ಮೈದಾನದಲ್ಲಿ ಸ್ಟಂಪ್ ಒದ್ದು ಶಕೀಬ್ ಅಲ್ ಹಸನ್ ದುರ್ವತನೆ: ವಿಡಿಯೋ ವೈರಲ್, ನೆಟ್ಟಿಗರಿಂದ ಆಕ್ರೋಶ!

ದೇಶೀಯ ಟಿ20 ಪಂದ್ಯದ ವೇಳೆ ಮೈದಾನದಲ್ಲಿ ಆಕ್ರೋಶದಿಂದ ಸ್ಟಂಪ್ ಒದ್ದು, ಅಂಪೈರ್ ಜೊತೆ ವಾಗ್ವಾದ ನಡೆಸಿರುವ ಬಾಂಗ್ಲಾದೇಶ ಆಲ್ರೌಂಡರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್ ವಿಡಿಯೋ ಇದೀಗ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗಿದೆ.  
ಶಕೀಬ್ ಅಲ್ ಹಸನ್
ಶಕೀಬ್ ಅಲ್ ಹಸನ್

ಢಾಕಾ: ದೇಶೀಯ ಟಿ20 ಪಂದ್ಯದ ವೇಳೆ ಮೈದಾನದಲ್ಲಿ ಆಕ್ರೋಶದಿಂದ ಸ್ಟಂಪ್ ಒದ್ದು, ಅಂಪೈರ್ ಜೊತೆ ವಾಗ್ವಾದ ನಡೆಸಿರುವ ಬಾಂಗ್ಲಾದೇಶ ಆಲ್ರೌಂಡರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್ ವಿಡಿಯೋ ಇದೀಗ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗಿದೆ.  

ಪಂದ್ಯಾವಳಿಯಲ್ಲಿ ಮೊಹಮ್ಮದನ್ ಸ್ಪೋರ್ಟಿಂಗ್ ತಂಡ ಡಕ್ವರ್ತ್-ಲೂಯಿಸ್ ವಿಧಾನದ ಮೂಲಕ ಗೆಲುವು ದಾಖಲಿಸಿತ್ತು. ಢಾಕಾ ಪ್ರೀಮಿಯರ್ ಲೀಗ್(ಡಿಪಿಎಲ್) ಪಂದ್ಯಾವಳಿಯ ಅಬಹಾನಿ ಲಿಮಿಟೆಡ್ ಮತ್ತು ಮೊಹಮ್ಮದನ್ ಸ್ಪೋರ್ಟಿಂಗ್ ನಡುವಿನ ಪಂದ್ಯದ ವೇಳೆ ಶಕೀಬ್ ಆಕ್ರೋಶಭರಿತ ವರ್ತನೆ ತೋರಿದ್ದರು.

ಸ್ಟಂಪ್ ಗಳನ್ನು ಒದೆಯುವ ಮೂಲಕ 3ನೇ ಹಂತದ ಅಪರಾಧ ಮಾಡಿದ್ದಾರೆ. ಶಕೀಬ್ ಅವರ ಕ್ಷಮೆಯಾಚನೆಯ ಹೊರತಾಗಿಯೂ ಬಾಂಗ್ಲಾದೇಶದ ಮಾಜಿ ನಾಯಕನಿಗೆ ಒಂದು ಪಂದ್ಯದ ಅಮಾನತಿಗೆ ಕಾರಣವಾಗಬಹುದು.

ನಾನು ಸಂಯಮ ಕಳೆದುಕೊಂಡು ಎಲ್ಲರಿಗೂ ಮತ್ತು ವಿಶೇಷವಾಗಿ ಮನೆಯಿಂದ ನೋಡುತ್ತಿರುವವರಿಗೆ ಪಂದ್ಯವನ್ನು ಹಾಳು ಮಾಡಿದ್ದಕ್ಕಾಗಿ ನಾನು ತುಂಬಾ ವಿಷಾದಿಸುತ್ತೇನೆ. ನನ್ನಂತಹ ಒಬ್ಬ ಅನುಭವಿ ಆಟಗಾರನು ಆ ರೀತಿ ಪ್ರತಿಕ್ರಿಯಿಸಬಾರದು ಆದರೆ ಕೆಲವೊಮ್ಮೆ ಎಲ್ಲಾ ವಿಲಕ್ಷಣಗಳ ವಿರುದ್ಧವೂ ದುರದೃಷ್ಟವಶಾತ್ ಸಂಭವಿಸುತ್ತದೆ"ಎಂದು ಶಕೀಬ್ ತನ್ನ ಫೇಸ್‌ಬುಕ್ ಪುಟದಲ್ಲಿ ಅಧಿಕೃತ ಕ್ಷಮೆಯಾಚಿಸಿದರು.

ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಶ್ಫಿಕೂರ್ ರಹೀಮ್ ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರಿಂದ ಕೋಪಗೊಂಡ ಶಕೀಬ್ ಮೊದಲಿಗೆ ಸ್ಟಂಪ್‌ಗೆ ಒದ್ದರು. ನಂತರ ಅಬಹಾನಿ ಇನ್ನಿಂಗ್ಸ್‌ನ ಆರನೇ ಓವರ್‌ ನ ಸಂದರ್ಭದಲ್ಲಿ ಮಳೆ ವಿರಾಮಕ್ಕೆ ಅಂಪೈರ್ ಗಳು ಕರೆ ನೀಡಿದ್ದರು. ಆಗ ಶಕೀಬ್ ಮೂರು ಸ್ಟಂಪ್‌ಗಳನ್ನು ಕಿತ್ತುಹಾಕಿದರು. ಈ ವಿಡಿಯೋ ವೈರಲ್ ಆಗಿದ್ದು ಶಕೀಬ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. 

34 ವರ್ಷದ ಶಕೀಬ್ 10,000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ್ದು ಅಲ್ಲದೆ ಸುಮಾರು 600 ವಿಕೆಟ್‌ಗಳನ್ನು ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com