ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್!
ಇತ್ತೀಚೆಗೆ ಆ್ಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದ ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Published: 31st January 2021 12:18 PM | Last Updated: 31st January 2021 12:18 PM | A+A A-

ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೋಲ್ಕತಾ: ಇತ್ತೀಚೆಗೆ ಆ್ಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದ ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೋಲ್ಕತಾದ ಅಪೋಲೊ ಆಸ್ಪತ್ರೆಯಿಂದ ಸೌರವ್ ಗಂಗೂಲಿ ಅವರು ಡಿಸ್ಚಾರ್ಜ್ ಆಗಿದ್ದು, ಸ್ಟಂಟ್ ಅಳವಡಿಸಿರುವುದರಿಂದ ಅವರನ್ನು ಮನೆಯಲ್ಲೇ ನಿಗಾದಲ್ಲಿರಿಸಲಾಗುತ್ತದೆ. ಇದಕ್ಕಾಗಿ ತಜ್ಞ ವೈದ್ಯರು ಗಂಗೂಲಿ ಅವರ ನಿವಾಸಕ್ಕೆ ತೆರಳಿ ಆಗಾಗ ತಪಾಸಣೆ ನಡೆಸಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
West Bengal: BCCI Chief Sourav Ganguly discharged from Apollo Hospital in Kolkata following angioplasty.
— ANI (@ANI) January 31, 2021
"He is absolutely right," says Dr Rana Dasgupta of Apollo Hospital. pic.twitter.com/YE9kf3BINA
'ಗಂಗೂಲಿ ಅವರ ಆರೋಗ್ಯ ಉತ್ತಮವಾಗಿದ್ದು. ಅವರು ಚಿಕಿತ್ಸೆಗೆ ಅತ್ಯುತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರ ಹೃದಯವು ಸಾಮಾನ್ಯ ವ್ಯಕ್ತಿಯಂತೆ ಉತ್ತಮ ಸ್ಥಿತಿಯಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಅವರ ಸಹಜ ಜೀವನ ಸ್ಥಿತಿಗೆ ಮರಳಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಸೌರವ್ ಗಂಗೂಲಿ ಅವರ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದ ಕೋಲ್ಕತಾದ ಅಪೋಲೋ ಆಸ್ಪತ್ರೆ, ಸೌರವ್ ಗಂಗೂಲಿ ಆರೋಗ್ಯ ಸ್ಥಿರವಾಗಿದ್ದು, ಅವರ ಮೇಲೆ ನಡೆಸಬೇಕಾದ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳು ಸಾಮಾನ್ಯ ಸ್ಥಿತಿಗೆ ಬಂದರೆ ಅವರನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಪ್ರಸ್ತುತ ಅವರ ಎಲ್ಲಾ ಪ್ರಮುಖ ನಿಯತಾಂಕಗಳು ಸ್ಥಿರವಾಗಿವೆ. ಸೌರವ್ ಗಂಗೂಲಿ ಅವರಿಗೆ ಖ್ಯಾತ ಹೃದ್ರೋಗ ತಜ್ಞರಾದ ಕರ್ನಾಟಕ ಮೂಲದ ಡಾ.ದೇವಿ ಶೆಟ್ಟಿ ಮತ್ತು ಖ್ಯಾತ ವೈದ್ಯ ಡಾ.ಅಶ್ವಿನ್ ಮೆಹ್ತಾ ಎರಡು ಸ್ಟೆಂಟ್ ಗಳನ್ನು ಹಾಕಲಾಗಿದ್ದು, ತೀವ್ರ ನಿಗಾ ಘಟಕದಿಂದ ಖಾಸಗಿ ಕೊಠಡಿಗೆ ಇಂದು ಸ್ಥಳಾಂತರ ಮಾಡಲಾಗಿದೆ. ಗಂಗೂಲಿ ಅವರ ಹೃದಯದ ಕಾರ್ಯವಿಧಾನ ಅಸಮರ್ಪಕವಾಗಿತ್ತು. ಇದೀಗ ಅವರು ಆರೋಗ್ಯವಾಗಿದ್ದು, ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಹೇಳಿತ್ತು.
ಹೃದಯಾಘಾತಕ್ಕೊಳಗಾಗಿದ್ದ ಗಂಗೂಲಿ ಅವರು ತಿಂಗಳಲ್ಲಿ 2ನೇ ಬಾರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಗುರುವಾರ ಅವರಿಗೆ ಹೊಸ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು. ಅವರಿಗೆ 2 ಸ್ಟಂಟ್ ಗಳನ್ನು ಅಳವಡಿಸಲಾಗಿದೆ. ಅವರ ಮುಚ್ಚಿ ಹೋಗಿರುವ ಪರಿಧಮನಿಯ ಅಪಧಮನಿಗಳನ್ನು ತೆರವುಗೊಳಿಸಲು ಇನ್ನೂ ಎರಡು ಸ್ಟೆಂಟ್ಗಳನ್ನು ಅಳವಡಿಸಲಾಗಿದೆ.