ಶ್ರೀಲಂಕಾ ವಿರುದ್ಧ ಸರಣಿ ಗೆಲ್ಲುವುದೇ ಗುರಿ: ರಾಹುಲ್ ದ್ರಾವಿಡ್

ಶ್ರೀಲಂಕಾದಲ್ಲಿ ನಡೆಯುವ ಸರಣಿಯನ್ನು ಗೆಲ್ಲುವುದೇ ತಂಡದ ಗುರಿ ಎಂದು ಭಾರತದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ಮುಂಬೈ: ಶ್ರೀಲಂಕಾದಲ್ಲಿ ನಡೆಯುವ ಸರಣಿಯನ್ನು ಗೆಲ್ಲುವುದೇ ತಂಡದ ಗುರಿ ಎಂದು ಭಾರತದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಈ ಪ್ರವಾಸವು ಕೆಲವು ಆಟಗಾರರಿಗೆ ಆಯ್ಕೆ ಸಮಿತಿ ಬಾಗಿಲು ಬಡಿದಿದ್ದು, ಉತ್ತಮ ಅವಕಾಶ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ,  ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಇದು ಕೆಲವು ಕ್ರಿಕೆಟಿಗರಿಗೆ ಡು-ಆರ್ -ಡೈ ಸರಣಿ ಎಂದು ಅರ್ಥವಲ್ಲ ಎಂದಿದ್ದಾರೆ.

ಭಾರತದ ಮಾಜಿ ನಾಯಕ ದ್ರಾವಿಡ್ ಭಾನುವಾರ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. "ನಾವು ಇಲ್ಲಿ ಸಂಪೂರ್ಣವಾಗಿ ವಿಭಿನ್ನ ಗುರಿಯನ್ನು ಹೊಂದಿದ್ದೇವೆ. ಇದು ಒಂದು ಸಣ್ಣ ಸರಣಿಯಾಗಿದೆ ಆದ್ದರಿಂದ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ. ಪ್ರವಾಸದಲ್ಲಿ ಆಯ್ಕೆದಾರರು ಸಹ ಇರುತ್ತಾರೆ ಮತ್ತು ನಾವು ಅತ್ಯುತ್ತಮ ಸಂಯೋಜನೆ ಎಂದು ಭಾವಿಸುವದನ್ನು ಪ್ರಯತ್ನಿಸುತ್ತೇವೆ. ಮತ್ತು ಸರಣಿಯನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ತಂಡದಲ್ಲಿ ಅನೇಕ ಯುವ ಆಟಗಾರರಿದ್ದಾರೆ ಮತ್ತು ಅವರಿಗೆ ಆಡಲು ಅವಕಾಶ ಸಿಗದಿದ್ದರೂ ಅದು ಅವರಿಗೆ ಉತ್ತಮ ಅನುಭವವಾಗಲಿದೆ. ಅನುಭವಿ ಶಿಖರ್ ಧವನ್, ಭುವನೇಶ್ವರ್ ಕುಮಾರ್ ಮತ್ತು ಇತರ ಹಿರಿಯ ಆಟಗಾರರೊಂದಿಗೆ ಇರುತ್ತಾರೆ ಮತ್ತು ಕಲಿಯುವ ಅವಕಾಶ ಲಭಿಸುತ್ತದೆ” ಎಂದು ದ್ರಾವಿಡ್ ತಿಳಿಸಿದ್ದಾರೆ.

"ಈ ವರ್ಷದ ಟಿ 20 ವಿಶ್ವಕಪ್‌ಗೆ ಮೊದಲು ಕೇವಲ ಮೂರು ಟಿ 20 ಪಂದ್ಯಗಳಿವೆ. ವಿಶ್ವಕಪ್ ಮತ್ತು ಐಪಿಎಲ್ ಮೊದಲು ಅವರು ಯಾವ ಆಟಗಾರರನ್ನು ಹುಡುಕುತ್ತಿದ್ದಾರೆ ಎಂಬುದರ ಬಗ್ಗೆ ಆಯ್ಕೆದಾರರು ಮತ್ತು ತಂಡದ ನಿರ್ವಹಣೆಗೆ ಸ್ಪಷ್ಟ ಕಲ್ಪನೆ ಇರುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com