ಲಂಕಾ ವಿರುದ್ಧದ ಅಂತಿಮ ಟಿ-20 ಪಂದ್ಯ: ಪ್ರಮುಖ 5 ವಿಕೆಟ್ ಕಳೆದುಕೊಂಡ ಭಾರತಕ್ಕೆ ಆರಂಭಿಕ ಆಘಾತ

ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಪ್ರಮುಖ ಐದು ವಿಕೆಟ್ ಗಳನ್ನು ಕಳೆದುಕೊಂಡ ಭಾರತ, ಆರಂಭಿಕ ಆಘಾತ ಅನುಭವಿಸಿದೆ. 
ವಿಕೆಟ್ ಪಡೆದು ಸಂಭ್ರಮಿಸುತ್ತಿರುವ ಲಂಕಾ ಆಟಗಾರರು
ವಿಕೆಟ್ ಪಡೆದು ಸಂಭ್ರಮಿಸುತ್ತಿರುವ ಲಂಕಾ ಆಟಗಾರರು

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ  ಪ್ರಮುಖ ಐದು ವಿಕೆಟ್ ಗಳನ್ನು ಕಳೆದುಕೊಂಡ ಭಾರತ, ಆರಂಭಿಕ ಆಘಾತ ಅನುಭವಿಸಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಎರಡನೇ ಓವರ್ ನಲ್ಲೇ ದೊಡ್ಡ ಆಘಾತ ಎದುರಾಯಿತು. 12 ರನ್ ಗಳಿಸುವಷ್ಟರಲ್ಲಿ ಚಾಮೀರಾ ದೊಡ್ಡ ವಿಕೆಟ್ ಪಡೆದುಕೊಂಡರು. ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಶೂನ್ಯಕ್ಕೆ ಔಟಾದರು. ನಂತರ ಬಂದ ದೇವದತ್ತ ಪಡಿಕ್ಕಲ್ ಕೂಡಾ ಕೇವಲ 9 ರನ್ ಗಳಿಸುವಷ್ಟರಲ್ಲಿ ರನ್ ಔಟ್ ಆಗಿ ಫೆವಿಲಿಯನ್ ನತ್ತ ಹೆಜ್ಜೆ ಹಾಕಿದರು. 

ತದ ನಂತರ ಋತುರಾಜ್ ಗಾಯಕ್ವಾಡ್ 14 ರನ್ ಗಳಿಸಿ ಹಸರಂಗ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಗೆ ಬಲಿಯಾದರು.  ಸಂಜು ಸ್ಯಾಮ್ಸನ್ ಕೂಡಾ ಹಸರಂಗ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂಗೆ ಬಲಿಯಾದರು. ನಂತರ ನಿತೀಶ್ ರಾಣಾ ಕೂಡಾ ಕೇವಲ 6 ರನ್ ಗಳಿಸಿ ಔಟಾದರು. ಟೀಂ ಇಂಡಿಯಾ ಇದೇ ರೀತಿಯ ಕೆಟ್ಟ ಪ್ರದರ್ಶನ ಮುಂದುವರೆಸಿದರೆ ಸೋಲು ಕಟ್ಟಿಟ್ಟ ಬುತ್ತಿಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com