2ನೇ ಏಕದಿನ ಪಂದ್ಯ: ಚಹಾಲ್, ಭುವನೇಶ್ವರ್ ಮಾರಕ ಬೌಲಿಂಗ್, ಲಂಕಾ 9 ನಷ್ಟಕ್ಕೆ 275 ರನ್!
ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅತಿಥೇಯ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದು ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ ಪೇರಿಸಿದೆ.
Published: 20th July 2021 07:56 PM | Last Updated: 20th July 2021 07:56 PM | A+A A-

ಸಂಗ್ರಹ ಚಿತ್ರ
ಕೊಲಂಬೋ: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅತಿಥೇಯ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದು ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ ಪೇರಿಸಿದೆ.
ಶ್ರೀಲಂಕಾ ರಾಜಧಾನಿ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅವಿಷ್ಕಾ ಫೆರ್ನಾಂಡೋ 50 ರನ್ ಮತ್ತು ಚರಿತಾ ಅಸಲಂಕಾ 65 ರನ್ ನೆರವಿನೊಂದಿಗೆ ಲಂಕಾ 275 ರನ್ ಪೇರಿಸಿದೆ.
ಲಂಕಾ ಪರ ಮಿನೋದ್ ಭಾನುಕಾ 36, ಧನಂಜಯ್ ಡಿಸಿಲ್ವಾ 32, ಚಮಿಕಾ ಕರುಣರತ್ನೆ ಅಜೇಯ 44 ರನ್ ಪೇರಿಸಿದ್ದಾರೆ.
ಭಾರತ ಪರ ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್ ತಲಾ 3 ವಿಕೆಟ್ ಪಡೆದಿದ್ದಾರೆ. ದೀಪಕ್ ಚಹಾರ್ 2 ವಿಕೆಟ್ ಪಡೆದಿದ್ದಾರೆ.