WTC ಫೈನಲ್: ನ್ಯೂಜಿಲೆಂಡ್ ಆಟಗಾರರಿಗೆ ನಿಂದನೆ ಆರೋಪ; ಇಬ್ಬರು ಪ್ರೇಕ್ಷಕರನ್ನು ಹೊರಗೆ ಕಳಿಸಿದ ಸಿಬ್ಬಂದಿ

ಐತಿಹಾಸಿಕ ವಿಶ್ವ ಟೆಸ್ಟ್‌ ಚಾಂಪಿಯನ್‌ ಷಿಫ್‌ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಆಟಗಾರರನ್ನು ನಿಂದಿಸಿದ ಆರೋಪದ ಮೇರೆಗೆ ಇಬ್ಬರು ಪ್ರೇಕ್ಷಕರನ್ನು ಮೈದಾನದಿಂದ ಹೊರಗೆ ಹಾಕಿರುವ ಘಟನೆ ನಡೆದಿದೆ. 
ಸೌಥ್ಯಾಂಪ್ಟನ್‌ ಮೈದಾನ
ಸೌಥ್ಯಾಂಪ್ಟನ್‌ ಮೈದಾನ

ಸೌಥ್ಯಾಂಪ್ಟನ್‌: ಐತಿಹಾಸಿಕ ವಿಶ್ವ ಟೆಸ್ಟ್‌ ಚಾಂಪಿಯನ್‌ ಷಿಫ್‌ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಆಟಗಾರರನ್ನು ನಿಂದಿಸಿದ ಆರೋಪದ ಮೇರೆಗೆ ಇಬ್ಬರು ಪ್ರೇಕ್ಷಕರನ್ನು ಮೈದಾನದಿಂದ ಹೊರಗೆ ಹಾಕಿರುವ ಘಟನೆ ನಡೆದಿದೆ. 

ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ ಷಿಫ್‌ ಫೈನಲ್ ಪಂದ್ಯದ ಐದನೇ ದಿನದಾಟದಲ್ಲಿ ಕ್ರೀಡಾಂಗಣದಲ್ಲಿ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಮೈದಾನದಲ್ಲಿ ಕೊಂಚ ಭಾರತೀಯ ಪ್ರೇಕ್ಷಕರೇ ಹೆಚ್ಚಿದ್ದರು. ಈ ವೇಳೆ ಇಬ್ಬರು ಭಾರತ ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು  ಹೊಗಳುವ ಭರದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರನ್ನು ನಿಂದಿಸಿದ್ದಾರೆ. ಈ ಕುರಿತಂತೆ ಆಟಗಾರರು ಅಂಪೈರ್ ಗಳಿಗೆ ಮಾಹಿತಿ ನೀಡಿದ್ದು, ಅಂಪೈರ್ ಗಳ ಸೂಚನೆಯಂತೆ ಕೆಟ್ಟದಾಗಿ ನಡೆದುಕೊಂಡ ಇಬ್ಬರು ಪ್ರೇಕ್ಷಕರನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ.

ಬಳಿಕ ಅಂಪೈರ್ ಗಳು ಐಸಿಸಿಗೆ ವರದಿ ನೀಡಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಸಿಸಿ, ಕ್ರಿಕೆಟ್‌ನಲ್ಲಿ ಈ ರೀತಿಯ ನಡವಳಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾತನಾಡಿರುವ ಕ್ರಿಕೆಟಿಗ ಟಿಮ್ ಸೌಥಿ, ಇಂತಹ ಘಟನೆ ಸಂಭವಿಸಿರುವ ಬಗ್ಗೆ ನಾನು ಮೊದಲು ಕೇಳುತ್ತಿದ್ದೇನೆ. ಮೈದಾನದಲ್ಲಿ ಯಾವಾಗಲೂ ಆಟವನ್ನು ಸ್ಪೂರ್ತಿಯಿಂದ ಆಡಬೇಕು ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 249 ರನ್‌ಗಳನ್ನು ಕಲೆಹಾಕಿದ್ದು, ಅಲ್ಪ ಮುನ್ನಡೆ ಸಾಧಿಸಿದೆ. 5ನೇ ದಿನದಾಟದಂದು ಬ್ಯಾಟಿಂಗ್‌ ಮುಂದುವರಿಸಿದ ಕಿವೀಸ್‌ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 32 ರನ್‌ಗಳ ಮುನ್ನಡೆ ಸಾಧಿಸಲಷ್ಟೇ ಶಕ್ತವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com