ಸಸ್ಯಾಹಾರಿ ಅಂತಾ ಎಂದಿಗೂ ಹೇಳಿಕೊಂಡಿಲ್ಲ: ಡಯಟ್ ಕುರಿತು ಕೊಹ್ಲಿ ಸ್ಪಷ್ಟನೆ

ತಾನು ಸಸ್ಯಹಾರಿ ಅಂತಾ ಎಂದಿಗೂ ಹೇಳಿಕೊಂಡಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಂಗಳವಾರ 
ಸ್ಪಷ್ಟಪಡಿಸಿದ್ದಾರೆ.

Published: 01st June 2021 05:21 PM  |   Last Updated: 01st June 2021 08:45 PM   |  A+A-


Virat_Kohli1

ವಿರಾಟ್ ಕೊಹ್ಲಿ

Posted By : Nagaraja AB
Source : The New Indian Express

ಮುಂಬೈ: ತಾನು ಸಸ್ಯಹಾರಿ ಅಂತಾ ಎಂದಿಗೂ ಹೇಳಿಕೊಂಡಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಂಗಳವಾರ 
ಸ್ಪಷ್ಟಪಡಿಸಿದ್ದಾರೆ. ಕಳೆದ ವಾರ ಇನ್ಸ್ಟಾಗ್ರಾಮ್ನಲ್ಲಿ ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ಡಯಟ್ ಬಗ್ಗೆ ನೀಡಿದ್ದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು.

ಹೆಚ್ಚಿನದಾಗಿ ತರಕಾರಿಗಳು, ಕೆಲ ಮೊಟ್ಟೆಗಳು, ಎರಡು ಕಪ್ ಕಾಫಿ, ನವಣೆ ಅಕ್ಕಿ, ಹೆಚ್ಚಿನ ಸೊಪ್ಪು ಸೇವಿಸುತ್ತೇನೆ. ದೋಸೆ ಕೂಡಾ ಪ್ರೀತಿಸುತ್ತೇನೆ. ಆದರೆ, ಎಲ್ಲಾ ನಿಯಂತ್ರಿತ ಪ್ರಮಾಣದಲ್ಲಿ ಇರುತ್ತದೆ ಎಂದು ಕೊಹ್ಲಿ ಹೇಳಿದ್ದರು.

ತದ ನಂತರ ಅವರನ್ನು ಸಸ್ಯಾಹಾರಿ ಎಂದುಕೊಂಡಿದ್ದ ಅಭಿಮಾನಿಗಳು, ಮೊಟ್ಟೆ ತಿನ್ನುವುದನ್ನು ತಿಳಿದು ಆಶ್ಚರ್ಯಗೊಂಡಿದ್ದರು. ಅಲ್ಲದೇ, ನಾನಾ  ರೀತಿಯಲ್ಲಿ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಕುರಿತಂತೆ ಮಂಗಳವಾರ ಸ್ಪಷ್ಟಪಡಿಸಿರುವ ವಿರಾಟ್ ಕೊಹ್ಲಿ, ತಾನು ಸಸ್ಯಾಹಾರಿ ಮತ್ತು ಸಸ್ಯಾಹಾರಿ ಅಂತಾ ಎಂದಿಗೂ ಹೇಳಿಕೊಂಡಿಲ್ಲ ಎಂದಿದ್ದಾರೆ.

ನಾನು ಎಂದಿಗೂ ಸಸ್ಯಾಹಾರಿ ಅಂತಾ ಹೇಳಿಕೊಂಡಿಲ್ಲ, ಯಾವಾಗಲೂ ಸಸ್ಯಾಹಾರವನ್ನೇ ತಿನ್ನುತ್ತಾ ಬಂದಿದ್ದೇನೆ. ಧೀರ್ಘ ಉಸಿರು ತೆಗೆದುಕೊಳ್ಳಿ, ಸಸ್ಯಹಾರವನ್ನು ನೀವು ತಿನ್ನಿ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಜೂನ್  18 ರಿಂದ ಸೌತಾಂಪ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂತಿಮ ಪಂದ್ಯಕ್ಕಾಗಿ
ತಯಾರಿಯಲ್ಲಿ ತೊಡಗಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಜೂನ್ ಮೂರರಂದು ಇಂಗ್ಲೆಂಡ್ ಗೆ ತೆರಳಲಿದೆ.


Stay up to date on all the latest ಕ್ರಿಕೆಟ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp