ಟೀಂ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್ ದಾಂಪತ್ಯ ಜೀವನಕ್ಕೆ ಪ್ರವೇಶ!

ಟೀಂ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ವೈಶಾಲಿ ವಿಶ್ವೇಶರನ್ ರನ್ನು ಇಂದು ವಿವಾಹವಾಗಿದ್ದಾರೆ.

Published: 27th January 2021 11:59 PM  |   Last Updated: 28th January 2021 12:47 PM   |  A+A-


Vijay Shankar

ವಿಜಯ ಶಂಕರ್ ಮದುವೆ

Posted By : Srinivasamurthy VN
Source : PTI

ಚೆನ್ನೈ: ಟೀಂ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ವೈಶಾಲಿ ವಿಶ್ವೇಶರನ್ ರನ್ನು ಇಂದು ವಿವಾಹವಾಗಿದ್ದಾರೆ.

ಚೆನ್ನೈನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ವಿಜಯ್ ಶಂಕರ್ ತಮ್ಮ ಬಹುಕಾಲದ ಗೆಳತಿ ವೈಶಾಲಿ ವಿಶ್ವೇಶರನ್ ರನ್ನು ಮದುವೆಯಾದರು.  ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ವೈಶಾಲಿ ವಿಶ್ವೇಶ್ವರನ್ ರನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಬಂಧುಮಿತ್ರರ ಸಮ್ಮುಖದಲ್ಲಿ ವಿವಾಹವಾದರು. 

ಮಾರಕ ಕೊರೋನಾ ವೈರಸ್ ಹಿನ್ನಲೆಯಲ್ಲಿ ಕೋವಿಡ್-19 ಮಾರ್ಗಸೂಚಿ  ಅನ್ವಯ ಕೆಲವೇ ಕುಟುಂಬಸ್ಥರು ಮತ್ತು ಬಂಧುಮಿತ್ರರ ಸಮುಖದಲ್ಲಿ ವಿವಾಹ ನೆರವೇರಿಸಲಾಯಿತು. 

ತಮಿಳುನಾಡಿನ ಅಯ್ಯರ್ ಕುಟುಂಬದವರಾದ ವಿಜಯ್ ಶಂಕರ್ ಹಾಗೂ ವೈಶಾಲಿ ಅವರ ನಿಶ್ಚಿತಾರ್ಥ ಸಮಾರಂಭ ಕಳೆದ ಆಗಸ್ಟ್ ತಿಂಗಳಲ್ಲಿ ನಡೆದಿತ್ತು. 29 ವರ್ಷದ ವಿಜಯ್ ಶಂಕರ್, ಸಯ್ಯದ್ ಮುಷ್ಠಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡಿನ ಪರ ಲೀಗ್  ಹಂತದಲ್ಲಿ ಆಡಿದ್ದರು. ಬಳಿಕ ಮದುವೆ ಹಿನ್ನೆಲೆಯಲ್ಲಿ ನಾಕೌಟ್ ಹಂತದಿಂದ ಹಿಂದೆ ಸರಿದಿದ್ದಾರೆ. ಕೋಲ್ಕತಾದಲ್ಲಿ ನಡೆದ ಲೀಗ್ ಹಂತದಲ್ಲಿ ವಿಜಯ್ ಶಂಕರ್ 5 ಪಂದ್ಯಗಳನ್ನೂ ಆಡಿದ್ದರು. ನಾಕೌಟ್ ಹಂತಕ್ಕೆ ಅಲಭ್ಯತೆ ಕುರಿತು ವಿಜಯ್ ಶಂಕರ್ ಈ ಮೊದಲೇ ತಮಿಳುನಾಡು ಕ್ರಿಕೆಟ್ ಮಂಡಳಿಗೆ ತಿಳಿಸಿದ್ದರು.

2019ರಲ್ಲಿ ಬ್ರಿಟನ್ ನಲ್ಲಿ ನಡೆದಿದ್ದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವಿಜಯ್ ಶಂಕರ್ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು.  ಭಾರತದ ಮತ್ತೋರ್ವ ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿವಾಹ ಕೂಡ ಇತ್ತೀಚೆಗಷ್ಟೇ ದಂತವೈದ್ಯೆ, ಡ್ಯಾನ್ಸರ್ ಧನಶ್ರೀ ವರ್ಮರನ್ನು ವಿವಾಹವಾಗಿದ್ದರು.  
 

Stay up to date on all the latest ಕ್ರಿಕೆಟ್ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp