ವೇಗಿ ಆಂಡರ್ಸನ್'ಗೆ ರಿವರ್ಸ್ ಸ್ವೀಪ್‌ನಲ್ಲಿ ಬೌಂಡರಿ ಹೊಡೆದು ಎಲ್ಲರನ್ನೂ ದಂಗಾಗಿಸಿದ ರಿಷಬ್ ಪಂತ್, ವಿಡಿಯೋ ವೈರಲ್!

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ. ಈ ನಡುವೆ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ರಿವರ್ಸ್ ಸ್ವೀಪ್ ಹೊಡೆತ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Published: 06th March 2021 10:13 PM  |   Last Updated: 08th March 2021 06:20 PM   |  A+A-


Rishabh Pant

ರಿಷಬ್ ಪಂತ್

Posted By : Vishwanath S
Source : Online Desk

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ. ಈ ನಡುವೆ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ರಿವರ್ಸ್ ಸ್ವೀಪ್ ಹೊಡೆತ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸುವ ಮೂಲಕ ರಿಷಬ್ ಪಂತ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ವೇಳೆ ವೇಗಿ ಜೇಮ್ಸ್ ಆಂಡರ್ಸನ್ ಅವರ ಎಸೆತದಲ್ಲಿ ರಿಷಬ್ ಪಂತ್ ರಿವರ್ಸ್ ಸ್ವೀಪ್ ಬ್ಯಾಟಿಂಗ್ ಮಾಡಿ ಬೌಂಡರಿ ಬಾರಿಸಿದ್ದರು. 

ರಿಷಬ್ ಪಂತ್ 89 ರನ್ ಗಳಿಸಿದ್ದಾಗ ರಿವರ್ ಸ್ವೀಪ್ ಬ್ಯಾಟಿಂಗ್ ಮಾಡಿದ್ದರು. ನಂತರ 94 ರನ್ ಗಳಿಸಿದ್ದಾಗ ಜೋ ರೂಟ್ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಶತಕ ಸಿಡಿಸಿದರು. ಇನ್ನು ನೂತನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಶತಕ ಸಿಡಿಸಿದ ಖ್ಯಾತಿಗೂ ರಿಷಬ್ ಪಂತ್ ಭಾಜನರಾಗಿದ್ದಾರೆ. 

ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಮತ್ತು 25 ರನ್ ಗಳಿಂದ ಗೆದ್ದು 3-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.


Stay up to date on all the latest ಕ್ರಿಕೆಟ್ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp