ಐಪಿಎಲ್ 2021: ಇನ್ನುಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಮುಂಬೈ-ಚೆನ್ನೈ ನಡುವೆ ಮೊದಲ ಪಂದ್ಯ!
ಕೊರೋನಾ ಎರಡನೇ ಅಲೆಯಿಂದಾಗಿ ಅರ್ಧಕ್ಕೆ ಮುಟುಕುಗೊಂಡಿದ್ದ ಐಪಿಎಲ್ 14ನೇ ಆವೃತ್ತಿಯ ಇನ್ನುಳಿದ ಪಂದ್ಯಗಳು ಯುಎಇಯಲ್ಲಿ ನಡೆಯಲಿದ್ದು ಮುಂಬೈ ಮತ್ತು ಚೆನ್ನೈ ನಡುವೆ ಸೆಪ್ಟೆಂಬರ್ 19ರಂದು ಮೊದಲ ಪಂದ್ಯ ನಡೆಯಲಿದೆ.
Published: 25th July 2021 08:55 PM | Last Updated: 25th July 2021 08:55 PM | A+A A-

ರೋಹಿತ್ ಶರ್ಮಾ-ಎಂಎಸ್ ಧೋನಿ
ನವದೆಹಲಿ: ಕೊರೋನಾ ಎರಡನೇ ಅಲೆಯಿಂದಾಗಿ ಅರ್ಧಕ್ಕೆ ಮುಟುಕುಗೊಂಡಿದ್ದ ಐಪಿಎಲ್ 14ನೇ ಆವೃತ್ತಿಯ ಇನ್ನುಳಿದ ಪಂದ್ಯಗಳು ಯುಎಇಯಲ್ಲಿ ನಡೆಯಲಿದ್ದು ಮುಂಬೈ ಮತ್ತು ಚೆನ್ನೈ ನಡುವೆ ಸೆಪ್ಟೆಂಬರ್ 19ರಂದು ಮೊದಲ ಪಂದ್ಯ ನಡೆಯಲಿದೆ.
ಈ ಆವೃತ್ತಿಯ ಉಳಿದ 31 ಪಂದ್ಯಗಳು ಸೆಪ್ಟೆಂಬರ್ 19ರಿಂದ ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈನ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ನಡೆಯಲಿವೆ. ಇನ್ನು ಸೆಪ್ಟೆಂಬರ್ 20ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ.
ಅಕ್ಟೋಬರ್ 10ರಂದು ಮೊದಲ ಕ್ವಾಲಿಫೈಯರ್ ಹಾಗೂ 13ರಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇನ್ನುಅಕ್ಟೋಬರ್ 11ರಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು ಅಕ್ಟೋಬರ್ 15ರಂದು ಫೈನಲ್ ಪಂದ್ಯ ನಡೆಯಲಿದೆ.
25 ದಿನಗಳ ಒಳಗೆ ಟೂರ್ನಿಯನ್ನು ಮುಗಿಸಲು ಕ್ರಿಕೆಟ್ ಮಂಡಳಿ ನಿರ್ಧರಿಸಿದ್ದು ಅಂದರಂತೆ ವೇಳಾಪಟ್ಟಿ ಪ್ರಕಟಿಸಿದೆ.
2020ರ ಐಪಿಎಲ್ ಸಹ ರದ್ದಾಗಿದ್ದು ಈ ವೇಳೆ ಟೂರ್ನಿಯನ್ನು ಬಯೋ-ಬಬಲ್ ನಲ್ಲಿ ಯುಎಇಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.