ಟಿ-20 ವಿಶ್ವಕಪ್ ಭಾರತದಿಂದ ಸ್ಥಳಾಂತರಕ್ಕೆ ಸಜ್ಜು: ಐಸಿಸಿಗೆ ಬಿಸಿಸಿಐ ಆಂತರಿಕವಾಗಿ ಮಾಹಿತಿ ರವಾನೆ

ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ನಿಗದಿಯಾಗಿರುವ ಟಿ-20 ವಿಶ್ವಕಪ್ ಟೂರ್ನಮೆಂಟ್ ನ್ನು ಭಾರತದಿಂದ ಯುಎಎ ಮತ್ತು ಒಮನ್ ಗೆ ಸ್ಥಳಾಂತರಕ್ಕೆ ಸಿದ್ಧತೆ ನಡೆದಿದೆ. ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯಿಂದಾಗಿ ಸ್ಥಳಾಂತರಕ್ಕೆ ಸಜ್ಜುಗೊಳ್ಳುವಂತೆ ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಆಂತರಿಕವಾಗಿ ತಿಳಿಸಿದೆ.
ಐಸಿಸಿ
ಐಸಿಸಿ

ನವದೆಹಲಿ:  ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ನಿಗದಿಯಾಗಿರುವ ಟಿ-20 ವಿಶ್ವಕಪ್ ಟೂರ್ನಮೆಂಟ್ ನ್ನು ಭಾರತದಿಂದ ಯುಎಎ ಮತ್ತು ಒಮನ್ ಗೆ ಸ್ಥಳಾಂತರಕ್ಕೆ ಸಿದ್ಧತೆ ನಡೆದಿದೆ. ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯಿಂದಾಗಿ ಸ್ಥಳಾಂತರಕ್ಕೆ ಸಜ್ಜುಗೊಳ್ಳುವಂತೆ ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಆಂತರಿಕವಾಗಿ ತಿಳಿಸಿದೆ.

ಯುಎಇ ಯಾವಾಗಲೂ ಮೊದಲ ಆಯ್ಕೆಯಾಗಿರುತ್ತದೆ. ಅಬು ದಾಬಿ, ದುಬೈ ಮತ್ತು ಶರ್ಜಾ ಹೊರತುಪಡಿಸಿದಂತೆ ಒಮಾನ್ ರಾಜಧಾನಿ ಮಸ್ಕತ್ ಕ್ರೀಡಾಂಗಣ ನಾಲ್ಕನೇಯದಾಗಿ ಸೇರಿದ್ದು, ಅಕ್ಟೋಬರ್ ಕೊನೆಯ ವಾರದಿಂದ ಟೂರ್ನಮೆಂಟ್ ಆರಂಭವಾಗಲಿದೆ.

 ಐಸಿಸಿ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಬಿಸಿಸಿಐ ಔಪಚಾರಿಕವಾಗಿ ಹೇಳಿದೆ. ಆದರೆ, ಆಂತರಿಕವಾಗಿ, ಪಂದ್ಯಾವಳಿ ನಡೆಸುವ ಹಕ್ಕುಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ ಮತ್ತು ಯುಎಇ ಮತ್ತು ಓಮನ್‌ನಲ್ಲಿ  ಪಂದ್ಯಾವಳಿ ನಡೆಸುವುದಕ್ಕೆ ಅವರಿಗೆ ಮನಸಿಲ್ಲ ಎಂದು ಐಸಿಸಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಯುಎಇನಲ್ಲಿನ ಮೂರು ಕ್ರೀಡಾಂಗಣಗಳ ಜೊತೆಗೆ ಮಸ್ಕತ್ ಕ್ರೀಡಾಂಗಣಕ್ಕೂ ಅವಕಾಶ ನೀಡಲಾಗುವುದು, ಅಕ್ಟೋಬರ್ 10ರೊಳಗೆ ಐಪಿಎಲ್ ಮುಗಿದರೆ, ನವೆಂಬರ್ ತಿಂಗಳಿನಿಂದ ಯುಎಇನಲ್ಲಿ ವಿಶ್ವ ಟಿ-20 ಟೂರ್ನಮೆಂಟ್ ಆರಂಭವಾಗಲಿದೆ. ಈ ಮಧ್ಯೆ ಒಮನ್ ನಲ್ಲಿ ಮೊದಲ ವಾರದಲ್ಲಿ ಪಂದ್ಯಾವಳಿ ನಡೆಸಬಹುದು ಎಂದು ಅವರು ತಿಳಿಸಿದ್ದಾರೆ.

ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಕೋವಿಡ್ ಮೂರನೇ ಅಲೆ ಎದುರಾದರೆ  ಭಾರತದಲ್ಲಿ ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಐಸಿಸಿಯ ಬಹುತೇಕ ಸದಸ್ಯರು ಹೇಳುತ್ತಿದ್ದಾರೆ. ಸೆಪ್ಟೆಂಬರ್ ನಲ್ಲಿ ಎಂಟು ತಂಡಗಳ ಐಪಿಎಲ್ ಪಂದ್ಯಾವಳಿ ಪುನರ್ ಆರಂಭಿಸಲು ಬಿಸಿಸಿಐನಿಂದ ಹೇಗೆ ಸಾಧ್ಯ ಎಂಬುದು ಕೂಡಾ ಇದೀಗ ಪ್ರಶ್ನೆಯಾಗಿದೆ.

ಹೆಚ್ಚಿನ ಸೋಂಕು ಪ್ರಕರಣಗಳೊಂದಿಗೆ ಬಬಲ್‌ನಲ್ಲಿ ಪರಿಣಾಮ ಬೀರುವ ಒಂದು ತಂಡವಿದ್ದರೆ, ಅದು ಐಪಿಎಲ್‌ನಂತೆ ಆಗುವುದಿಲ್ಲ. ಈ ರೀತಿಯ ಅನೇಕ ಸಮಸ್ಯೆಗಳು ಇರುವುದಾಗಿ ಅವರು ಹೇಳಿದ್ದಾರೆ.

ಕೋವಿಡ್ ಪರಿಸ್ಥಿತಿ ಸುಧಾರಿಸದಿದ್ದರೆ ವಿದೇಶದ ಆಟಗಾರರು ಬಂದು ಹೇಗೆ ಆಡಲು ಸಾಧ್ಯ, ಯುಎಇಗೆ ಬಂದು ಐಪಿಎಲ್ ಆಡಿದರೆ, ಸಂತೋಷದಿಂದ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿಯೂ ಆಡಲಿದ್ದಾರೆ ಎಂದು ಮತ್ತೋರ್ವ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com