ಕ್ರಿಸ್ ಗೇಲ್
ಕ್ರಿಸ್ ಗೇಲ್

ಟಿ-20 ಕ್ರಿಕೆಟ್ ನಲ್ಲಿ ಗೇಲ್ ದಾಖಲೆ: 14 ಸಾವಿರ ದಾಟಿದ ಮೊದಲ ಕ್ರಿಕೆಟಿಗ

ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಟಿ 20 ಸ್ವರೂಪದಲ್ಲಿ 14,000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗ್ರಾಸ್ ಐಲೆಟ್: ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಟಿ 20 ಸ್ವರೂಪದಲ್ಲಿ 14,000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗೇಲ್ ಈ ದಾಖಲೆಯನ್ನು ಸಿಕ್ಸರ್ ಬಾರಿಸುವ ಮೂಲಕ ತಮ್ಮದೇ ಶೈಲಿಯಲ್ಲಿ ನಿರ್ಮಿಸಿದರು. ಗ್ರಾಸ್ ಐಲೆಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ 20 ಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಅತಿ ಹೆಚ್ಚು ಟಿ 20 ರನ್‌ಗಳ ಪಟ್ಟಿಯಲ್ಲಿ ಅಗ್ರ -5 ರಲ್ಲಿರುವ ಏಕೈಕ ಭಾರತೀಯ. 310 ಟಿ-20 ಪಂದ್ಯಗಳಲ್ಲಿ 9922 ರನ್ ಗಳಿಸಿರುವ ಕೊಹ್ಲಿ ಐದನೇ ಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ 5 ಟಿ-20 ಸರಣಿ ಆಡಲಾಗುತ್ತಿದೆ. ಮಂಗಳವಾರ, ವಿಂಡೀಸ್ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ವಿಕೆಟ್ಗಳಿಂದ ಸೋಲಿಸಿ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿತು. ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿತು. ಇದಕ್ಕೆ ಉತ್ತರಿಸಿದ ವಿಂಡೀಸ್ ತಂಡವು 14.5 ಓವರ್ ಗಳಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂಡು 142 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.

ಇದೇ ಪಂದ್ಯದಲ್ಲಿ ಕ್ರಿಸ್ ಗೇಲ್ 38 ಎಸೆತಗಳಲ್ಲಿ 67 ರನ್ ಗಳಿಸುವ ಮೂಲಕ ಈ ದೊಡ್ಡ ದಾಖಲೆ ಮಾಡಿದ್ದಾರೆ. ಗೇಲ್ ಇನ್ನಿಂಗ್ಸ್ ನ 9 ನೇ ಓವರ್ ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಟಿ-20 ಯಲ್ಲಿ ತನ್ನ 14 ಸಾವಿರ ರನ್ ಗಳನ್ನು ಪೂರ್ಣಗೊಳಿಸಿದರು. ಪಂದ್ಯದ ಮೊದಲು, ಗೇಲ್ ಈ ದಾಖಲೆಯನ್ನು ಮಾಡಲು ಕೇವಲ 29 ರನ್ ಗಳಿಸಬೇಕಾಗಿತ್ತು. ಲೆಗ್ ಸ್ಪಿನ್ನರ್ ಆಡಮ್ ಜಂಪಾ ಅವರ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅವರು ದಾಖಲೆ ನಿರ್ಮಿಸಿದರು.

ಒಟ್ಟಾರೆ ಟಿ-20 ಯಲ್ಲಿ ಇದುವರೆಗೆ ಕೇವಲ 4 ಆಟಗಾರರು 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರಲ್ಲಿ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ವಿಂಡೀಸ್ ತಂಡದ ಕೀರನ್ ಪೊಲಾರ್ಡ್ (10836), ಪಾಕಿಸ್ತಾನದ ಶೋಯೆಬ್ ಮಲಿಕ್ (10741) ಮೂರನೇ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (10017) ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ (9922) ಐದನೇ ಸ್ಥಾನದಲ್ಲಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com