ಶ್ರೀಲಂಕಾ ವಿರುದ್ಧದ ಪ್ರಥಮ ಟಿ-20 ಪಂದ್ಯದಲ್ಲಿ ಭಾರತಕ್ಕೆ 38 ರನ್ ಗಳ ಗೆಲುವು
ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಟಿ-20 ಪಂದ್ಯದಲ್ಲಿ ಭಾರತ 38 ರನ್ ಗಳಿಂದ ಗೆಲುವು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ಗಳ ಸಾವಲಿನ ಮೊತ್ತ ಪೇರಿಸಿತು.
Published: 26th July 2021 12:16 AM | Last Updated: 26th July 2021 01:24 AM | A+A A-

ಟೀಮ್ ಇಂಡಿಯಾ ಆಟಗಾರರು
ಕೊಲಂಬೊ: ಇಲ್ಲಿನ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಟಿ-20 ಪಂದ್ಯದಲ್ಲಿ ಭಾರತ 38 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಅಂತರದಲ್ಲಿ ಟೀಂ ಇಂಡಿಯಾ ಮುನ್ನಡೆ ಕಾಯ್ದುಕೊಂಡಿದೆ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಆರಂಭಿಕ ಆಟಗಾರ ಪೃಥ್ವಿ ಶಾ ಶೂನ್ಯಕ್ಕೆ ಔಟಾದರೆ, ಶಿಖರ್ ಧವನ್, 46, ಸಂಜು ಸ್ಯಾಮ್ ಸನ್ 27, ಸೂರ್ಯಕುಮಾರ್ ಯಾದವ್ 50, ಹಾರ್ದಿಕ್ ಪಾಂಡ್ಯ,10, ಇಶಾನ್ ಕಿಶಾನ್ ಅಜೇಯ 20, ಕೃಣಾಲ್ ಪಾಂಡ್ಯ ಅಜೇಯ 3 ರನ್ ಗಳಿಸಿದರು.
ಟೀಮ್ ಇಂಡಿಯಾ ನೀಡಿದ 164 ರನ್ ಗಳ ಸವಾಲಿನ ಗುರಿ ಬೆನ್ನತ್ತಿದ್ದ ಶ್ರೀಲಂಕಾ ಕೊಂಚ ಹೋರಾಟ ಪ್ರದರ್ಶಿಸಿತಾದರೂ, ಭಾರತ ತಂಡದ ಬಲಿಷ್ಠ ಬೌಲಿಂಗ್ ದಾಳಿಯ ಎದುರು 18.3 ಓವರ್ಗಳಲ್ಲಿ 126 ರನ್ಗಳಿಗೆ ಆಲ್ ಔಟ್ ಆಯಿತು.
ಟೀಮ್ ಇಂಡಿಯಾ ಪರ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್, 4 ವಿಕೆಟ್ ಪಡೆದು ಭಾರತಕ್ಕೆ ಭರ್ಜರಿ ಜಯ ತಂದರು. ಅವರಿಗೆ ಉತ್ತಮ ಸಾಥ್ ನೀಡಿದ ದೀಪಕ್ ಚಹರ್ (24ಕ್ಕೆ 2) ಎರಡು ವಿಕೆಟ್ ಪಡೆದರು. ಡೆತ್ ಓವರ್ಗಳಲ್ಲಿ ಮಿಂಚಿದ ಭುವನೇಶ್ವರ್ ಕುಮಾರ್ಗೆ ಪಂದ್ಯಶ್ರೇಷ್ಠ ಗೌರವ ಲಭ್ಯವಾಯಿತು.