ಐಪಿಎಲ್ ಆಯೋಜಿಸುವ ಸ್ಥಳಗಳ ಬಗ್ಗೆ ಹೈದರಾಬಾದ್, ರಾಜಸ್ಥಾನ, ಪಂಜಾಬ್ ಆಕ್ಷೇಪ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14 ನೇ ಋತುವಿನ ಸ್ಥಳದ ಬಗ್ಗೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಆಕ್ಷೇಪ ವ್ಯಕ್ತಪಡಿಸಿವೆ.
Published: 02nd March 2021 01:02 AM | Last Updated: 02nd March 2021 01:05 AM | A+A A-

ಐಪಿಎಲ್
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14 ನೇ ಋತುವಿನ ಸ್ಥಳದ ಬಗ್ಗೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಆಕ್ಷೇಪ ವ್ಯಕ್ತಪಡಿಸಿವೆ.
ಇದಕ್ಕೆ ಸಂಬಂಧಿಸಿದಂತೆ ಮೂರು ಫ್ರಾಂಚೈಸಿಗಳು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹೇಮಾಂಗ್ ಅಮೀನ್ ಅವರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.
ವಾಸ್ತವವಾಗಿ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಾರಿ ಐಪಿಎಲ್ ಅನ್ನು ಆರು ಸ್ಥಳಗಳಲ್ಲಿ ನಡೆಸಲು ನಿರ್ಧರಿಸಿದೆ. ಇದರಲ್ಲಿ ಅಹಮದಾಬಾದ್ ಯಾವುದೇ ಫ್ರ್ಯಾಂಚೈಸ್ನ ತವರೂರು ಮೈದಾನವಲ್ಲ.
ಬಿಸಿಸಿಐನ ಈ ನಿರ್ಧಾರದ ನಂತರ, ಮಾಲೀಕರು ಆಕ್ಷೇಪಣೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಮಾತನಾಡಲು ಮಾಲೀಕರು ಹಿಂದೇಟು ಹಾಕಿದ್ದು, ವಿರೋಧವನ್ನು ಸಹ ವ್ಯಕ್ತ ಪಡಿಸಿದ್ದಾರೆ.