ಡಿಪಿಎಲ್ ವೇಳೆ ದುರ್ವತನೆ: ಶಕೀಬ್ ಅಲ್ ಹಸನ್ ಗೆ 4 ಪಂದ್ಯ ನಿಷೇಧ

ದೇಶೀಯ ಟಿ20 ಢಾಕಾ ಪ್ರಿಮಿಯರ್ ಲೀಗ್ ವೇಳೆ ಮೈದಾನದಲ್ಲಿ ಆಕ್ರೋಶದಿಂದ ಸ್ಟಂಪ್ ಒದ್ದು, ಅಂಪೈರ್ ಜೊತೆ ವಾಗ್ವಾದ ನಡೆಸಿದ್ದ ಬಾಂಗ್ಲಾದೇಶ ಆಲ್ರೌಂಡರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಈಗ ಬೆಲೆ ತೆತ್ತಿದ್ದಾರೆ.
ಶಕೀಬ್ ಅಲ್ ಹಸನ್
ಶಕೀಬ್ ಅಲ್ ಹಸನ್

ಢಾಕಾ: ದೇಶೀಯ ಟಿ20 ಢಾಕಾ ಪ್ರಿಮಿಯರ್ ಲೀಗ್ ವೇಳೆ ಮೈದಾನದಲ್ಲಿ ಆಕ್ರೋಶದಿಂದ ಸ್ಟಂಪ್ ಒದ್ದು, ಅಂಪೈರ್ ಜೊತೆ ವಾಗ್ವಾದ ನಡೆಸಿದ್ದ ಬಾಂಗ್ಲಾದೇಶ ಆಲ್ರೌಂಡರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಈಗ ಬೆಲೆ ತೆತ್ತಿದ್ದಾರೆ. 

ಮೊಹಮ್ಮದಿನ್ ಸ್ಪೋರ್ಟಿಂಗ್ ತಂಡದ ನಾಯಕ ಶಕೀಬ್ ಅಲ್ ಹಸನ್ ಗೆ ನಾಲ್ಕು ಪಂದ್ಯಗಳ ನಿಷೇಧ ಹೇರಲಾಗಿದೆ. ಹೀಗಾಗಿ ಎಂಟು, ಒಂಬತ್ತು, ಹತ್ತು ಮತ್ತು ಹನ್ನೊಂದನೆ ಹಂತದ ಪಂದ್ಯಗಳಲ್ಲಿ ಆಡುವಂತಿಲ್ಲ.

ಟೂರ್ನಿಯಲ್ಲಿ ಅಬಹಾನಿ ಲಿಮಿಟೆಡ್ ವಿರುದ್ಧ ಮೊಹಮ್ಮದಿನ್ ಸ್ಪೋರ್ಟಿಂಗ್ ತಂಡ ಡಕ್ವರ್ತ್-ಲೂಯಿಸ್ ವಿಧಾನದ ಮೂಲಕ ಗೆಲುವು ದಾಖಲಿಸಿತ್ತು. ಆದರೆ ಪಂದ್ಯದ ವೇಳೆ ಶಕೀಬ್ ಆಕ್ರೋಶಭರಿತ ವರ್ತನೆ ತೋರಿದ್ದರು.

ಸ್ಟಂಪ್ ಗಳನ್ನು ಒದೆಯುವ ಮೂಲಕ 3ನೇ ಹಂತದ ಅಪರಾಧ ಎಸಗಿದ್ದರು. ಹೀಗಾಗಿ ಅವರಿಗೆ ನಾಲ್ಲು ಪಂದ್ಯಗಳ ನಿಷೇದ ಹೇರಲಾಗಿದೆ ಎಂದು ಬಾಂಗ್ಲಾದೇಶದ ಕ್ರಿಕೆಟ್ ಪೋರ್ಟಲ್ ಬಿಡಿ ಕ್ರಿಕ್ ಟೈಮ್ ವರದಿ ಮಾಡಿದೆ. 

ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಶ್ಫಿಕೂರ್ ರಹೀಮ್ ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರಿಂದ ಕೋಪಗೊಂಡ ಶಕೀಬ್ ಮೊದಲಿಗೆ ಸ್ಟಂಪ್‌ಗೆ ಒದ್ದರು. ನಂತರ ಅಬಹಾನಿ ಇನ್ನಿಂಗ್ಸ್‌ನ ಆರನೇ ಓವರ್‌ ನ ಸಂದರ್ಭದಲ್ಲಿ ಮಳೆ ವಿರಾಮಕ್ಕೆ ಅಂಪೈರ್ ಗಳು ಕರೆ ನೀಡಿದ್ದರು. ಆಗ ಶಕೀಬ್ ಮೂರು ಸ್ಟಂಪ್‌ಗಳನ್ನು ಕಿತ್ತುಹಾಕಿದರು. ಈ ವಿಡಿಯೋ ವೈರಲ್ ಆಗಿದ್ದು ಶಕೀಬ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. 

ಈ ಬಗ್ಗೆ ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದ ಶಕೀಬ್, ಸಂಯಮ ಕಳೆದುಕೊಂಡು ಎಲ್ಲರಿಗೂ ಮತ್ತು ವಿಶೇಷವಾಗಿ ಮನೆಯಿಂದ ನೋಡುತ್ತಿರುವವರಿಗೆ ಪಂದ್ಯವನ್ನು ಹಾಳು ಮಾಡಿದ್ದಕ್ಕಾಗಿ ನಾನು ತುಂಬಾ ವಿಷಾದಿಸುತ್ತೇನೆ. ನನ್ನಂತಹ ಒಬ್ಬ ಅನುಭವಿ ಆಟಗಾರನು ಆ ರೀತಿ ಪ್ರತಿಕ್ರಿಯಿಸಬಾರದು ಆದರೆ ಕೆಲವೊಮ್ಮೆ ಎಲ್ಲಾ ವಿಲಕ್ಷಣಗಳ ವಿರುದ್ಧವೂ ದುರದೃಷ್ಟವಶಾತ್ ಸಂಭವಿಸುತ್ತದೆ"ಎಂದು ಫೇಸ್‌ಬುಕ್ ಪುಟದಲ್ಲಿ ಅಧಿಕೃತ ಕ್ಷಮೆಯಾಚಿಸಿದರು.

34 ವರ್ಷದ ಶಕೀಬ್ 10,000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ್ದು ಅಲ್ಲದೆ ಸುಮಾರು 600 ವಿಕೆಟ್‌ಗಳನ್ನು ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com