ಐಸಿಸಿ ಸಿಇಒ ಮನು ಸಾಹ್ನಿ ರಾಜೀನಾಮೆ

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಿಇಒ ಮನು ಸಾಹ್ನಿ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಂತರಿಕ ತನಿಖೆಯ ಸಮಯದಲ್ಲಿ ಅವರ "ಅಪಾರದರ್ಶಕ ನಡವಳಿಕೆ" ಪರಿಗಣನೆಗೆ ಬಂದ ನಾಲ್ಕು ತಿಂಗಳ ನಂತರ, ವಿಶ್ವ ಕ್ರಿಕೆಟ್ ನಿಯಂತ್ರಕ ಅವರನ್ನು ರಜೆ ಮೇಲೆ ಕಳುಹಿಸಲು ತೀರ್ಮಾನಿಸಿತ್ತು.
ಮನು ಸಾಹ್ನಿ
ಮನು ಸಾಹ್ನಿ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಿಇಒ ಮನು ಸಾಹ್ನಿ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಂತರಿಕ ತನಿಖೆಯ ಸಮಯದಲ್ಲಿ ಅವರ "ಅಪಾರದರ್ಶಕ ನಡವಳಿಕೆ" ಪರಿಗಣನೆಗೆ ಬಂದ ನಾಲ್ಕು ತಿಂಗಳ ನಂತರ, ವಿಶ್ವ ಕ್ರಿಕೆಟ್ ನಿಯಂತ್ರಕ ಅವರನ್ನು ರಜೆ ಮೇಲೆ ಕಳುಹಿಸಲು ತೀರ್ಮಾನಿಸಿತ್ತು.

"ಮುಖ್ಯ ಕಾರ್ಯನಿರ್ವಾಹಕ ಮನು ಸಾಹ್ನಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ರಜೆ ಪಡೆಯಲಿದ್ದಾರೆ. ಐಸಿಸಿ ಮಂಡಳಿಯೊಂದಿಗೆ ನಿಕಟವಾಗಿ ಕೆಲಸ ಮಾಡುವ ನಾಯಕತ್ವದ ತಂಡದಿಂದ ಜೆಫ್ ಅಲಾರ್ಡಿಸ್ ಹಂಗಾಮಿ ಸಿಇಒ ಆಗಿ ಮುಂದುವರಿಯಲಿದ್ದಾರೆ" ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಸಹೋದ್ಯೋಗಿಗಳೊಂದಿಗಿನ "ಅಪಾರದರ್ಶಕ ನಡವಳಿಕೆ" ಯ ಬಗ್ಗೆ ಪರಿಶೀಲನೆಗೆ ಒಳಪಟ್ಟ ನಂತರ ಸಾಹ್ನಿ ಅವರನ್ನು ಮಾರ್ಚ್ ನಲ್ಲಿ "ರಜೆ" ಮೇಲೆ ಕಳುಹಿಸಲಾಗಿದೆ. ತನ್ನ ವಿರುದ್ಧ ಆಡಳಿತ ಮಂಡಳಿಯ ತನಿಖೆಯನ್ನು "ಪೂರ್ವನಿಯೋಜಿತ" ಎಂದು ಸಾಹ್ನಿ ಹೇಳಿದ್ದಾರೆ.

2019 ರಲ್ಲಿ ಐಸಿಸಿ ವಿಶ್ವಕಪ್ ನಂತರ 2022 ರವರೆಗೆ ಅಧಿಕಾರಾವಧಿಯಲ್ಲಿ ಡೇವ್ ರಿಚರ್ಡ್‌ಸನ್‌ ಬದಲಿಯಾಗಿ ಸಾಹ್ನಿ, ವಿವಿಧ ನೀತಿ ನಿರ್ಧಾರಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಭಾವಿ ಕ್ರಿಕೆಟ್ ಮಂಡಳಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಲ್ಲ ಎಂದು ತಿಳಿದುಬಂದಿದೆ. ಕಳೆದ ವರ್ಷ ಹೊಸ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ 56 ವರ್ಷದ ಸಾಹ್ನಿ, ಒತ್ತಡಕ್ಕೆ ಒಳಗಾಗಿದ್ದು, ನವೆಂಬರ್‌ನಲ್ಲಿ ಗ್ರೆಗ್ ಬಾರ್ಕ್ಲೇ ಈ ಸ್ಥಾನಕ್ಕೇರಿದ್ದಾರೆ. ಸಾಹ್ನಿಯವರ "ಸರ್ವಾಧಿಕಾರಿ ಶೈಲಿಯ ಕಾರ್ಯವೈಖರಿ" ರಿಚರ್ಡ್ಸನ್ ತೆಗೆದುಕೊಂಡ ಅಂತರ್ಗತ ವಿಧಾನದಿಂದ ಭಿನ್ನವಾಗಿದೆ ಮತ್ತು ಉದ್ಯೋಗಿಗಳೊಂದಿಗೆ ಉತ್ತಮವಾಗಿ ಉಳಿದಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, ಕಳೆದ ವರ್ಷ ನಡೆದ ಚುನಾವಣೆಯ ಸಂದರ್ಭದಲ್ಲಿ ಮಧ್ಯಂತರ ಅಧ್ಯಕ್ಷ ಇಮ್ರಾನ್ ಖವಾಜಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಕೆಲವು ಕ್ರಿಕೆಟ್ ಮಂಡಳಿಗಳು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.

ಕೆಲವು ದೊಡ್ಡ ಮಂಡಳಿಗಳು ಅಸಮಾಧಾನಗೊಳ್ಳಲು ಎರಡನೆಯ ಕಾರಣವೆಂದರೆ, ಮುಂದಿನ ಋತಿವಿನಲ್ಲಿ ಈವೆಂಟ್‌ಗಳನ್ನು ಆಯೋಜಿಸಲು ಶುಲ್ಕ ಪಾವತಿಸಲುಮಂಡಳಿಗಳನ್ನು ಕೇಳುವ ಐಸಿಸಿಯ ಇತ್ತೀಚಿನ ನಿರ್ಧಾರಕ್ಕೆ ಅವರ ಬೆಂಬಲವಿತ್ತು. ಬಿಸಿಸಿಐ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಈ ವಿಚಾರವನ್ನು ಸಂಪೂರ್ಣವಾಗಿ ವಿರೋಧಿಸುತ್ತವೆ ಮತ್ತು ವಿವಿಧ ಮಂಡಳಿ ಸಭೆಗಳಲ್ಲಿ ತಮ್ಮ ಅಸಮಾಧಾನವನ್ನು ಸ್ಪಷ್ಟಪಡಿಸಿದೆ ಎಂದು ತಿಳಿದುಬಂದಿದೆ.

ಸಾಹ್ನಿ ಸಿಂಗಾಪುರ್ ಸ್ಪೋರ್ಟ್ಸ್ ಹಬ್‌ನ ಮಾಜಿ ಸಿಇಒ ಆಗಿದ್ದಾರೆ ಮತ್ತು ಅವರು 17 ವರ್ಷಗಳ ಕಾಲ ಕೆಲಸ ಮಾಡಿದ ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಲಿಮಿಟೆಡ್‌ನ ಲೆಕ್ಕಪರಿಶೋಧನಾ ಸಮಿತಿಯ ಸದಸ್ಯರೂ ಹೌದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com