ಈ ಬಾರಿಯಾದರೂ ಆರ್‌ಸಿಬಿ ಐಪಿಎಲ್ ಗೆಲ್ಲಬಹುದೇ? ಕೊಹ್ಲಿ ಯೋಜನೆಗಳ ಬಗ್ಗೆ ಕೋಚ್ ಕಟಿಚ್ ಹೀಗೆಂದರು!

ಪ್ರತಿ ಬಾರಿಯ ಐಪಿಎಲ್ ಟೂರ್ನಿಯಲ್ಲೂ ಈ ಬಾರಿ ಚೊಚ್ಚಲ ಟ್ರೋಫಿಯನ್ನು ಗೆದ್ದೆ ತೀರುತ್ತೇವೆ ಎಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಕಣಕ್ಕಿಳಿಯುತ್ತದೆ. ಆದರೆ ಅಂತಿಮವಾಗಿ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.

Published: 02nd March 2021 03:14 PM  |   Last Updated: 02nd March 2021 03:24 PM   |  A+A-


Kohli

ಕೊಹ್ಲಿ

Posted By : Vishwanath S
Source : The New Indian Express

ಬೆಂಗಳೂರು: ಪ್ರತಿ ಬಾರಿಯ ಐಪಿಎಲ್ ಟೂರ್ನಿಯಲ್ಲೂ ಈ ಬಾರಿ ಚೊಚ್ಚಲ ಟ್ರೋಫಿಯನ್ನು ಗೆದ್ದೆ ತೀರುತ್ತೇವೆ ಎಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ ಕಣಕ್ಕಿಳಿಯುತ್ತದೆ. ಆದರೆ ಅಂತಿಮವಾಗಿ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. 

ಯಾಕೆ ಆರ್ ಸಿಬಿ ಇನ್ನು ಒಂದು ಟ್ರೋಫಿ ಗೆದ್ದಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ? 2013ರಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ನೇಮಕಗೊಂಡಿದ್ದು ಅಂದಿನಿಂದಲೂ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುತ್ತಲೆ ಇದ್ದಾರೆ. ಕಾಲಕಾಲಕ್ಕೆ ಮಾಡಲಾಗುತ್ತಿರುವ ತಂತ್ರಗಳನ್ನು ಪ್ರಶ್ನಿಸಲಾಗುತ್ತಿದೆ. ಇನ್ನು ಸಿಬ್ಬಂದಿಗಳ ವಿಷಯಕ್ಕೆ ಬಂದರೆ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್ ಮತ್ತು ಇತರರು ಸೇರಿದಂತೆ ಕೆಲವು ಉನ್ನತ ದರ್ಜೆಯ ಆಟಗಾರರು ಇದ್ದರೂ ತಂಡ ಒಂದು ಬಾರಿಯೂ ಟ್ರೋಫಿ ಗೆಲ್ಲದಿರುವುದು ನಿಜಕ್ಕೂ ನಿರಾಶೆಯೆ ಸರಿ.

ಲೀಗ್‌ನ ಮೊದಲ ಆವೃತ್ತಿಯಿಂದ ಫ್ರ್ಯಾಂಚೈಸ್‌ನೊಂದಿಗಿರುವ ಕೊಹ್ಲಿ ನಾಯಕತ್ವ ವಹಿಸಿಕೊಂಡ ನಂತರ 2016ರಲ್ಲಿ ಆರ್ ಸಿಬಿ ಅತ್ಯುತ್ತಮ ಪ್ರದರ್ಶನ ನೀಡಿ ರನ್ನರ್ಸ್ ಅಪ್ ಆಗಿತ್ತು. ಕಳೆದ ನಾಲ್ಕು ಆವೃತ್ತಿಗಳಲ್ಲೂ ಪ್ಲೇಆಫ್ ಗೆ ತಲುಪಿದರೂ ಫೈನಲ್ ಗೆ ಪ್ರಶ್ನಿಸಿಲ್ಲ. 2017ರಿಂದ 2019ರವರೆಗೆ ಮೂರು ನೇರ ಋತುಗಳಲ್ಲಿ ಲೀಗ್ ಹಂತದಿಂದ ಹೊರಬಂದಿದೆ. ಕಳೆದ ಋತುವಿನಲ್ಲಿ ತಂಡವನ್ನು ಸೇರಿಕೊಂಡ ಪ್ರಸ್ತುತ ಮುಖ್ಯ ತರಬೇತುದಾರ ಸೈಮನ್ ಕಟಿಚ್, ಕೊಹ್ಲಿ ಮತ್ತು ಡಿವಿಲಿಯರ್ಸ್ ಹೇಗೆ ಹೆಚ್ಚು ಒತ್ತಡದಲ್ಲಿದ್ದಾರೆ ಎಂಬುದನ್ನು ವಿವರಿಸಿದರು.

ಆರ್‌ಸಿಬಿಯಲ್ಲಿ ಹಲವಾರು ವರ್ಷಗಳಿಂದ ಡಿವಿಲಿಯರ್ಸ್ ಸೇರಿದಂತೆ ಕೆಲ ಆಟಗಾರರ ಮೇಲೆ ಮಾತ್ರ ಗಮನ ಹರಿಸಲಾಗುತ್ತಿದೆ. ನಾವು ಕೇವಲ ಇಬ್ಬರು ಹುಡುಗರೊಂದಿಗೆ ಪಂದ್ಯಾವಳಿಯನ್ನು ಗೆಲ್ಲಲು ಸಾಧ್ಯವಿಲ್ಲ, ನಮಗೂ ಅದ್ಭುತ ಪ್ರದರ್ಶನ ನೀಡುವ ಸಾಮೂಹಿಕ ತಂಡ ಬೇಕಿದೆ. ಈ ಬಾರಿ ನಾಯಕ ವಿರಾಟ್ ಕೊಹ್ಲಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರಿಗೆ ಬೇಕಾದ ರೀತಿಯಲ್ಲಿ ಹುಡುಗರನ್ನು ಆರಿಸುವ ಅವಕಾಶವಿದೆ ಎಂದರು. 

ಕಳೆದ ಒಂದೆರಡು ಐಪಿಎಲ್‌ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಇನ್ನೂ ಐಪಿಎಲ್ ಚೊಚ್ಚಲ ಪಂದ್ಯಾವಳಿಗೆ ಎಂಟ್ರಿ ಕೊಡುತ್ತಿರುವ ಕೈಲ್ ಜೇಮೀಸನ್ ಆರ್ ಸಿಬಿ ದೊಡ್ಡ ಮೊತ್ತ ನೀಡಿ ಪಾವತಿಸಿದೆ.

ಮ್ಯಾಕ್ಸ್ವೆಲ್ ಅವರನ್ನು ಆರನೇ ಬೌಲರ್ ಆಗಿ ಆಯ್ಕೆಯಾಗಿರಬಹುದು. ಇದೇ ವೇಳೆ ಕೊಹ್ಲಿ ಮತ್ತು ಡಿವಿಲಿಯರ್ಸ್ ಅವರ ಮೇಲಿನ ಒತ್ತಡವನ್ನು ನಿವಾರಿಸಲು ಮ್ಯಾಕ್ಸ್ ವೆಲ್ ಗೆ ಸಾಧ್ಯವಾಗುತ್ತದೆ? ಕಳೆದ ಋತುವಿನಲ್ಲಿ ಇದೇ ಕಾರಣಕ್ಕಾಗಿ ಆರನ್ ಫಿಂಚ್ ಅವರನ್ನು ತಂಡಕ್ಕೆ ಕರೆತರಲಾಯಿತು. ಆದರೆ ಅವರು ವಿಫಲರಾದರು. ಅಂತಹ ಆಟಗಾರರು ವಿಫಲವಾದಾಗ, ಕೊಹ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಅವಶ್ಯಕತೆಯಿದೆ ಎಂದು ಕಟಿಚ್ ಹೇಳಿದ್ದಾರೆ. 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp