4ನೇ ಟೆಸ್ಟ್ ಮೊದಲ ಇನ್ನಿಂಗ್ಸ್: 2ನೇ ದಿನದಾಟ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ವಿರುದ್ಧ ಭಾರತ 80/4, 125 ರನ್ ಹಿನ್ನಡೆ

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಚ್ ನ 2ನೇ ದಿನದಾಟದ ಭೋಜನ ವಿರಾಮದ ವೇಳೆಗೆ ಭಾರತ 4 ವಿಕೆಟ್ ನಷ್ಟಕ್ಕೆ 80ರನ್ ಗಳಿಸಿದೆ.

Published: 05th March 2021 11:57 AM  |   Last Updated: 05th March 2021 01:20 PM   |  A+A-


Rohit Sharma

ರೋಹಿತ್ ಶರ್ಮಾ

Posted By : Srinivasamurthy VN
Source : Online Desk

ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಚ್ ನ 2ನೇ ದಿನದಾಟದ ಭೋಜನ ವಿರಾಮದ ವೇಳೆಗೆ ಭಾರತ 4 ವಿಕೆಟ್ ನಷ್ಟಕ್ಕೆ 80ರನ್ ಗಳಿಸಿದೆ.

ನಿನ್ನೆ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದ ಭಾರತ ತಂಡ ಇಂದು ಭೋಜನ ವಿರಾಮದ ವೇಳೆಗೆ 3 ವಿಕೆಟ್ ಕಳೆದುಕೊಂಡಿತು. ದಿನದಾಟದ ಆರಂಭದಲ್ಲೇ 17ರನ್ ಗಳಿಸಿದ್ದ ಚೇತೇಶ್ವರ ಪೂಜಾರ ಜಾಕ್ ಲೀಚ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ 8 ಎಸೆತ ಎದುರಿಸಿ ಶೂನ್ಯಕ್ಕೆ ಬೆನ್ ಸ್ಟೋಕ್ಸ್ ಗೆ ವಿಕೆಟ್ ಗೆ ಒಪ್ಪಿಸಿದರು. ಈ ವೇಳೆಗೆ ಭಾರತ ಆಘಾತ ಎದುರಿಸಿತು. ಆದರೆ ಈ ಹಂತದಲ್ಲಿ ರೋಹಿತ್ ಶರ್ಮಾ ಜೊತೆಗೂಡಿದ ಅಜಿಂಕ್ಯಾ ರಹಾನೆ ಕೊಂಚ ಪ್ರತಿರೋಧ ತೋರಿದರು. ಆದರೆ ರಹಾನೆ 27 ರನ್ ಗಳಿಸಿದ್ದ ವೇಳೆ ಜೇಮ್ಸ್ ಆ್ಯಂಡರ್ಸನ್ ರಹಾನೆ ವಿಕೆಟ್ ಉರುಳಿಸಿದರು. 

ಈ ವೇಳೆ ಅಂಪೈರ್ ಗಳು ಭೋಜನ ವಿರಾಮ ಘೋಷಣೆ ಮಾಡಿದರು. ಈ ವೇಳೆ ಭಾರತ 4 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿ 125 ರನ್ ಹಿನ್ನಡೆಯಲ್ಲಿದೆ. 32 ರನ್ ಗಳಿಸಿರುವ ರೋಹಿತ್ ಶರ್ಮಾ ಕ್ರೀಸ್ ನಲ್ಲಿದ್ದಾರೆ.

ಇನ್ನು ಜೇಮ್ಸ್ ಆ್ಯಂಡರ್ಸನ್ 2, ಬೆನ್ ಸ್ಟೋಕ್ಸ್ ಮತ್ತು ಜಾಕ್ ಲೀಚ್ ತಲಾ 1 ವಿಕೆಟ್ ಪಡೆದರು.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp