ದಿನಕ್ಕೆ 1,500 ಶಾರ್ಟ್ ಪಿಚ್ ಎಸೆತ: ಕಠಿಣ ಆಸಿಸ್ ನೆಲದಲ್ಲಿ ಶುಬ್ ಮನ್ ಗಿಲ್ ಸಕ್ಸಸ್ ಸೀಕ್ರೇಟ್ ಬಯಲು!
ಸ್ಟಾರ್ ಬ್ಯಾಟ್ಸ್ ಮನ್ ಗಳೇ ಆಸಿಸ್ ನೆಲದಲ್ಲಿ ರನ್ ಗಳಿಸಲು ತಿಣುಕಾಡುತ್ತಿದ್ದ ಹೊತ್ತಿನಲ್ಲಿ ಸರಾಗವಾಗಿ ರನ್ ಗಳಿಸಿ ಭಾರತದ ಯಶಸ್ಸಿಗೆ ಕಾರಣವಾದ ಶುಬ್ ಮನ್ ಗಿಲ್ ರ ಬ್ಯಾಟಿಂಗ್ ರಹಸ್ಯವನ್ನು ಅವರ ತಂದೆ ಬಟಾಬಯಲು ಮಾಡಿದ್ದಾರೆ.
Published: 22nd January 2021 04:36 PM | Last Updated: 22nd January 2021 05:53 PM | A+A A-

ಶುಬ್ ಮನ್ ಗಿಲ್
ನವದೆಹಲಿ: ಸ್ಟಾರ್ ಬ್ಯಾಟ್ಸ್ ಮನ್ ಗಳೇ ಆಸಿಸ್ ನೆಲದಲ್ಲಿ ರನ್ ಗಳಿಸಲು ತಿಣುಕಾಡುತ್ತಿದ್ದ ಹೊತ್ತಿನಲ್ಲಿ ಸರಾಗವಾಗಿ ರನ್ ಗಳಿಸಿ ಭಾರತದ ಯಶಸ್ಸಿಗೆ ಕಾರಣವಾದ ಶುಬ್ ಮನ್ ಗಿಲ್ ರ ಬ್ಯಾಟಿಂಗ್ ರಹಸ್ಯವನ್ನು ಅವರ ತಂದೆ ಬಟಾಬಯಲು ಮಾಡಿದ್ದಾರೆ.
ಈ ಕುರಿತಂತೆ ಶುಬ್ ಮನ್ ಗಿಲ್ ತಂದೆ ಲಖ್ವಿಂದರ್ ಸಿಂಗ್ ಅವರು ಖಾಸಗಿ ಪತ್ರಿಕೆಯೊಂದಿಗೆ ಮಾತನಾಡಿದ್ದು, ಶುಭಮನ್ ಗಿಲ್ ರ ಬ್ಯಾಕ್ಫುಟ್ ಹೊಡೆತಗಳ ರಹಸ್ಯ ಬಯಲು ಮಾಡಿದ್ದಾರೆ.
ಲಖ್ವಿಂದರ್ ಸಿಂಗ್ ಅವರು ಹೇಳಿರುವಂತೆ ಗಿಲ್ ದಿನಕ್ಕೆ 1,500 ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವ ಮೂಲಕ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ವೃದ್ದಿಸಿಕೊಂಡಿದ್ದಾರಂತೆ. ಅಲ್ಲದೆ ಆಗಾಗ್ಗೆ ಒಂದು ಕ್ರಿಕೆಟ್ ಸ್ಟಂಪ್ ಅನ್ನು ಬ್ಯಾಟ್ ಆಗಿಯೂ ಬಳಸುತ್ತಿದ್ದ ಲಖ್ವಿಂದರ್ ಸಿಂಗ್ ಹೇಳಿದ್ದಾರೆ.
'ಗಿಲ್ 9 ವರ್ಷದವನಿದ್ದಾಗಿನಿಂದಲೂ ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವುದನ್ನು ಕಲಿಸಿದೆ. ಚಾರ್ಪಾಯ್ ಮೇಲೆ ಬಿದ್ದ ಚೆಂಡು ವೇಗವಾಗಿ ಚಲಿಸುತ್ತದೆ. ಈ ಸಂದರ್ಭ ಅವನು ಸ್ಟಂಪ್ ಅನ್ನೇ ಬ್ಯಾಟ್ ರೀತಿ ಬಳಸುತ್ತಿದ್ದನು. ಹಾಗಾಗಿ, ಬ್ಯಾಟ್ ಮಧ್ಯಭಾಗದಿಂದ ಚೆಂಡನ್ನು ಹೊಡೆಯುವುದರ ಅಭ್ಯಾಸ ಮಾಡಲು ಸಾಧ್ಯವಾಯಿತು. ಮ್ಯಾಟಿಂಗ್ ಒದಗಿಸುವ ಹೆಚ್ಚುವರಿ ಬೌನ್ಸ್ ನಿಮ್ಮನ್ನು ಸರಿಯಾದ ಸ್ಥಾನಕ್ಕೆ ಪ್ರೇರೇಪಿಸುತ್ತದೆ. ಮ್ಯಾಟಿಂಗ್ ಪಿಚ್ ಗಳಲ್ಲಿ ಆಡಿದ ಬ್ಯಾಟ್ಸ್ ಮನ್ಗಳು ಬ್ಯಾಕ್ ಫುಟ್ನಲ್ಲಿ ಆಡುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾರೆ, ಇದು ಯಾವುದೇ ಉನ್ನತ ಮಟ್ಟದ ಕ್ರಿಕೆಟ್ಗೆ ಅವಶ್ಯಕವಾಗಿದೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
21 ರ ಹರೆಯದ ಶುಭಮನ್ ಗಿಲ್, ಮೆಲ್ಬೋರ್ನ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಸಿಡ್ನಿಯಲ್ಲಿ ತಮ್ಮ ಚೊಚ್ಚಲ ಅರ್ಧಶತಕವನ್ನು ಸಿಡಿಸಿದರು. ಬ್ರಿಸ್ಬೇನ್ನಲ್ಲಿ ಅಮೋಘ 91 ರನ್ ಗಳಿಸಿ ಭಾರತದ 2-1 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.