ಶ್ರೀಲಂಕಾ-ಭಾರತ ಕ್ರಿಕೆಟ್ ಸರಣಿಗೆ ಕೋವಿಡ್ ಕರಿನೆರಳು: ಡೇಟಾ ವಿಶ್ಲೇಷಕರಿಗೆ ಸೋಂಕು ದೃಢ!

ಶ್ರೀಲಂಕಾ ಕ್ರಿಕೆಟ್ ತಂಡದ ಡಾಟಾ ವಿಶ್ಲೇಷಕ ಜಿಟಿ ನಿರೋಶನ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಲಂಕಾದಲ್ಲೇ ನಡೆಯಲಿರುವ ಶ್ರೀಲಂಕಾ- ಭಾರತ ನಡುವಿನ ನಿಯಮಿತ ಓವರ್ ಗಳ ಸರಣಿಗೆ ಕರಿನೆರಳು ಆವರಿಸಿದೆ. 
ಲಂಕಾ ತಂಡ
ಲಂಕಾ ತಂಡ

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಡೇಟಾ ವಿಶ್ಲೇಷಕ ಜಿಟಿ ನಿರೋಶನ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಲಂಕಾದಲ್ಲೇ ನಡೆಯಲಿರುವ ಶ್ರೀಲಂಕಾ- ಭಾರತ ನಡುವಿನ ನಿಯಮಿತ ಓವರ್ ಗಳ ಸರಣಿಗೆ ಕರಿನೆರಳು ಆವರಿಸಿದೆ. 

ಶ್ರೀಲಂಕಾ ಕ್ರಿಕೆಟ್ ಮಂಡಳಿ ಜು.09 ರಂದು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, "ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಗೆ ಕೋವಿಡ್ ಸೋಂಕು ತಗುಲಿದ ಬೆನ್ನಲ್ಲೇ ತಂಡದ ಡಾಟಾ ವಿಶ್ಲೇಷಕರಿಗೂ ಕೋವಿಡ್-19 ಸೋಂಕು ತಗುಲಿದ್ದು ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಹೇಳಿದೆ. 

ರಾಷ್ಟ್ರೀಯ ಆಟಗಾರರು, ಕೋಚ್, ಸಹಾಯಕ ಸಿಬ್ಬಂದಿಗಳಿಗೆ ನಡೆಸಿದ ಪಿಸಿಆರ್ ಪರೀಕ್ಷೆ ವರದಿಯಲ್ಲಿ ಕೊರೋನಾ ಸೋಂಕು ಡೇಟಾ ವಿಶ್ಲೇಷಕರಿಗೆ ತಗುಲಿರುವುದು ದೃಢಪಟ್ಟಿದೆ. 

ಇಂಗ್ಲೆಂಡ್ ಪ್ರವಾಸ ಮುಕ್ತಾಯಗೊಳಿಸಿದ್ದ ಲಂಕಾ ತಂಡ ತವರಿಗೆ ಆಗಮಿಸಿದ 48 ಗಂಟೆಗಳಲ್ಲಿಯೇ ಬ್ಯಾಟಿಂಗ್ ಕೋಚ್ ಗೆ  ಸೋಂಕು ದೃಢಪಟ್ಟಿತ್ತು. ಭಾರತ-ಲಂಕಾ ನಡುವಿನ ಸರಣಿ ಪ್ರಾರಂಭವಾಗುವುದಕ್ಕೆ ಒಂದು ವಾರಕ್ಕೂ ಕಡಿಮೆ ಅವಧಿ ಇದೆ. ಕ್ವಾರಂಟೈನ್ ನಲ್ಲಿರುವ ಇತರ ಆಟಗಾರರಿಗೂ ಟೆಸ್ಟ್ ಮಾಡಿಸಲಾಗಿದೆ. ಲಂಕಾ-ಭಾರತದ ನಡುವೆ ಜು.13 ರಿಂದ ಏಕದಿನ ಸರಣಿ ಪ್ರಾರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com