ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್ ನಲ್ಲಿ ಆರ್.ಅಶ್ವಿನ್, ಜೋ ರೂಟ್‌, ಕೈಲ್ ಮೇಯರ್ಸ್

ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಪ್ರತಿ ತಿಂಗಳು ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ ಗೌರವಿಸುವ 'ಐಸಿಸಿ ತಿಂಗಳ ಆಟಗಾರ' ಪ್ರಶಸ್ತಿಗೆ ಈ ಬಾರಿ (ಫೆಬ್ರವರಿ ತಿಂಗಳ ಪ್ರಶಸ್ತಿ) ಮೂವರು ಕ್ರಿಕೆಟಿಗರ ಹೆಸರುಗಳನ್ನು...

Published: 02nd March 2021 06:37 PM  |   Last Updated: 02nd March 2021 06:46 PM   |  A+A-


R Ashwin

ಆರ್ ಅಶ್ವಿನ್

Posted By : Lingaraj Badiger
Source : PTI

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಪ್ರತಿ ತಿಂಗಳು ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ ಗೌರವಿಸುವ 'ಐಸಿಸಿ ತಿಂಗಳ ಆಟಗಾರ' ಪ್ರಶಸ್ತಿಗೆ ಈ ಬಾರಿ (ಫೆಬ್ರವರಿ ತಿಂಗಳ ಪ್ರಶಸ್ತಿ) ಮೂವರು ಕ್ರಿಕೆಟಿಗರ ಹೆಸರುಗಳನ್ನು ನಾಮ ನಿರ್ದೇಶನ ಮಾಡಲಾಗಿದೆ.

ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗಾಗಿ ಟೀಂ ಇಂಡಿಯಾ ಹಿರಿಯ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌, ಇಂಗ್ಲೆಂಡ್‌ ನಾಯಕ ಜೋ ರೂಟ್‌ ಹಾಗೂ ವೆಸ್ಟ್ ಇಂಡೀಸ್‌ ತಂಡದ ಕೈಲ್‌ ಮೇಯರ್ಸ್ ಅವರನ್ನು ಐಸಿಸಿ ನಾಮ ನಿರ್ದೇಶನ ಮಾಡಿದೆ.

ಆರ್‌ ಅಶ್ವಿನ್‌ ಅವರು ಕಳೆದ ಫೆಬ್ರುವರಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ ನಡೆದಿದ್ದ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ ಐದು ವಿಕೆಟ್‌ ಸಾಧನೆಯೊಂದಿಗೆ ಒಟ್ಟು 24 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೇ, ಎರಡನೇ ಹಣಾಹಣಿಯಲ್ಲಿ ವೃತ್ತಿ ಜೀವನದ ಐದನೇ ಟೆಸ್ಟ್ ಶತಕ ಬಾರಿಸಿ ಭಾರತದ ಗೆಲುವಿಗೆ ನೆರವಾಗಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರ್ ಅಶ್ವಿನ್ ದ್ವಿತೀಯ ಟೆಸ್ಟ್ ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 106 ರನ್ ಬಾರಿಸಿದ್ದರು. ಅಲ್ಲದೆ ಟೆಸ್ಟ್ ನಲ್ಲಿ 400 ವಿಕೆಟ್ ಮೈಲಿಗಲ್ಲು ಕೂಡ ಸ್ಥಾಪಿಸಿದ್ದರು. ಜನವರಿ ತಿಂಗಳ ಮೊದಲ ಪ್ರಶಸ್ತಿ ಭಾರತದ ಯುವ ಬ್ಯಾಟ್ಸ್ಮನ್ ರಿಷಭ್ ಪಂತ್ ಗೆ ಸಿಕ್ಕಿತ್ತು.

Stay up to date on all the latest ಕ್ರಿಕೆಟ್ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp