ಚೆನ್ನೈ ಪಂದ್ಯದ ಬಳಿಕ ತಂಡ ಗೆಲುವಿನ ಲಯಕ್ಕೆ ಮರಳಿದೆ: ರೋಹಿತ್, ಅಶ್ವಿನ್ ಸರಣಿ ಶ್ರೇಷ್ಠರೆಂದು ಹೊಗಳಿದ ಕೊಹ್ಲಿ

ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಗೆಲುವಿನ ನಂತರ ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮರಳಿರುವುದು ಅತ್ಯಂತ ಸಂತೋಷದ ಕ್ಷಣವಾಗಿದೆ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Published: 06th March 2021 08:12 PM  |   Last Updated: 06th March 2021 08:12 PM   |  A+A-


Ashwin-Virat Kohli

ಅಶ್ವಿನ್-ವಿರಾಟ್ ಕೊಹ್ಲಿ

Posted By : Vishwanath S
Source : UNI

ಅಹಮದಾಬಾದ್: ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಗೆಲುವಿನ ನಂತರ ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮರಳಿರುವುದು ಅತ್ಯಂತ ಸಂತೋಷದ ಕ್ಷಣವಾಗಿದೆ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 

ಮೊದಲ ಪಂದ್ಯದಲ್ಲಿ ಟಾಸ್ ಬಹಳ ಮುಖ್ಯವಾಗಿತ್ತು. ಸರಣಿಯುದ್ದಕ್ಕೂ ಬೌಲರ್ ಗಳು ಹಾಗೂ ಫೀಲ್ಡರ್ ಗಳು ಉತ್ತಮ ಪ್ರದರ್ಶನ ನೀಡಿದರು. ನಮ್ಮ ಬೆಂಚ್ ಸಾಮರ್ಥ್ಯವು ತುಂಬಾ ಪ್ರಬಲವಾಗಿದೆ. ಇದು ಭಾರತ ಕ್ರಿಕೆಟ್‌ಗೆ ಉತ್ತಮ ಸಂಕೇತವಾಗಿದೆ. ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಭರ್ಜರಿ ಪ್ರದರ್ಶನ ನೀಡಿದರು ಎಂದು ವಿರಾಟ್ ಹೇಳಿದರು. 

ಚೆನ್ನೈನಲ್ಲಿ ನಡೆದ ಮೊದಲ ಪಂದ್ಯವನ್ನು ಸೋತ ನಂತರ, ನಾವು ನಮ್ಮ ಆಟವನ್ನು ಸುಧಾರಿಸಿಕೊಂಡೆವು. ಪ್ರತಿ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿದೆ. ಆದ್ದರಿಂದ ಅದನ್ನು ಸೋಲಿಸಲು ನಾವು ಶ್ರಮಿಸಬೇಕು. ಸ್ಪರ್ಧೆಯು ತವರು ಮೈದಾನದಲ್ಲಿದ್ದರೂ ಸಹ, ಈ ಮನಸ್ಥಿತಿಯೊಂದಿಗೆ ಆಟವಾಡುವುದು ಅಗತ್ಯವಾಗಿತ್ತು. ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಆರ್ ಅಶ್ವಿನ್ ಸ್ಮರಣಿಯ ಆಟ ಪ್ರದರ್ಶಿಸಿದರು ಎಂದು ಹೇಳಿದ್ದಾರೆ.

ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 25 ರನ್ಗಳಿಂದ ಗೆದ್ದು 3-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೇರಿದ್ದು ನ್ಯೂಜಿಲ್ಯಾಂಡ್ ಜೊತೆ ಸೆಣೆಸಲಿದೆ.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp