ಪಾಕಿಸ್ತಾನ ಟಿ20 ಅಂತಾರಾಷ್ಟ್ರೀಯ ತಂಡದಲ್ಲಿ ಕ್ರಿಕೆಟಿಗರಿಗಿಂತ ಹೆಚ್ಚು ಕುಸ್ತಿಪಟುಗಳನ್ನು ನೋಡಬಹುದು: ಆಕಿಬ್ ಜಾವೇದ್

ಟಿ20 ಅಂತಾರಾಷ್ಟ್ರೀಯ ಪಾಕ್ ತಂಡದಲ್ಲಿ 'ಕ್ರಿಕೆಟಿಗರಿಗಿಂತ ಹೆಚ್ಚು ಕುಸ್ತಿಪಟುಗಳನ್ನು ನೋಡುತ್ತಿದ್ದೇನೆ' ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಆಕಿಬ್ ಜಾವೇದ್ ಹೇಳಿದ್ದಾರೆ.
ಅಕಿಬ್ ಜಾವೇದ್
ಅಕಿಬ್ ಜಾವೇದ್

ಕರಾಚಿ: ಟಿ20 ಅಂತಾರಾಷ್ಟ್ರೀಯ ಪಾಕ್ ತಂಡದಲ್ಲಿ 'ಕ್ರಿಕೆಟಿಗರಿಗಿಂತ ಹೆಚ್ಚು ಕುಸ್ತಿಪಟುಗಳನ್ನು ನೋಡುತ್ತಿದ್ದೇನೆ' ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಆಕಿಬ್ ಜಾವೇದ್ ಹೇಳಿದ್ದಾರೆ.

ಈ ಹಿಂದೆ ಪಾಕಿಸ್ತಾನದ ಅಂಡರ್ 19 ಮುಖ್ಯ ಕೋಚ್ ಮತ್ತು ಬೌಲಿಂಗ್ ಕೋಚ್ ಹಾಗೂ ಹಿರಿಯ ತಂಡದೊಂದಿಗೆ ಕೆಲಸ ಮಾಡಿದ ಆಕಿಬ್, ಸರಿಯಾದ ನೀತಿ ಅಥವಾ ಯೋಜನೆಗಳಿಲ್ಲದ ಕಾರಣ ತಂಡದ ನಿರ್ವಹಣೆ ಕಷ್ಟವಾಗಿದೆ ಎಂದು ಆಯ್ಕೆದಾರರ ವಿರುದ್ಧ ವಾಗ್ದಾಳಿ ನಡೆಸಿದರು.

'ಆಯ್ಕೆಗಾರರು ಏನು ಮಾಡುತ್ತಿದ್ದಾರೆ ಅಥವಾ ಅವರ ನಿರ್ದೇಶನ ಏನು ಎಂದು ಅವರಿಗೆ ತಿಳಿದಿಲ್ಲ. ಟಿ20 ತಂಡದಲ್ಲಿ ಆಟಗಾರರಿಗಿಂತ ಹೆಚ್ಚು ಕುಸ್ತಿಪಟುಗಳನ್ನು ನಾನು ನೋಡುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾರ್ಜೀಲ್ ಖಾನ್, ಅಜಮ್ ಖಾನ್, ಸೊಹೈಬ್ ಮಕ್ಸೂದ್ ಫಿಟ್ನೆಸ್ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಇವೆ ಎಂದು ಜಿಯೋ ನ್ಯೂಸ್ ಚಾನೆಲ್ ಗೆ ಆಕಿಬ್ ಹೇಳಿದ್ದಾರೆ.

ಪಾಕಿಸ್ತಾನ ತಂಡ ಪ್ರಸ್ತುತ ಸೀಮಿತ ಓವರ್ ಗಳ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದೆ. ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಧಾರದ ಮೇಲೆ ಆಯ್ಕೆದಾರರು ಸೋಹೈಬ್ ರನ್ನು ರಾಷ್ಟ್ರೀಯ ಟಿ20 ತಂಡಕ್ಕೆ ಆಯ್ಕೆ ಮಾಡಿದರು. ಆದರೆ ಅವರನ್ನು ಯಾವ ಸ್ಥಾನದಲ್ಲಿ ಆಡಿಸಬೇಕು ಎಂದು ಅರಿವಿಲ್ಲ ಎಂದು ಹೇಳಿದರು. 

ಪಾಕ್ ಟಿ20 ತಂಡದಲ್ಲಿ ಒಂದೇ ರೀತಿಯ ಸ್ವಭಾವದವರಿದ್ದಾರೆ. ಒಂದು ಸ್ಥಾನಕ್ಕಾಗಿ ಹಲವಾರು ಆಟಗಾರರಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದಿನ ದಾರಿ ಏನು ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com