
ಶಾಹಿದ್ ಅಫ್ರೀದಿ
ಕ್ರಿಕೆಟ್ ಜಗತ್ತಿನಲ್ಲಿ ಪಾಕಿಸ್ತಾನದ ಆಟಗಾರ ಶಾಹಿದ್ ಅಫ್ರೀದಿ ಅವರ ವಯಸ್ಸಿನ ಬಗ್ಗೆ ನಡೆದಷ್ಟು ಚರ್ಚೆ ಬೇರೆ ಯಾರ ಬಗ್ಗೆಯೂ ಬಹುಶಃ ನಡೆದಿರುವುದಿಲ್ಲ!.
ಮಾ.1 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ಶಾಹಿದ್ ಅಫ್ರೀದಿ, ತಮ್ಮ ವಯಸ್ಸಿನ ಬಗ್ಗೆ ಮತ್ತಷ್ಟು ಗೊಂದಲ ಮೂಡಿಸಿದ್ದಾರೆ. ತಮ್ಮ ವಯಸ್ಸನ್ನು ಬಹಿರಂಗಪಡಿಸಿ ಈ ವರೆಗೂ ಇದ್ದ ಗೊಂದಲಗಳಿಗೆ ತೆರೆ ಎಳೆಯುತ್ತಾರೇನೋ ಎಂದುಕೊಂಡಿದ್ದರೆ, ಅಫ್ರೀದಿ ಮತ್ತಷ್ಟು ಗೊಂದಲ ಸೃಷ್ಟಿಸಿದ್ದಾರೆ.
Thank you very much for all the lovely birthday wishes - 44 today! My family and my fans are my biggest assets. Really enjoying my stint with Multan and hope to produce match winning performances for all MS fans.
— Shahid Afridi (@SAfridiOfficial) February 28, 2021
ಐಸಿಸಿ ದಾಖಲೆಗಳ ಪ್ರಕಾರ ಅಫ್ರೀದಿ ಹುಟ್ಟಿದ್ದು ಮಾ.1, 1980, ಆದರೆ ತಮ್ಮ ಜೀವನ ಚರಿತ್ರೆ ಗೇಮ್ ಚೇಂಜರ್ ನಲ್ಲಿ ಅವರೇ ಹೇಳಿಕೊಂಡಿರುವ ಪ್ರಕಾರ ಅಫ್ರೀದಿ ಹುಟ್ಟಿದ್ದು ಮಾ.1, 1975!! 2019 ರಲ್ಲಿ ಅಫ್ರೀದಿ ತಾನು, 1998 ರಲ್ಲಿ ಕ್ರಿಕೆಟ್ ಜಗತ್ತಿಗೆ ಪ್ರವೇಶಿಸಿದಾಗ ತನಗೆ 16 ವರ್ಷವಾಗಿರಲಿಲ್ಲ, ಬದಲಾಗಿ 19 ವರ್ಷದವನಾಗಿದ್ದೆ ಎಂದು ಹೇಳಿದ್ದಾರೆ.
ಆದರೆ ದಾಖಲೆಗಳ ಪ್ರಕಾರ ಅಫ್ರೀದಿ ತಮ್ಮ 16 ನೇ ವಯಸ್ಸಿನಲ್ಲಿ ಶ್ರೀಲಂಕಾದ ವಿರುದ್ಧ ಅತಿ ವೇಗದ ಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ. ಇದೇ ವೇಳೆ ಸೋಮವಾರ ತಮ್ಮ ಜನ್ಮದಿನದ ಅಂಗವಾಗಿ ಟ್ವೀಟ್ ಮಾಡಿರುವ ಅಫ್ರೀದಿ, 44 ನೇ ವಸಂತಕ್ಕೆ ಕಾಲಿಟ್ಟಿರುವುದಾಗಿ ಹೇಳಿದ್ದಾರೆ. ಅಫ್ರೀದಿಗೆ 41 ವರ್ಷವೋ, ಇಲ್ಲ 44 ವರ್ಷವೋ ಅಥವಾ 46 ವಸಂತಗಳೋ ಎಂಬ ಪ್ರಶ್ನೆ ಈಗ ಕ್ರೀಡಾಭಿಮನಿಗಳಲ್ಲಿ ಮೂಡಿದೆ.