4ನೇ ಟೆಸ್ಟ್: ಇಂಗ್ಲೆಂಡ್ ಮಣಿಸಲು ಭಾರತ ರೆಡಿ, ಇಂಗ್ಲೆಂಡ್ ಗೆಲ್ಲಲಿ ಎಂದು ಆಸ್ಟ್ರೇಲಿಯಾ ಪ್ರಾರ್ಥನೆ!
ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು.
Published: 03rd March 2021 06:49 PM | Last Updated: 03rd March 2021 07:35 PM | A+A A-

ಟೀಂ ಇಂಡಿಯಾ
ಸಿಡ್ನಿ: ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಂಗ್ಲರನ್ನು ಮಣಿಸಲು ಭಾರತ ರಣತಂತ್ರ ರೂಪಿಸಿದೆ.
ವಿರಾಟ್ ಪಡೆ ಈ ಪಂದ್ಯ ಗೆದ್ದು ಅಥವಾ ಡ್ರಾ ಸಾಧಿಸಿ ಲಂಡನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಪ್ರವೇಶ ಪಡೆಯುವ ಕನಸು ಕಾಣುತ್ತಿದೆ. ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ನ್ಯೂಜಿಲೆಂಡ್ ತನ್ನ ಎದುರಾಳಿ ಯಾರು ಎಂದು ಕುತೂಹಲದಿಂದ ನೋಡುತ್ತಿದೆ. ಇನ್ನು ಆಸ್ಟ್ರೇಲಿಯಾ ಸಹ ಈ ಪಂದ್ಯದ ಮೇಲೆ ಚಿತ್ತ ನೆಟ್ಟಿದೆ. ನಾಲ್ಕನೇ ಪಂದ್ಯವನ್ನು ಇಂಗ್ಲೆಂಡ್ ಗೆದ್ದರೆ, ಆಸೀಸ್ ಪ್ರಶಸ್ತಿ ಸುತ್ತು ತಲುಪುವ ಕನಸು ನನಸಾಗುತ್ತದೆ.
ಒಂದು ವೇಳೆ ಭಾರತ ಈ ಪಂದ್ಯದಲ್ಲಿ ಸೋತರೆ ಭಾರತಕ್ಕಿಂತ ಹೆಚ್ಚಿನ ಗೆಲುವಿನ ಸರಾಸರಿ ಹೊಂದಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನಕ್ಕೆ ಜಿಗಿದು ಫೈನಲ್ ಗೆ ಪ್ರವೇಶಿಸಲಿದೆ. ಈ ಕಾರಣಕ್ಕೆ ಇಂಗ್ಲೆಂಡ್ ಗೆಲ್ಲಲಿ ಎಂದು ಆಸ್ಟ್ರೇಲಿಯನ್ನರು ಪ್ರಾರ್ಥಿಸುತ್ತಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.