ಐಸಿಸಿ ಟಿ 20 ವಿಶ್ವಕಪ್ 2021: ಒಂದೇ ಗುಂಪಿನಲ್ಲಿ ಭಾರತ ಹಾಗೂ ಪಾಕಿಸ್ತಾನ!

ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆಯೋಜನೆಯಾಗಿರುವ ಪುರುಷರ ಟಿ 20 ವಿಶ್ವಕಪ್ 2021ನಲ್ಲಿ ಭಾಗವಹಿಸುವ ತಂಡಗಳ ಗುಂಪನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಪ್ರಕಟಿಸಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ದುಬೈ: ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಆಯೋಜನೆಯಾಗಿರುವ ಪುರುಷರ ಟಿ 20 ವಿಶ್ವಕಪ್ 2021ನಲ್ಲಿ ಭಾಗವಹಿಸುವ ತಂಡಗಳ ಗುಂಪನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಪ್ರಕಟಿಸಿದೆ.

2021 ರ ಮಾರ್ಚ್ 20 ರ ವೇಳೆಗೆ ತಂಡದ ಶ್ರೇಯಾಂಕದ ಆಧಾರದ ಮೇಲೆ ರಚನೆಯಾದ ಈ ಗುಂಪಿನಲ್ಲಿ ಭಾರತ-ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

"ಐಸಿಸಿ ಪುರುಷರ ಟಿ 20 ವಿಶ್ವಕಪ್ 2021 ಗಾಗಿ ಗುಂಪುಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಗುಂಪುಗಳು ನೀಡುವ ಕೆಲವು ಉತ್ತಮ ಹೊಂದಾಣಿಕೆಗಳು ಇವೆ ಮತ್ತು ಇದು ನಮ್ಮ ಅಭಿಮಾನಿಗಳಿಗೆ ಈವೆಂಟ್ ಅನ್ನು ಜೀವಂತವಾಗುರಿಸಲು ನೆರವಾಗಲಿದೆ."ಎಂದು ಐಸಿಸಿ ಹಂಗಾಮಿ  ಮುಖ್ಯ ಕಾರ್ಯನಿರ್ವಾಹಕ  ಜೆಫ್ ಅಲಾರ್ಡಿಸ್ ಹೇಳಿದ್ದಾರೆ.

ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಎಂಟು ತಂಡಗಳು ಐಸಿಸಿ ಪುರುಷರ ಟಿ 20 ವಿಶ್ವಕಪ್ ಅರ್ಹತಾ 2019ರ ಮೂಲಕ ತಮ್ಮ ಸ್ಥಾನವನ್ನು ಕಾಯ್ದಿರಿಸಿದ ಉಳಿದ ಆರು ತಂಡಗಳೊಂದಿಗೆ ಮೊದಲ ಸುತ್ತಿನಲ್ಲಿ ಸ್ಪರ್ಧಿಸಲಿವೆ. ಗ್ರೂಪ್ ಎ ಯಲ್ಲಿ ಶ್ರೀಲಂಕಾವನ್ನು ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ಸೇರಿಕೊಳ್ಳಲಿದ್ದು, ಮತ್ತೊಂದೆಡೆ ಬಾಂಗ್ಲಾದೇಶವನ್ನು ಓಮನ್, ಪಪುವಾ ನ್ಯೂಗಿನಿಯಾ ಮತ್ತು ಸ್ಕಾಟ್ಲೆಂಡ್ ತಂಡಗಳು ಬಿ ಗುಂಪಿನಲ್ಲಿ ಸೇರಿಕೊಳ್ಳಲಿವೆ.

"ರೋಚಕ ಟಿ 20 ಅದರ ಸ್ವರೂಪಗಳಿಂದ ಆಶ್ಚರ್ಯಗಳಿಗೆ ಕಾರಣವಾಗಲಿದೆ. ಮತ್ತು ಅದಕ್ಕಾಗಿ ನಾವು ಸಿದ್ಧರಾಗಿರಬೇಕು. ಕೆಲವು ರೋಚಕ ಮತ್ತು ಮೈ ರೋಮಾಂಚನಗೊಳಿಸುವ ಆಟಗಳಿಗೆ ನಾವು ಸಾಕ್ಷಿಯಾಗುತ್ತೇವೆ ಎಂದು ನನಗೆ ಖಾತ್ರಿಯಿದೆ, '' ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಐಸಿಸಿ ಪುರುಷರ ಟಿ 20 ವಿಶ್ವಕಪ್‌ನ ಆತಿಥ್ಯದೊಂದಿಗೆ ಓಮನ್ವಿಶ್ವ ಕ್ರಿಕೆಟ್‌ನ ಚೌಕಟ್ಟಿನಲ್ಲಿ ಸೇರೊಅಡೆಯಾಗಿತ್ತಿದ್ದು ಇದು ಬಹಳಷ್ಟು ಯುವ ಆಟಗಾರರು ಆಟದ ಬಗ್ಗೆ ಆಸಕ್ತಿ ವಹಿಸಲು ಸಹಾಯ ಮಾಡುತ್ತದೆ. ಇದು ವಿಶ್ವದ ಈ ಭಾಗದಲ್ಲಿ ವಿಶ್ವ ದರ್ಜೆಯ ಇವೆಂಟ್ ಆಗಿರಲಿದೆ. ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

ಐಸಿಸಿಗೆ ಅನುಗುಣವಾಗಿ, ಪಂದ್ಯಾವಳಿಯ ವೇಳಾಪಟ್ಟಿಯನ್ನು ಸರಿಯಾದ ಸಮಯದಲ್ಲಿ ಪ್ರಕಟಿಸಲಾಗುವುದು.

ಗುಂಪುಗಳು:

ಮೊದಲ ಸುತ್ತಿನಲ್ಲಿ
ಗುಂಪು ಎ: ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ

ಗುಂಪು ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ ಮತ್ತು ಓಮನ್

ಸೂಪರ್ 12
ಗುಂಪು 1: ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಎ 1 ಮತ್ತು ಬಿ 2.
ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಎ 2 ಮತ್ತು ಬಿ 1.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com