ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ಮಳೆ ಕಾಟ: ಮೊದಲ ಸೆಷನ್ ಬಲಿ, ಮೈದಾನ ಸಜ್ಜುಗೊಳಿಸಲು ಹರಸಾಹಸ!

ಐತಿಹಾಸಿಕ ಪಂದ್ಯ ಎಂದೇ ಹೇಳಲಾಗುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ಮಳೆರಾಯ ಇನ್ನಿಲ್ಲದಂತೆ ಕಾಡುತ್ತಿದ್ದು, ಮಳೆಯ ಆರ್ಭಟಕ್ಕೆ ದಿನದಾಟದ ಮೊದಲ ಸೆಷನ್ ಬಲಿಯಾಗಿದೆ.
ಸೌಥಂಪ್ಟನ್ ನಲ್ಲಿ ನಿರಂತರವಾಗಿ ಮಳೆ
ಸೌಥಂಪ್ಟನ್ ನಲ್ಲಿ ನಿರಂತರವಾಗಿ ಮಳೆ

ಸೌಥಾಂಪ್ಟನ್: ಐತಿಹಾಸಿಕ ಪಂದ್ಯ ಎಂದೇ ಹೇಳಲಾಗುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ಮಳೆರಾಯ ಇನ್ನಿಲ್ಲದಂತೆ ಕಾಡುತ್ತಿದ್ದು, ಮಳೆಯ ಆರ್ಭಟಕ್ಕೆ ದಿನದಾಟದ ಮೊದಲ ಸೆಷನ್ ಬಲಿಯಾಗಿದೆ.

ಹೌದು.. 144 ವರ್ಷಗಳ ಇತಿಹಾಸವಿರುವ ಟೆಸ್ಟ್ ಕ್ರಿಕೆಟ್ ಮೊಟ್ಟ ಮೊದಲ ಚಾಂಪಿಯನ್ ಷಿಪ್ ನ ಫೈನಲ್ ಪಂದ್ಯಕ್ಕೆ ಮಳೆರಾಯ ಇನ್ನಿಲ್ಲದಂತೆ ಕಾಡುತ್ತಿದ್ದು, ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮೊದಲ ದಿನದಾಟದ ಮೊದಲ ಸೆಷನ್ ಬಲಿಯಾಗಿದೆ. ನಿನ್ನೆಯಿಂದಲೂ ಸತತವಾಗಿ ಸುರಿಯುತ್ತಿರುವ  ಮಳೆಯಿಂದಾಗದಿ ಐತಿಹಾಸಿಕ ಪಂದ್ಯದ ಟಾಸ್ ಕೂಡ ಆರಂಭವಾಗಿಲ್ಲ. ಹೀಗಾಗಿ ವಿಶ್ವ ಶ್ರೇಷ್ಠ ಆಟಗಾರರ ಸೆಣಸಾಟ ಎಂದೆಲ್ಲಾ ವಿಶ್ವ ಕ್ರಿಕಟ್ ನ ಕುತೂಹಲ ಕೆರಳಿಸಿದ್ದ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಇದೀಗ ನಿಗದಿತ ಸಮಯಕ್ಕೆ ಆರಂಭವಾಗುತ್ತಿಲ್ಲ. 

ಇಂಗ್ಲೆಂಡ್ ನ ಸೌಥಂಪ್ಟನ್ ನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನಿನ್ನೆಯಿಂದಲೂ ಅಲ್ಲಿ ಮಳೆಯಾಗುತ್ತಿದೆ. ಸದ್ಯ ಮಳೆ ಕಡಿಮೆಯಾಗಿದ್ದರೂ ನಿಗದಿತ ಸಮಯದಲ್ಲಿ ಪಂದ್ಯ ಆರಂಭವಾಗುವುದಿಲ್ಲ. ಮೈದಾನದ ಹೊರಾಂಗಣ ಮಳೆಯಿಂದಾಗಿ ಸಂಪೂರ್ಣ ತೊಯ್ದು ಹೋಗಿದ್ದು, ಮಳೆ ನಿಂತ ಬಳಿಕ ಅದನ್ನು ಆಟಕ್ಕೆ  ಸಜ್ಜುಗೊಳಿಸಬೇಕಿದೆ.

ಆದರೆ ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ ಮೈದಾನವನ್ನು ಮತ್ತೆ ಆಟಕ್ಕೆ ಸಜ್ಜುಗೊಳಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮೊದಲ ಸೆಷನ್ ಆಟ ಬಲಿಯಾಗಿದ್ದು, ಇದೀಗ ಮಳೆ ಹೀಗೆಯೇ ಮುಂದುವರೆದರೆ 2ನೇ ಸೆಷನ್ ಆಟ ಕೂಡ ಸ್ಥಗಿತವಾಗಲಿದೆ ಎಂದು ಕ್ರಿಕೆಟ್ ತಜ್ಞರು ಆತಂಕ  ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ವರದಿಗಳು ಬಂದಾಗ 2ನೇ ಸೆಷನ್ ಆಟ ಮುಕ್ತಾಯಕ್ಕೆ ಕೇವಲ 7 ಓವರ್ ಗಳಷ್ಟು ಸಮಯ ಮಾತ್ರ ಬಾಕಿ ಇದ್ದು, ಇನ್ನೂ ಮೈದಾನದಲ್ಲಿ ಸಾಕಷ್ಟು ನೀರಿದೆ. ಹೀಗಾಗಿ 2ನೇ ಸೆಷನ್ ಆಟ ಕೂಡ ಬಲಿಯಾಗುವುದು ಸ್ಪಷ್ಟ ಎಂದು ಹೇಳಲಾಗುತ್ತಿದೆ. ಆದರೆ ಐತಿಹಾಸಿಕ ಟೆಸ್ಟ್ ರೋಚಕ ಕ್ಷಣಗಳನ್ನು  ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳು ಮಾತ್ರ ಮಳೆರಾಯ ದಯವಿಟ್ಟು ಕೃಪೆ ತೋರಿ, ನಿನ್ನ ಆರ್ಭಟ ನಿಲ್ಲಿಸು ಎಂದು ಪ್ರಾರ್ಥಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com