ರಾಹುಲ್ ದ್ರಾವಿಡ್ ಇಮೇಲ್ 'ಪ್ರಿಂಟ್' ತೆಗೆದು ಇಂಗ್ಲೆಂಡ್ ಆಟಗಾರರಿಗೆ ನೀಡಿ: ಕೆವಿನ್ ಪೀಟರ್ಸನ್!
ಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿರುವ ಇಂಗ್ಲೆಂಡ್ ತಂಡಕ್ಕೆ ರಾಹುಲ್ ದ್ರಾವಿಡ್ ಮಾಡಿರುವ ಇ-ಮೇಲ್ ಅನ್ನು ಪ್ರಿಂಟ್ ತೆಗೆದುಕೊಡಿ ಎಂದು ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
Published: 24th January 2021 01:08 AM | Last Updated: 24th January 2021 01:08 AM | A+A A-

ರಾಹುಲ್ ದ್ರಾವಿಡ್-ಕೆವಿನ್ ಪೀಟರ್ಸನ್
ನವದೆಹಲಿ: ಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿರುವ ಇಂಗ್ಲೆಂಡ್ ತಂಡಕ್ಕೆ ರಾಹುಲ್ ದ್ರಾವಿಡ್ ಮಾಡಿರುವ ಇ-ಮೇಲ್ ಅನ್ನು ಪ್ರಿಂಟ್ ತೆಗೆದುಕೊಡಿ ಎಂದು ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ಲಂಕಾದಲ್ಲಿ ಸ್ಪಿನ್ನರ್ ಗಳ ಎದುರಿಸಲು ಪರದಾಡುತ್ತಿರುವ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳಿಗೆ ಕಿವಿಮಾತು ಹೇಳಿರುವ ಕೆಪಿ ಸ್ಪಿನ್ನರ್ಗಳಿಗೆ ಹೇಗೆ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಮಾಡಬೇಕೆಂದು ರಾಹುಲ್ ದ್ರಾವಿಡ್ ಕಳುಹಿಸಿರುವ ಇಮೇಲ್ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳಾದ ಝ್ಯಾಕ್ ಕ್ರಾವ್ಲಿ ಹಾಗೂ ಡಾಮ್ ಸಿಬ್ಲಿಗೆ ನೀಡಬೇಕೆಂದು ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪೀಟರ್ಸನ್, 'ರಾಹುಲ್ ದ್ರಾವಿಡ್ ಅವರ ಇಮೇಲ್ನಿಂದ ಸ್ಪಿನ್ ಬೌಲಿಂಗ್ಗೆ ನನ್ನ ಬ್ಯಾಟಿಂಗ್ ತುಂಬಾ ಸುಧಾರಣೆಯಾಗಿತ್ತು. ಸ್ಪಿನ್ಗೆ ಆಡುವ ಕುರಿತು ರಾಹುಲ್ ದ್ರಾವಿಡ್ ಕಳುಹಿಸಿರುವ ಇಮೇಲ್ ಅನ್ನು ಕ್ರಾವ್ಲಿ ಹಾಗೂ ಸಿಬ್ಲಿ ಪತ್ತೆ ಹಚ್ಚುವ ಅಗತ್ಯವಿದೆ. ಹೇ ಇಂಗ್ಲೆಂಡ್ ಕ್ರಿಕೆಟ್, ಇದನ್ನು ಪ್ರಿಂಟ್ ತೆಗೆದುಕೊಂಡು ಸಿಬ್ಲಿ ಹಾಗೂ ಕ್ರಾವ್ಲಿಗೆ ನೀಡಿ. ಸ್ಪಿನ್ ಲೆನ್ತ್ ಬಗ್ಗೆ ಚರ್ಚೆ ನಡೆಸಬೇಕೆಂದರೆ ಅವರು ನನಗೆ ಕರೆ ಮಾಡಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ಗಳಾದ ಮಾಂಟಿ ಪನೇಸಾರ್ ಹಾಗೂ ಗ್ರೇಮ್ ಸ್ವಾನ್ ಅವರಿಗೆ ಫ್ರಂಟ್ ಫೂಟ್ನಲ್ಲಿ ಚೆಂಡನ್ನು ಪ್ಯಾಡ್ ಮೇಲೆ ಹಾಕಿಕೊಳ್ಳದೆ ಆಡುವುದು ಹೇಗೆಂದು ಇಮೇಲ್ನಲ್ಲಿ ರಾಹುಲ್ ದ್ರಾವಿಡ್, ಕೆವಿನ್ ಪೀಟರ್ಸನ್ಗೆ ಸಲಹೆ ನೀಡಿದ್ದರು. ಪೀಟರ್ಸನ್ ಅತ್ಯುತ್ತಮ ಆಟಗಾರ. ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಹಾಗೂ ಸ್ಪಿನ್ನರ್ಗಳ ಕೈಯಿಂದ ಲೆನ್ತ್ ಅನ್ನು ಪಿಕ್ ಮಾಡಬೇಕು ಎಂದು ಇಮೇಲ್ ಕೊನೆಯ ಭಾಗದಲ್ಲಿ ದ್ರಾವಿಡ್ ಇಂಗ್ಲೆಂಡ್ ಆಟಗಾರನನ್ನು ಗುಣಗಾನ ಮಾಡಿದ್ದರು.
ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಕೊನೆಯ ಅವಧಿಯಲ್ಲಿ ಆತಿಥೇಯರ ಸ್ಪಿನ್ನರ್ ಲಸಿತ್ ಎಂಬುಲ್ಡೆನ್ಯಾ ಅವರಿಗೆ ಕೆಟ್ಟದಾಗಿ ಈ ಇಬ್ಬರೂ ಬ್ಯಾಟ್ಸ್ಮನ್ಗಳು ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೆ ಇಂಗ್ಲೆಂಡ್ ಮಾಜಿ ಬ್ಯಾಟ್ಸ್ಮನ್ ಪೀಟರ್ಸನ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.