ಶ್ರೀಲಂಕಾ ಸ್ಪಿನ್ನರ್ ಗಳನ್ನೆದುರಿಸಲು ಇಂಗ್ಲೆಂಡ್ ಆಟಗಾರರಿಗೆ ದ್ರಾವಿಡ್ ಇ-ಮೇಲ್ ಹಂಚಿಕೊಂಡ ಕೆವಿನ್ ಪೀಟರ್ಸನ್

ಇಂಗ್ಲೆಂಡ್- ಶ್ರೀಲಂಕಾ ಟೆಸ್ಟ್ ನಲ್ಲಿ ಲಂಕಾ ಸ್ಪಿನ್ನರ್ ಗಳನ್ನು ಎದುರಿಸಲು ಇಂಗ್ಲೆಂಡ್ ನ ಆರಂಭಿಕ ಆಟಗಾರರಾದ ಡಾಮ್ ಸಿಬ್ಲಿ ಮತ್ತು ಝಾಕ್ ಕ್ರಾವ್ಲಿ ಪರದಾಡುತ್ತಿದ್ದಾಗ ಇಂಗ್ಲೆಂಡ್ ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ತಮಗೆ ರಾಹುಲ್ ದ್ರಾವಿಡ್ ಕಳಿಸಿದ್ದ ಇ-ಮೇಲ್ ನ್ನು ಹಂಚಿಕೊಂಡಿದ್ದಾರೆ. 

Published: 24th January 2021 06:20 PM  |   Last Updated: 25th January 2021 12:33 PM   |  A+A-


Kevin Pietersen

ಕೆವಿನ್ ಪೀಟರ್ ಸೆನ್ (ಸಂಗ್ರಹ ಚಿತ್ರ)

Posted By : Srinivas Rao BV
Source : Online Desk

ಇಂಗ್ಲೆಂಡ್- ಶ್ರೀಲಂಕಾ ಟೆಸ್ಟ್ ನಲ್ಲಿ ಲಂಕಾ ಸ್ಪಿನ್ನರ್ ಗಳನ್ನು ಎದುರಿಸಲು ಇಂಗ್ಲೆಂಡ್ ನ ಆರಂಭಿಕ ಆಟಗಾರರಾದ ಡಾಮ್ ಸಿಬ್ಲಿ ಮತ್ತು ಝಾಕ್ ಕ್ರಾವ್ಲಿ ಪರದಾಡುತ್ತಿದ್ದಾಗ ಇಂಗ್ಲೆಂಡ್ ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ತಮಗೆ ರಾಹುಲ್ ದ್ರಾವಿಡ್ ಕಳಿಸಿದ್ದ ಇ-ಮೇಲ್ ನ್ನು ಹಂಚಿಕೊಂಡಿದ್ದಾರೆ. 

ದ್ರಾವಿಡ್ ತಮಗೆ ಕಳಿಸಿದ್ದ ಇ-ಮೇಲ್ ಇಂಗ್ಲೆಂಡ್ ಆಟಗಾರರಿಗೆ ಲಂಕಾ ಸ್ಪಿನ್ನರ್ ಗಳನ್ನು ಎದುರಿಸಲು ಸಾಧ್ಯವಾಗಲಿದೆ ಎಂದು ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ. 

ಈ ಹಿಂದೆ ಲಂಕಾ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿದ್ದ ಡಾಮ್ ಸಿಬ್ಲಿ ಮತ್ತು ಝಾಕ್ ಕ್ರಾವ್ಲಿ ಎರಡನೇ ಟೆಸ್ಟ್ ನಲ್ಲಿಯೂ ಸಹ ಪರದಾಡಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

ಇಂಗ್ಲೆಂಡ್ ಕ್ರಿಕೆಟ್ ನ್ನು ಟ್ಯಾಗ್ ಮಾಡಿರುವ ಕೆವಿನ್ ಪೀಟರ್ಸನ್ ದ್ರಾವಿಡ್ ಈ ಹಿಂದೆ ನನಗೆ ಕಳಿಸಿದ್ದ ಇ-ಮೇಲ್ ನ್ನು ಪ್ರಿಂಟ್ ಮಾಡಿ ಕ್ರಿಕೆಟಿಗರಿಗೆ ನೀಡಿ ಉಪಯೋಗವಾಗಬಹುದು ಎಂದು ಹೇಳಿದ್ದಾರೆ. 

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಕೆವಿನ್ ಪೀಟರ್ಸನ್ ಡಾಮ್ ಸಿಬ್ಲಿ- ಕ್ರಾವ್ಲಿ ನಿಮಗೆ ದ್ರಾವಿಡ್ ಹಿಂದೊಮ್ಮೆ ನನಗೆ ಸ್ಪಿನ್ನರ್ ಗಳನ್ನು ಎದುರಿಸಲು ಕೆಲವು ಸಲಹೆಗಳನ್ನು ನೀಡಿ ಕಳಿಸಿದ್ದ ಮೇಲ್ ನ್ನು ನಿಮಗೂ ಕಳಿಸಬೇಕೆಂದು ಹೇಳಿದ್ದರು.

ತಾವು ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದಾಗ ಸ್ಪಿನ್ನರ್ ಗಳನ್ನು ಎದುರಿಸಲು ಕಷ್ಟವಾದಾಗ ದ್ರಾವಿಡ್ ಬಳಿ ಕೆವಿನ್ ಪೀಟರ್ಸನ್ ಸಲಹೆ ಕೇಳಿದ್ದರು. ಆಗ ದ್ರಾವಿಡ್ ವಿವರವಾದ ಸಲಹೆ ಸೂಚನೆಗಳನ್ನು ಇ-ಮೇಲ್ ಕಳಿಸಿದ್ದನ್ನು ಕೆವಿನ್ ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ.


Stay up to date on all the latest ಕ್ರಿಕೆಟ್ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp