ಸೋಲನ್ನು ನಂಬಲು ಸಾಧ್ಯವಾಗುತ್ತಿಲ್ಲ: ಕಳಪೆ ತೀರ್ಪಿಗಾಗಿ ಐಒಸಿ ಬಾಕ್ಸಿಂಗ್ ಟಾಸ್ಕ್ ಫೋರ್ಸ್ ದೂಷಿಸಿದ ಮೇರಿ ಕೋಮ್!

ಟೋಕಿಯೊ ಒಲಂಪಿಕ್ಸ್ ನ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಕೊಲಂಬಿಯಾದ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ ಸೋಲು ಟೂರ್ನಿಯಿಂದ ಹೊರಬಂದಿದ್ದರು. 
ಮೇರಿ ಕೋಮ್
ಮೇರಿ ಕೋಮ್

ನವದೆಹಲಿ: ಟೋಕಿಯೊ ಒಲಂಪಿಕ್ಸ್ ನ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಕೊಲಂಬಿಯಾದ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ ಸೋಲು ಟೂರ್ನಿಯಿಂದ ಹೊರಬಂದಿದ್ದರು. 

ಇನ್ನು ಸೋಲಿನ ಕುರಿತಂತೆ ನೋವು ವ್ಯಕ್ತಪಡಿಸಿರುವ ಮೇರಿ ಕೋಮ್ ಅವರು, ನನ್ನ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಅಲ್ಲದೆ ಕಳಪೆ ತೀರ್ಪು ನೀಡಿದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ(ಐಒಸಿ) ಬಾಕ್ಸಿಂಗ್ ಟಾಸ್ಕ್ ಪೋರ್ಸ್ ವಿರುದ್ಧ ಕಿಡಿಕಾರಿದ್ದಾರೆ.

ಟೋಕಿಯೊದಲ್ಲಿ ಬಾಸ್ಸಿಂಗ್ ಸ್ಪರ್ಧೆಯನ್ನು ಟಾಸ್ಕ್ ಫೋರ್ಸ್ ನಡೆಸುತ್ತಿದೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್(ಎಐಬಿಎ) ಅನ್ನು ದುರಾಡಳಿತ ಮತ್ತು ಆರ್ಥಿಕ ದುರ್ಬಳಕೆ ಆರೋಪದ ಅಡಿಯಲ್ಲಿ ಐಒಸಿ ಅಮಾನತುಗೊಳಿಸಿದೆ. 

ಈ ನಿರ್ಧಾರ ನನಗೆ ತಿಳಿದಿಲ್ಲ ಮತ್ತು ಅರ್ಥವಾಗುತ್ತಿಲ್ಲ. ಟಾಸ್ಕ್ ಫೋರ್ಸ್ನಲ್ಲಿ ಏನು ತಪ್ಪಾಗಿದೆ? ಐಒಸಿಯಲ್ಲಿ ಏನು ತಪ್ಪಾಗಿದೆ?" ಟೋಕಿಯೊದಲ್ಲಿ ಪ್ರಿ ಕ್ವಾರ್ಟರ್ಸ್ನಲ್ಲಿ ಕೊಲಂಬಿಯಾದ ಇಂಗ್ರಿಟ್ ವೇಲೆನ್ಸಿಯಾ ವಿರುದ್ಧ 2-3ರ ಸೋಲಿನ ನಂತರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮೇರಿ ಕೋಮ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com