ಹ್ಯಾಟ್ರಿಕ್ ವಿಕೆಟ್ ಪಡೆದು ಆಘಾತ ನೀಡಿದ ಲಂಕಾ ಸ್ಪಿನ್ನರ್ ಗೆ ಡಬಲ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಿರುಗೇಟು ನೀಡಿದ ಪೊಲಾರ್ಡ್!

ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಅತ್ಯಂತ ಜಿದ್ದಾಜಿದ್ದಿನಿಂದ ಮುಕ್ತಾಯಕಂಡಿದ್ದು, ಲಂಕಾ ಸ್ಪಿನ್ನರ್ ಹ್ಯಾಟ್ರಿಕ್ ವಿಕೆಟ್ ಪಡೆದು ಆಘಾತ ನೀಡಿದರೆ, ವಿಂಡೀಸ್ ದೈತ್ಯ ಪೊಲಾರ್ಡ್ ಡಬಲ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಿರುಗೇಟು ನೀಡಿದ್ದಾರೆ. 

Published: 04th March 2021 02:10 PM  |   Last Updated: 04th March 2021 03:07 PM   |  A+A-


Keiron Pollard-Akila Dananjaya

ಕೀರನ್ ಪೊಲಾರ್ಡ್ ಸಿಕ್ಸರ್ ಸುರಿಮಳೆ

Posted By : Srinivasamurthy VN
Source : PTI

ಆ್ಯಂಟಿಗುವಾ: ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಅತ್ಯಂತ ಜಿದ್ದಾಜಿದ್ದಿನಿಂದ ಮುಕ್ತಾಯಕಂಡಿದ್ದು, ಲಂಕಾ ಸ್ಪಿನ್ನರ್ ಹ್ಯಾಟ್ರಿಕ್ ವಿಕೆಟ್ ಪಡೆದು ಆಘಾತ ನೀಡಿದರೆ, ವಿಂಡೀಸ್ ದೈತ್ಯ ಪೊಲಾರ್ಡ್ ಡಬಲ್ ಹ್ಯಾಟ್ರಿಕ್ ಸಿಕ್ಸರ್ ಭಾರಿಸಿ ತಿರುಗೇಟು ನೀಡಿದ್ದಾರೆ. 

ಹೌದು...ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ್ದ ಲಂಕಾ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ವಿಂಡೀಸ್ ತಂಡಕ್ಕೆ ಲಂಕಾದ ಸ್ಪಿನ್ನರ್ ಅಖಿಲ ಧನಂಜಯ ಮಾರಕವಾಗಿ ಪರಿಣಮಿಸಿದರು. ವೆಸ್ಟ್ ಇಂಡೀಸ್ 3.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿತ್ತು.  ಈ ವೇಳೆ ದಾಳಿಗಿಳಿದ ಧನಂಜಯ ಎವಿನ್ ಲೂವಿಸ್, ಕ್ರಿಸ್ ಗೇಲ್ ಹಾಗೂ ನಿಕೊಲಸ್ ಪೂರನ್ ಅವರನ್ನು ಸತತ 3 ಎಸೆತಗಳಲ್ಲಿ ಪೆವಿಲಿಯನ್‍ಗೆ ಅಟ್ಟಿ ಆಘಾತ ನೀಡಿದರು. ಅಲ್ಲದೆ ಹ್ಯಾಟ್ರಿಕ್ ಸಾಧನೆ ಮಾಡಿದರು. 

ಆದರೆ ಅವರ ಈ ಹ್ಯಾಟ್ರಿಕ್ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಕಾರಣ ಧನಂಜಯ ಅವರ ನಂತರದ ಓವರ್ ನಲ್ಲಿಯೇ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಆಘಾತ ನೀಡಿದ್ದರು. ವಿಂಡೀಸ್ ನಾಯಕ ಪೊಲಾರ್ಡ್ ಅವರು ಧನಂಜಯ ಅವರ ಮುಂದಿನ ಓವರ್ ನಲ್ಲಿ ಎಲ್ಲ 6 ಎಸೆತಗಳನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ಇಡೀ ಪಂದ್ಯಕ್ಕೆ ಅತ್ಯಂತ ನಾಟಕೀಯ ತಿರುವು ನೀಡಿದರು.

ಧನಂಜಯ ಇನಿಂಗ್ಸ್ ನ 6ನೇ ಓವರ್ ನಲ್ಲಿ  ಮೊದಲ ಎಸೆತವನ್ನು ಪೊಲಾರ್ಡ್ ಸಿಕ್ಸರ್ ಸಿಡಿಸಿದಾಗ ಚೆಂಡು ಕಾಣೆಯಾಯಿತು. ಎರಡನೇ ಸಿಕ್ಸರ್ ಸೈಟ್‍ಸ್ಕ್ರೀನ್ ಗೆ ಬಡಿಯಿತು. ಮೂರನೇ ಎಸೆತವನ್ನು ಲಾಂಗ್ ಆಫ್ ಗೆ ಭಾರಿ ಸಿಕ್ಸರ್ ಸಿಡಿಸಿದರು, ನಾಲ್ಕನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ ನತ್ತ ಅಟ್ಟಿದರು. ಐದನೇ ಎಸೆತವನ್ನು ಲಾಂಗ್ ಆನ್ ನತ್ತ ಅಟ್ಟಿದರು. ಆರನೇ ಎಸೆತವನ್ನು ಡೀಪ್ ಮಿಡ್ ವಿಕೆಟ್ ನತ್ತ ಭಾರಿಸಿ ಸಿಕ್ಸರ್ ಪಡೆದು ಆರು ಎಸೆತದಲ್ಲಿ ಆರು ಸಿಕ್ಸರ್ ಸಿಡಿಸಿ ಧನಂಜಯ ಅವರಿಗೆ ತಿರುಗೇಟು ನೀಡಿದರು.

ಆ ಮೂಲಕ ಪೊಲಾರ್ಡ್ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಒಂದೇ ಓವರ್ ನಲ್ಲಿ 6 ಸಿಕ್ಸರ್ ಗಳನ್ನು ಸಿಡಿಸಿದ ಎರಡನೇ ಬ್ಯಾಟ್ಸ್ ಮನ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ದ.ಆಫ್ರಿಕಾದ ಹರ್ಷಲ್ ಗಿಬ್ಸ್ ನೆದರ್ ಲ್ಯಾಂಡ್ ವಿರುದ್ದದ ಏಕದಿನ ಪಂದ್ಯದಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದರು. ಬಳಿಕ ಭಾರತದ ಯುವರಾಜ್ ಸಿಂಗ್ 2007ರ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಬೌಲಿಂಗ್ ನಲ್ಲಿ 6 ಸಿಕ್ಸರ್ ಗಳನ್ನು ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು. ಇದೀಗ ಪೊಲಾರ್ಡ್ ಈ ಸಾಧನೆ ಮಾಡಿದ್ದಾರೆ.

ಇನ್ನು ಸಿಕ್ಸರ್ ಗಳ ಸುರಿಮಳೆ ಬಳಿಕ ಪೊಲಾರ್ಡ್ ಮುಂದಿನ ಓವರ್ ನಲ್ಲಿ ಎಲ್ಬಿಡಬ್ಲು ಬಲೆಗೆ ಬಿದ್ದರು. ಈ ಪಂದ್ಯದಲ್ಲಿ ಕೇವಲ 11 ಎಸೆತಗಳನ್ನು ಎದುರಿಸಿದ ಪೊಲಾರ್ಡ್ 38 ರನ್ ಸಿಡಿಸಿದರು. ಆದರೂ ವೆಸ್ಟ್ ಇಂಡೀಸ್ ತಂಡ ಇನ್ನೂ 6 ಓವರ್ ಗಳು ಬಾಕಿ ಇರುವಾಗಲೇ 132 ರನ್ ಗುರಿಯನ್ನು ತಲುಪಿ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
 

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp