4ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 365 ರನ್ ಗಳಿಗೆ ಆಲೌಟ್, ಶತಕ ವಂಚಿತ ಸುಂದರ್

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 365ರನ್ ಗಳಿಗೆ ಆಲೌಟ್ ಆಗಿದ್ದು, 160 ರನ್ ಗಳ ಮುನ್ನಡೆ ಸಾಧಿಸಿದೆ.

Published: 06th March 2021 11:36 AM  |   Last Updated: 06th March 2021 12:59 PM   |  A+A-


Washington Sundar

ಶತಕ ವಂಚಿತ ವಾಷಿಂಗ್ಟನ್ ಸುಂದರ್-ಅಕ್ಷರ್ ಪಟೇಲ್ ಜೋಡಿ

Posted By : Srinivasamurthy VN
Source : Online Desk

ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 365ರನ್ ಗಳಿಗೆ ಆಲೌಟ್ ಆಗಿದ್ದು, 160 ರನ್ ಗಳ ಮುನ್ನಡೆ ಸಾಧಿಸಿದೆ.

ನಿನ್ನೆ 2ನೇ ದಿನದಾಟ ಅಂತ್ಯಕ್ಕೆ ಭಾರತ 7 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿತ್ತು. 60ರನ್ ಗಳಿಸಿರುವ ವಾಷಿಂಗ್ಟನ್ ಸುಂದರ್ ಮತ್ತು 11 ರನ್ ಗಳಿಸಿರುವ ಅಕ್ಷರ್ ಪಟೇಲ್ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಇಂದು 3ನೇ ದಿನದಾಟ ಆರಂಭಿಸಿದ ಈ ಜೋಡಿ ಮತ್ತೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಜೋಡಿ 106ರನ್ ಗಳ ಶತಕದ ಜೊತೆಯಾಟವಾಡಿ ಭಾರತದ ರನ್ ಗಳಿಕೆಯನ್ನು 350ರ ಗಡಿ ದಾಟಿಸಿತು.

ಆದರೆ ತಂಡದ ಮೊತ್ತ 365ಆಗಿದ್ದ ಸಂದರ್ಭದಲ್ಲಿ ಇನ್ನಿಲ್ಲದ ರನ್ ಕದಿಯಲು ಹೋಗಿ ಅಕ್ಷರ್ ಪಟೇಲ್ ರನೌಟ್ ಆದರು. ಈ ಹೋತ್ತಿಗೆ ಅಕ್ಷರ್ 43 ರನ್ ಗಳಿಸಿದ್ದರು. ಕೇವಲ 7ರನ್ ಗಳ ಅಂತರದಲ್ಲಿ ಶತಕ ವಂಚಿತರಾದರು. ಮತ್ತೊಂದು ಬದಿಯಲ್ಲಿ ವಾಷಿಂಗ್ಟನ್ ಸುಂದರ್ ಕೂಡ ಅಜೇಯ 96 ರನ್ ಗಳಿಸಿ ಶತಕದ ಹೊಸ್ತಿಲಲ್ಲಿದ್ದರು. ಆದರೆ ಇಬ್ಬರು ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದ್ದರಿಂದ ಸುಂದರ್ ಶತಕದಾಸೆ ಕೂಡ ಈಡೇರಲಿಲ್ಲ. ಇಶಾಂತ್ ಮತ್ತು ಸಿರಾಜ್  ಶೂನ್ಯಕ್ಕೆ ಔಟಾಗಿದ್ದು ಸುಂದರ್ ಶತಕದಾಸೆಗೆ ಕುತ್ತಾಯಿತು.

ಅಂತಿಮವಾಗಿ ಭಾರತ 365 ರನ್ ಗಳಿಗೆ ಆಲೌಟ್ ಆಗಿ ಇಂಗ್ಲೆಂಡ್ ವಿರುದ್ಧ 160ರನ್ ಗಳ ಮುನ್ನಡೆ ಸಾಧಿಸಿದೆ.

ಇದೀಗ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೇ 6ರನ್ ಗಳಿಸಿದ್ದು, ಜಾಕ್ ಕ್ರಾಲಿ ಮತ್ತು ಸಿಬ್ಲೆ ಇಂಗ್ಲೆಂಡ್ ನ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp