ಭಾರತ-ನ್ಯೂಜಿಲೆಂಡ್ ನಡುವೆ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಪಿಚ್ ಕಂಡೀಷನ್ ನೋಡಿದ್ರೆ ಈ ತಂಡವೇ ಗೆಲ್ಲುವ ನಿರೀಕ್ಷೆ ಇದೆ ಎಂದ ಬ್ರೆಟ್ ಲೀ

ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಯಾವ ತಂಡ ಗೆಲ್ಲಬಹುದು ಎಂಬ ಕುತೂಹಲ ಪಂದ್ಯದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಬ್ರೆಟ್ ಲೀ
ಬ್ರೆಟ್ ಲೀ

ನವದೆಹಲಿ: ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಯಾವ ತಂಡ ಗೆಲ್ಲಬಹುದು ಎಂಬ ಕುತೂಹಲ ಪಂದ್ಯದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಇದರ ನಡುವೆಯೇ ಆಸ್ಟ್ರೇಲಿಯಾದ ಬೌಲಿಂಗ್ ದಂತಕಥೆ ಬ್ರೆಟ್ ಲೀ ಉಭಯ ತಂಡಗಳ ನಡುವಿನ ಗೆಲ್ಲುವ ಫೇವರಿಟ್ ತಂಡದ ಕುರಿತು ಭವಿಷ್ಯ ನುಡಿದ್ದಾರೆ. ಇದೇ ಜೂನ್ 18 ರಿಂದ 22ರವರೆಗೆ ನಡೆಯುವ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿ ಕುರಿತಂತೆ ಬ್ರೆಟ್ ಲೀ  ಮಾತನಾಡಿದ್ದು, ಪಿಚ್ ಕಂಡೀಷನ್ ನೋಡಿದ್ರೆ ಉಭಯ ತಂಡಗಳಿಗೂ ಸಮಾನ ಅವಕಾಶವಿದೆ. ಆದರೆ ನ್ಯೂಜಿಲೆಂಡ್ ತಂಡಕ್ಕೆ ಹೆಚ್ಚಿನ ಅವಕಾಶವಿದೆ ಎಂದು ಹೇಳಿದ್ದಾರೆ.

'ನ್ಯೂಜಿಲೆಂಡ್‌ ವಾತಾವರಣಕ್ಕೆ ತಕ್ಕಂತೆ ನಾನು ಮಾತನಾಡುವುದಾದರೆ, ಭಾರತದ ವಿರುದ್ಧ ಗೆಲ್ಲುವ ಅವಕಾಶ ನ್ಯೂಜಿಲೆಂಡ್ ಗೆ ಹೆಚ್ಚಿದೆ. ಇಲ್ಲಿಯೂ ಕೂಡ ಪಿಚ್‌ ನಿರ್ಣಾಯಕವಾಗಿದ್ದು, ಚೆಂಡು ಹೆಚ್ಚು ಪುಟಿಯುತ್ತದೆ. ಇಂತಹ ಪಿಚ್‌ಗಳಲ್ಲಿ ಬೌಲಿಂಗ್‌ ಮಾಡಿದ ಅನುಭವವನ್ನು ಕಿವೀಸ್‌ ವೇಗಿಗಳು ಹೆಚ್ಚು ಹೊಂದಿದ್ದಾರೆ.  ಹಾಗಾಗಿ, ಇದು ಫೈನಲ್‌ ಹಣಾಹಣಿಯಲ್ಲಿ ಪ್ರಮುಖ ಪಾತ್ರವಹಿಸಬಹುದೆಂದು. ಈ ಅಂಶದಿಂದ ನ್ಯೂಜಿಲೆಂಡ್‌ ಭಾರತದ ವಿರುದ್ಧ ಮೇಲುಗೈ ಸಾಧಿಸಬಹುದೆಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಅಂತೆಯೇ ಬ್ಯಾಟಿಂಗ್‌ ಬಗ್ಗೆ ಮಾತನಾಡುವುದಾದರೆ, ಎರಡೂ ತಂಡಗಳಲ್ಲಿ ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ, ಆದರೆ, ಸ್ವಿಂಗ್‌ ಬೌಲಿಂಗ್‌ ಎದುರಿಸುವುದರಲ್ಲಿ ಎಲ್ಲವೂ ಅವಲಂಬಿತವಾಗಿದೆ. ಆದರೆ, ಪಂದ್ಯದಲ್ಲಿ ಬೌಲಿಂಗ್‌ ಪ್ರಮುಖ ಪಾತ್ರವಹಿಸುತ್ತದೆ. ಉತ್ತಮವಾಗಿ ಬೌಲ್‌ ಮಾಡುವ ತಂಡ ಫೈನಲ್‌ ಹಣಾಹಣಿ  ಗೆಲ್ಲಲಿದೆ. ಖಂಡಿತಾ ಇದು ಕಠಿಣ ಪಂದ್ಯವಾಗಿರುತ್ತದೆ. ಸೌತಾಂಪ್ಟನ್‌ ಪಿಚ್‌ನಲ್ಲಿ ಯಾವ ಬೌಲರ್‌ ಅತ್ಯುತ್ತಮವಾಗಿ ಬೌಲಿಂಗ್‌ ಮಾಡುತ್ತಾರೆಂದು ನೀವು ನೋಡಬೇಕಾಗಿದೆ. ಭಾರತ ತಂಡದ ಲೈನ್‌ಅಪ್‌ ಬಗ್ಗೆ ಮಾತನಾಡುವುದಾದರೆ, ಅವರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕಿವೀಸ್‌ ರೀತಿಯಲ್ಲಿಯೇ ಕೊಹ್ಲಿ  ಬಳಗದಲ್ಲಿ ಉತ್ತಮ ಪ್ರತಿಭೆಗಳಿದ್ದಾರೆ. ಇಲ್ಲಿನ ಸವಾಲಿಗೆ ಭಾರತ ಹೋಲಿಕೆಯಾಗುತ್ತದೆ ಎಂದು ಬ್ರೆಟ್ ಲೀ ಹೇಳಿದ್ದಾರೆ.

ಇನ್ನು ಭಾರತ ತಂಡ ಗುರುವಾರ ಏಗಾಸ್ ಬೌಲ್ ಹೋಟೆಲ್‌ ತಲುಪಿದ್ದು, ಬಯೋ ಬಬಲ್‌ಗೆ ಪ್ರವೇಶ ಮಾಡುವುದಕ್ಕೂ ಮುನ್ನ ಕ್ವಾರಂಟೈನ್‌ ಅವಧಿ ಮುಗಿಸಬೇಕಾಗಿದೆ. ಮತ್ತೊಂದೆಡೆ ನ್ಯೂಜಿಲೆಂಡ್‌ ತಂಡ ಈಗಾಗಲೇ ಇಂಗ್ಲೆಂಡ್‌ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಎದುರಿಸುತ್ತಿದೆ. ಲಾರ್ಡ್ಸ್  ಪಂದ್ಯ ಮುಗಿದ ಬಳಿಕ ಎರಡನೇ ಪಂದ್ಯವಾಡಲಿದೆ. 

ಕಳೆದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ಪೈನಲ್‌ನಲ್ಲಿ ಸೋತಿತ್ತು. ಮತ್ತೊಂದೆಡೆ ಭಾರತ ತಂಡ ನಿಯಮಿತವಾಗಿ ಐಸಿಸಿ ಟೂರ್ನಿಗಳಲ್ಲಿ ನಾಕೌಟ್‌ ತಲುಪುತ್ತಿದೆ. 2015 ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಸೆಮಿಫೈನಲ್‌ ತಲುಪಿತ್ತು. 2016 ಟಿ20 ವಿಶ್ವಕಪ್‌ನಲ್ಲಿ  ಸೆಮಿಫೈನಲ್‌ ಹಾಗೂ 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕೊಹ್ಲಿ ಪಡೆ ರನ್ನರ್‌ ಅಪ್‌ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com