ಲಂಕಾ ವಿರುದ್ಧ 3 ನೇ ಟಿ-20 ಪಂದ್ಯ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಡಿಯಾ

ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಶಿಖರ್ ಧವನ್, ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಶ್ರೀಲಂಕಾ ನಾಯಕ ದಾಸುನ್ ಶಾನಾಕ, ಭಾರತದ ನಾಯಕ ಶಿಖರ್ ಧವನ್
ಶ್ರೀಲಂಕಾ ನಾಯಕ ದಾಸುನ್ ಶಾನಾಕ, ಭಾರತದ ನಾಯಕ ಶಿಖರ್ ಧವನ್

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಶಿಖರ್ ಧವನ್, ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಪ್ರಮುಖ ಆಟಗಾರರು ಇಲ್ಲದೆ ಈಗಾಗಲೇ ಸಮಸ್ಯೆ ಎದುರಿಸಿರುವ ಇಂಡಿಯಾಕ್ಕೆ ಇದೀಗ ಮತ್ತೊಂದು ಪೆಟ್ಟು ಬಿದಿದ್ದೆ. ವೇಗಿ ನವದೀಪ್ ಸೈನಿ ಗಾಯದಿಂದ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ತಮಿಳುನಾಡು ವೇಗಿ ಸಂದೀಪ್ ವಾರಿಯರ್ ಬಂದಿದ್ದಾರೆ. ಇದು ಅವರಿಗೆ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಶ್ರೀಲಂಕಾ ತಂಡದಲ್ಲೂ ಒಂದು ಬದಲಾವಣೆಯಾಗಿದೆ. ಇಸುರು ಉದಾನಾ ಬದಲಿಗೆ ಪಾತುಮ್ ನಿಸ್ಸಂಕ ಬಂದಿದ್ದಾರೆ.

ತಮ್ಮ ಇಲೆವೆನ್‌ನಲ್ಲಿ ಕೇವಲ ಐದು ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಭಾರತ, ಟಾಪ್ ಆರ್ಡರ್ ನಲ್ಲಿ ಉತ್ತಮ ರನ್ ಕಲೆಹಾಕುವತ್ತ ಎದುರು ನೋಡುತ್ತಿದೆ. ಭಾರತದ ಬೌಲಿಂಗ್ ಸಾಕಷ್ಟು ಪ್ರಬಲವಾಗಿದೆ ಮತ್ತು ಬ್ಯಾಟ್ಸ್‌ಮನ್‌ಗಳು ಬರುವ ಯಾವುದೇ ಮೊತ್ತವನ್ನು ರಕ್ಷಿಸುವ ವಿಶ್ವಾಸವಿದೆ ಎಂದು ಧವನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡ ಇಂತಿದೆ: ಶಿಖರ್ ಧವನ್ ( ಕ್ಯಾಪ್ಟನ್ ) ಋತುರಾಜ್ ಗಾಯಕ್ವಾಡ್, ದೇವದತ್ತ ಪಡಿಕ್ಕಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ನಿತೀಶ್ ರಾಣಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ರಾಹುಲ್ ಚಹಾರ್, ಸಂದೀಪ್ ವಾರಿಯರ್, ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ.

ಶ್ರೀಲಂಕಾ ತಂಡ ಇಂತಿದೆ: ದಾಸುನ್ ಶಾನಾಕ (ನಾಯಕ) ಅವಿಷ್ಕಾ ಫರ್ನಾಂಡೋ, ಮಿನೊದ್ ಭಾನುಕಾ (ವಿಕೆಟ್ ಕೀಪರ್) ಸದೀರಾ ಸಮರವಿಕ್ರಮ, ಪಾತುಮ್ ನಿಸ್ಸಂಕ, ಧನಂಜಯ ಡಿ ಸಿಲ್ವಾ, ವಾನಿಂದು ಹಸರಂಗ, ರಮೇಶ್ ಮೆಂಡಿಸ್, ಚಮಿಕಾ ಕರುಣರತ್ನ, ಅಕಿಲಾ ಧನಂಜಯ, ದುಷ್ಮಂತಾ ಚಮೀರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com