ ನೆಲದಲ್ಲೇ ಆಸೀಸ್ ತಂಡದ ವಿರುದ್ಧದ ಸ್ಮರಣೀಯ ಟೆಸ್ಟ್ ಸರಣಿಯ ಗೆಲುವು ದಾಖಲಿಸಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಸ್ವಾನ್ ಪ್ರಕಾರ, ಭಾರತದಲ್ಲಿ ಭಾರತವನ್ನು ಸೋಲಿಸುವುದು ಈಗ ಆಶಸ್ ಸರಣಿಯನ್ನು ಗೆಲ್ಲುವುದಕ್ಕಿಂತ ಹೆಚ್ಚಿನ ಸಾಧನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನ ಅಪರಿಗಣಿತ ಎಂದು ಹೇಳಬೇಕು ಎಂದರು. 

'ಆ್ಯಶಸ್ ಸರಣಿ ಬರಲಿದೆ' ಎಂದು ಇಂಗ್ಲೆಂಡ್ ಯಾವಾಗಲೂ ಹೇಳುತ್ತದೆ. ಆದರೆ ಅದು ಅಂತಹದ್ದೇನು ಮಹತ್ವದಲ್ಲ. ನೀವು ವಿಶ್ವದ ಅತ್ಯುತ್ತಮ ತಂಡವಾಗಲು ಬಯಸಿದರೆ ಆಸ್ಟ್ರೇಲಿಯಾ ತಂಡವನ್ನು ತಲೆಯಿಂದ ಕಿತ್ತು ಹಾಕಿ. ಪ್ರಸ್ತುತ ಆಸ್ಟ್ರೇಲಿಯಾ ವಿಶ್ವದ ಬಲಿಷ್ಠ ತಂಡವಲ್ಲ ಎಂದು ಹೇಳಿದ್ದಾರೆ.


Stay up to date on all the latest ಕ್ರಿಕೆಟ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp