ಭಾರತ ವನಿತೆಯರಿಗೆ ನಿರಾಸೆ: ಇಂಗ್ಲೆಂಡ್ ಗೆ 8 ವಿಕೆಟ್ ಜಯ

ಭರವಸೆಯ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಹಾಗೂ ನ್ಯಾಟ್ ಸ್ಕಿವರ್ ಅವರ ಭರ್ಜರಿ ಆಟದ ನೆರವಿನಿಂದ ಇಲ್ಲಿ ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಎಂಟು ವಿಕೆಟ್ ಗಳಿಂದ ಭಾರತ ವನಿತೆಯರನ್ನು ಮಣಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸಿತು.
ಇಂಗ್ಲೆಂಡ್ ತಂಡದ ಆಟಗಾರ್ತಿಯರು
ಇಂಗ್ಲೆಂಡ್ ತಂಡದ ಆಟಗಾರ್ತಿಯರು

ಬ್ರಿಸ್ಟಲ್: ಭರವಸೆಯ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಹಾಗೂ ನ್ಯಾಟ್ ಸ್ಕಿವರ್ ಅವರ ಭರ್ಜರಿ ಆಟದ ನೆರವಿನಿಂದ ಇಲ್ಲಿ ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಎಂಟು ವಿಕೆಟ್ ಗಳಿಂದ ಭಾರತ ವನಿತೆಯರನ್ನು ಮಣಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ 34.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 202 ರನ್ ಕಲೆ ಹಾಕಿ ಗೆಲುವು ದಾಖಲಿಸಿತು. 

ಭಾರತದ ಪರ ಆರಂಭಿಕರಾದ ಸ್ಮೃತಿ ಮಂದಾನ 10, ಶಫಾಲಿ ವರ್ಮಾ 15 ರನ್ ಸೇರಿಸಿ ನಿರಾಸೆ ಅನುಭವಿಸಿದರು. ಮೂರನೇ ವಿಕೆಟ್ ಗೆ ಪೂನಮ್ ರಾವತ್ ಹಾಗೂ ಮಿಥಾಲಿ ರಾಜ್ ಜೋಡಿ ತಂಡಕ್ಕೆ ಚೇತರಿಕೆ ನೀಡಿದರು. ಕೆಟ್ಟ ಎಸೆತಗಳನ್ನು ಎದರಿಸುತ್ತಾ ಸಾಗಿದ ಜೋಡಿ, ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾಯಿತು. ಈ ಜೋಡಿ 56 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಪೂನಮ್ ರಾವತ್ 32 ರನ್ ಗಳಿಗೆ ಆಟ ಮುಗಿಸಿದರು. ಹರ್ಮನ್ ಪ್ರೀತ್ ಕೌರ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು.

ಐದನೇ ವಿಕೆಟ್ ಗೆ ದೀಪ್ತಿ ಶರ್ಮಾ (30) ಹಾಗೂ ಮಿಥಾಲಿ ಜೋಡಿ ಸೊಗಸಾದ ಆಟದ ಪ್ರದರ್ಶನ ನೀಡಿತು. ಈ ಜೋಡಿ ಸುಮಾರು 14 ಓವರ್ ಬ್ಯಾಟಿಂಗ್ ನಡೆಸಿ 65 ರನ್ ಸೇರಿಸಿತು. ಆರನೇ ವಿಕೆಟ್ ಗೆ ಮಿಥಾಲಿ ಹಾಗೂ ಪೂಜಾ ವಸ್ತ್ರಕರ್ ಜೋಡಿ 31 ರನ್ ಸೇರಿಸಿತು. ಮಿಥಾಲಿ 108 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 72 ರನ್ ಸೇರಿಸಿದರು.

ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ 3, ಅನ್ಯಾ ಶ್ರಬ್ಸೋಲ್ ಮತ್ತು ಕ್ಯಾಥರೀನ್ ಬ್ರಂಟ್ ತಲಾ ಎರಡು ವಿಕೆಟ್ ಕಬಳಿಸಿದರು.
ಆತಿಥೇಯ ತಂಡದ ಪರ ಲಾರೆನ್ ವಿನ್ಫೀಲ್ಡ್-ಹಿಲ್ (16) ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಯಕಿ ಹೀದರ್ ನೈಟ್ ಹಾಗೂ ಟಮ್ಮಿ ಬ್ಯೂಮಾಂಟ್ ಅವರನ್ನು ಸೇರಿಕೊಂಡು ತಂಡಕ್ಕೆ ಕೊಂಚ ಆಧಾರವಾದರು. ಈ ಜೋಡಿ 59 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾಯಿತು.

ಮೂರನೇ ವಿಕೆಟ್ ಗೆ ಸ್ಕೀವರ್ ಅವರು ಟಮ್ಮಿ ಬ್ಯೂಮಾಂಟ್ ರನ್ನು ಸೇರಿಕೊಂಡು ಇನ್ನಿಂಗ್ಸ್ ಬೆಳೆಸುತ್ತಾ ಸಾಗಿದರು. ಇವರನ್ನು ಕಟ್ಟಿ ಹಾಕಲು ಭಾರತ ತಂಡ ಮಾಡಿಕೊಂಡ ಯೋಜನೆ ಕೈ ಕೊಟ್ಟಿತು. ಈ ಜೋಡಿ ಅಜೇಯ 119 ರನ್ ಜೊತೆಯಾಟವನ್ನು ನೀಡಿತು. ಟಮ್ಮಿ ಬ್ಯೂಮಾಂಟ್ 87 ಎಸೆತಗಳಲ್ಲಿ ಅಜೇಯ 87 ರನ್ ಸೇರಿಸಿತು. ಸ್ಕೀವರ್ 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 74 ರನ್ ಸಿಡಿಸಿ ತಂಡಕ್ಕೆ ನೆರವಾದರು.

ಭಾರತದ ಪರ ಜೂಲನ್ ಗೋಸ್ವಾಮಿ, ಏಕ್ತಾ ಬಿಷ್ಟ್ ತಲಾ ಒಂದು ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com