
ಬಿಸಿಸಿಐ
ಮುಂಬೈ: ದೇಶದ ಎಲ್ಲ ಕ್ರಿಕೆಟ್ ಪಟುಗಳಿಗೂ ಶೀಘ್ರ, ಆದ್ಯತೆ ಮೇರೆಗೆ ಕೊರೋನ ಲಸಿಕೆ ನೀಡುವಂತೆ ಕೇಂದ್ರಕ್ಕೆ ಬಿಸಿಸಿಐ ಮನವಿ ಮಾಡಿದೆ.
ಮಹಾಮಾರಿ ಕೊರೊನಾ ವಿರುದ್ಧ ಹೋರಾಡಿದ ಕೊರೊನಾ ವಾರಿಯರ್ ಗಳಿಗೆ ದೇಶಾದ್ಯಂತ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು ಇದರ ಜೊತೆಗೆ ಶೀಘ್ರದಲ್ಲಿಯೇ ದೇಶದ ಕ್ರಿಕೆಟಿಗರಿಗೂ ಕರೊನಾ ಲಸಿಕೆ ನೀಡಲು ಕ್ರಮ ಕೈಗೊಳ್ಳುವಂತೆ ಕೇಂದ್ರವನ್ನು ಆಗ್ರಹಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಕ್ರಿಕೆಟ್ ಆಟಗಾರರಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಕೊರೊನಾ ವಾರಿಯರ್ ಗಳ ಸರದಿ ಮುಗಿದ ನಂತರ ಆದ್ಯತೆ ಮೇರೆಗೆ ಕ್ರಿಕೆಟ್ ತಂಡದ ಸದಸ್ಯರಿಗೂ ಲಸಿಕೆ ಕೊಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.