ಐತಿಹಾಸಿಕ ಗೆಲುವು: ಟೀಂ ಇಂಡಿಯಾದ 6 ಯುವ ಆಟಗಾರರಿಗೆ ಆನಂದ್ ಮಹೀಂದ್ರಾ ಥಾರ್ ಎಸ್ ಯುವಿ ಗಿಫ್ಟ್!

ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆದ್ದಿದ್ದಕ್ಕಾಗಿ ಟೀಂ ಇಂಡಿಯಾದ ಯುವ ಆಟಗಾರರನ್ನು ಇಡೀ ಜಗತ್ತು ಪ್ರಶಂಸಿಸುತ್ತಿದ್ದು, ಇದೀಗ ಉದ್ಯಮಿ...

Published: 23rd January 2021 03:41 PM  |   Last Updated: 23rd January 2021 05:42 PM   |  A+A-


team-india-gabba

ಸರಣಿ ಗೆದ್ದ ಭಾರತ ತಂಡ

Posted By : Lingaraj Badiger
Source : Online Desk

ಮುಂಬೈ: ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆದ್ದಿದ್ದಕ್ಕಾಗಿ ಟೀಂ ಇಂಡಿಯಾದ ಯುವ ಆಟಗಾರರನ್ನು ಇಡೀ ಜಗತ್ತು ಪ್ರಶಂಸಿಸುತ್ತಿದ್ದು, ಇದೀಗ ಉದ್ಯಮಿ ಆನಂದ್ ಮಹೀಂದ್ರಾ ಅವರು ಮಹೀಂದ್ರಾ ಥಾರ್ ಎಸ್‌ಯುವಿ ಕಾರನ್ನು ಆರು ಯುವ ಆಟಗಾರರಿಗೆ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು, ಆಸೀಸ್ ನಲ್ಲಿ ನಡೆದ ಇತ್ತೀಚಿನ ಐತಿಹಾಸಿಕ ಸರಣಿಯಲ್ಲಿ ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕೆ ಪೂರಕವಾಗಿ ಈ ಗಿಫ್ಟ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಮೊಹಮ್ಮದ್ ಸಿರಾಜ್, ಟಿ ನಟರಾಜನ್, ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಶುಬ್ಮನ್ ಗಿಲ್ ಮತ್ತು ನವದೀಪ್ ಸೈನಿ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು ಮತ್ತು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಆನಂದ್ ಮಹೀಂದ್ರಾ ಅವರು ಆಟಗಾರರಿಗೆ ಗಿಫ್ಟ್ ನೀಡುತ್ತಿರುವುದು ಇದೇ ಮೊದಲೇನಲ್ಲ. ಅವರು ಈ ಹಿಂದೆ 2017ರಲ್ಲಿ ಸೂಪರ್ ಸರಣಿ ಪ್ರಶಸ್ತಿ ಗೆದ್ದ ನಂತರ ಕಿಡಂಬಿ ಶ್ರೀಕಾಂತ್‌ ಅವರಿಗೆ ಟಿಯುವಿ 300 ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Stay up to date on all the latest ಕ್ರಿಕೆಟ್ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp