'ಕುಟುಂಬಕ್ಕೆ ಅವಕಾಶ ಕೊಡದಿದ್ದರೆ, ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಹೋಗುವುದೇ ಇಲ್ಲ' ಎಂದಿದ್ದರಂತೆ ರವಿಶಾಸ್ತ್ರಿ!
ಕಳೆದ ಬಾರಿ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆಡುವ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರ ಕುಟುಂಬದವರನ್ನು ಕರೆದುಕೊಂಡು ಹೋಗಲು ಅವಕಾಶ ನೀಡಬಹುದೇ, ಇಲ್ಲವೇ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಆ ಸಮಯದಲ್ಲಿ ಕುಟುಂಬದವರು ಆಟಗಾರರ ಜೊತೆ ಹೋಗಲು ಕೋಚ್ ರವಿ ಶಾಸ್ತ್ರಿ ಅವಕಾಶ ಮಾಡಿಕೊಟ್ಟಿದ್ದರು.
Published: 23rd January 2021 08:53 AM | Last Updated: 23rd January 2021 12:31 PM | A+A A-

ಡ್ರೆಸ್ಸಿಂಗ್ ರೂಂನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಹಾಡಿಹೊಗಳಿದ ಕೋಚ್ ರವಿಶಾಸ್ತ್ರಿ
ನವದೆಹಲಿ: ಕಳೆದ ಬಾರಿ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆಡುವ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರ ಕುಟುಂಬದವರನ್ನು ಕರೆದುಕೊಂಡು ಹೋಗಲು ಅವಕಾಶ ನೀಡಬಹುದೇ, ಇಲ್ಲವೇ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಆ ಸಮಯದಲ್ಲಿ ಕುಟುಂಬದವರು ಆಟಗಾರರ ಜೊತೆ ಹೋಗಲು ಕೋಚ್ ರವಿ ಶಾಸ್ತ್ರಿ ಅವಕಾಶ ಮಾಡಿಕೊಟ್ಟಿದ್ದರು.
ಆರ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಫೀಲ್ಡ್ ಕೋಚ್ ಆರ್ ಶ್ರೀಧರ್, ಕೊನೆ ಕ್ಷಣದಲ್ಲಿ ರವಿಶಾಸ್ತ್ರಿಯವರು ಮಧ್ಯೆ ಪ್ರವೇಶಿಸಿ ತಮಗೆ ಹೇಗೆ ನೆರವಾದರು, ಕುಟುಂಬದವರು ಕೂಡ ಬರಲು ಹೇಗೆ ಅನುವು ಮಾಡಿಕೊಟ್ಟರು ಎಂದು ವಿವರಿಸಿದ್ದಾರೆ.
ನಾವು ದುಬೈಯಲ್ಲಿ ಕ್ವಾರಂಟೈನ್ ನಲ್ಲಿದ್ದಾಗ ಆಸ್ಟ್ರೇಲಿಯಾಕ್ಕೆ ಹೊರಡುವ 48 ಗಂಟೆಗಳ ಮುನ್ನ ಹಠಾತ್ತಾಗಿ ಕುಟುಂಬದವರು ಹೋಗಲು ಬಿಡುವುದಿಲ್ಲ ಎಂದು ಘೋಷಿಸಿಬಿಟ್ಟರು. ಆ ಸಮಯದಲ್ಲಿ ಏನು ಮಾಡುವುದು, ನಾವು ದುಬೈ. ಭಾರತ, ಆಸ್ಟ್ರೇಲಿಯಾ ಎಂದು ಅಲ್ಲಿನ ವೇಳೆಗೆ ಅನುಗುಣವಾಗಿ ರಾತ್ರಿ ಹೊತ್ತು ಸಮಯ ಹೊಂದಿಸಿಕೊಂಡು ಕುಟುಂಬದವರ ಜೊತೆ ಮಾತನಾಡಬೇಕಾಗಿತ್ತು. ನಮ್ಮಲ್ಲಿ 7 ಮಂದಿ ಆಟಗಾರರು ತಮ್ಮ ಪತ್ನಿ, ಮಕ್ಕಳನ್ನು ಕರೆತಂದಿದ್ದರು. ಆಗ ರವಿಶಾಸ್ತ್ರಿಯವರು ಬಂದು ಜೂಮ್ ಮೀಟಿಂಗ್ ನಡೆಸಿದರು, ನಾವು ದುಬೈಯಲ್ಲಿ ಕ್ವಾರಂಟೈನ್ ರೂಂನಲ್ಲಿದ್ದೆವು.
ಕುಟುಂಬ ಸದಸ್ಯರನ್ನು ಬಿಡದಿದ್ದರೆ ನಾವು ಆಸ್ಟ್ರೇಲಿಯಾಕ್ಕೆ ಹೋಗುವುದಿಲ್ಲ ಎಂದು ರವಿಶಾಸ್ತ್ರಿ ಬಿಸಿಸಿಐಗೆ ಖಡಾಖಂಡಿತವಾಗಿ ಹೇಳಿದರು. ಆಸ್ಟ್ರೇಲಿಯಾ ಸರ್ಕಾರದ ಪ್ರತಿನಿಧಿಗಳ ಜೊತೆ ರಾತ್ರೋರಾತ್ರಿ ಮಾತನಾಡಿ ಹೇಗೋ ಅನುಮತಿ ಗಿಟ್ಟಿಸಿಕೊಂಡೆವು ಎಂದು ಶ್ರೀಧರ್ ವಿವರಿಸುತ್ತಾರೆ.