ಐಪಿಎಲ್ 2021ಕ್ಕೆ ಮಹೂರ್ತ ಫಿಕ್ಸ್! ಏ.9ಕ್ಕೆ ಚೆನ್ನೈನಲ್ಲಿ ಉದ್ಘಾಟನೆ, ಮೇ 30ಕ್ಕೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಬೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ 9 ರಿಂದ ಭಾರತದ ಆರು ವಿವಿಧ ಸ್ಥಳಗಳಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಭಾನುವಾರ ಪ್ರಕಟಿಸಿದೆ.

Published: 07th March 2021 02:55 PM  |   Last Updated: 07th March 2021 02:55 PM   |  A+A-


ಐಪಿಎಲ್

Posted By : Raghavendra Adiga
Source : ANI

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಬೇಳಾಪಟ್ಟಿ ಪ್ರಕಟವಾಗಿದೆ. ಏಪ್ರಿಲ್ 9 ರಿಂದ ಭಾರತದ ಆರು ವಿವಿಧ ಸ್ಥಳಗಳಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಭಾನುವಾರ ಪ್ರಕಟಿಸಿದೆ.

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಚೆನ್ನೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೆಣಸಲಿದೆ. "ಸುಮಾರು ಎರಡು ವರ್ಷಗಳ ನಂತರ, ಐಪಿಎಲ್ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ನಡೆಯಲಿದೆ" ಎಂದು ಬಿಸಿಸಿಐ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಪಂದ್ಯಾವಳಿಯ 14 ನೇ ಆವೃತ್ತಿಯ ಫೈನಲ್ ಪಂದ್ಯವು ಮೇ 30 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದೇ ಸ್ಥಳದಲ್ಲಿ ಪ್ಲೇಆಫ್‌ಗಳನ್ನು ಸಹ ಆಡಲಾಗುವುದು. "ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ - ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಪ್ಲೇಆಫ್‌ಗಳ ಜೊತೆಗೆ 2021 ರ ಮೇ 30 ರಂದು ನಡೆಯುವ ಫೈನಲ್‌ಗೆ ಆತಿಥ್ಯ ವಹಿಸಲಿದ್ದು, ಇದೊಂದು ಕಣ್ಮನ ಸೆಳೆಯುವ ಪ್ರದರ್ಶನವಾಗಿರಲಿದೆ. ಹೊಸದಾಗಿ ನಿರ್ಮಿಸಲಾದ ಕ್ರೀಡಾಂಗಣದಲ್ಲಿ ಭಾರತದ ಎರಡನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯ್ ನಡೆದಿತ್ತು.ಇದೀಗ ಈ ಬೃಹತ್ ಕ್ರೀಡಾಂಗಣ ತನ್ನ ಮೊಟ್ಟಮೊದಲ ಐಪಿಎಲ್ ಅನ್ನು ಆಯೋಜಿಸುತ್ತದೆ,"

"ಪಂದ್ಯಾವಳಿಯ ಪಂದ್ಯಗಳನ್ನು ಲೀಗ್ ಹಂತದಲ್ಲಿ ಪ್ರತಿ ತಂಡವು ಕೇವಲ ಮೂರು ಬಾರಿ ಪ್ರಯಾಣಿಸುವ ರೀತಿಯಲ್ಲಿ ಆಯೋಜಿಸಲಾಗಿದೆ. ಇದರಿಂದಾಗಿ ಪ್ರಯಾಣ ಕಡಿಮೆಯಾಗಿರಲಿದೆ. ಅದರಿಂದ ಅಪಾಯ ಸಹ ಕಡಿಮೆಯಾಗಿದೆ. ಪ್ರತಿ ತಂಡವು ಲೀಗ್ ಹಂತದಲ್ಲಿ ನಾಲ್ಕು ಸ್ಥಳಗಳಲ್ಲಿ ಆಡಲು ಸಜ್ಜಾಗಿದೆ. 56 ಲೀಗ್ ಪಂದ್ಯಗಳಲ್ಲಿ ಚೆನ್ನೈ, ಮುಂಬೈ, ಕೋಲ್ಕತಾ ಮತ್ತು ಬೆಂಗಳೂರು ತಲಾ 10 ಪಂದ್ಯಗಳನ್ನು ಆತಿಥ್ಯ ವಹಿಸಲಿದ್ದು, ಅಹಮದಾಬಾದ್ ಮತ್ತು ದೆಹಲಿ ತಲಾ 8 ಪಂದ್ಯಗಳನ್ನು ಆಯೋಜಿಸುತ್ತವೆ. ಐಪಿಎಲ್‌ನ ಈ ಆವೃತ್ತಿಯ ಒಂದು ಮುಖ್ಯ ಅಂಶವೆಂದರೆ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಾಗುವುದು, ಯಾವುದೇ ತಂಡವು ತಮ್ಮ ಹೋಂ ಪಿಚ್ ನಲ್ಲಿ ಆಡುವುದಿಲ್ಲ . ಎಲ್ಲಾ ತಂಡಗಳು ಲೀಗ್ ಹಂತದಲ್ಲಿ 6 ಸ್ಥಳಗಳಲ್ಲಿ 4 ಪಂದ್ಯಗಳಲ್ಲಿ ಆಡಲಿವೆ. ಒಟ್ಟು 11 ಡಬಲ್‌ಹೆಡರ್‌ಗಳು ಇರಲಿದ್ದು, 6 ತಂಡಗಳು ಮೂರು ಆಫ್ಟರ್ ನೂನ್ ಪಂದ್ಯವಾಡಲಿದ್ದು ಎರಡು ತಂಡಗಳು ಎರಡು  ಆಫ್ಟರ್ ನೂನ್  ಪಂದ್ಯವಾಡಲಿದೆ. ಆಫ್ಟರ್ ನೂನ್  ಪಂದ್ಯಗಳು ಮಧ್ಯಾಹ್ನ 3:30(ಭಾರತೀಯ ಕಾಲಮಾನ)ಕ್ಕೆ ಪ್ರಾರಂಭವಾಗುತ್ತದೆ.ಸಂಜೆಯ ಪಂದ್ಯ 7:30ಕ್ಕೆ (ಭಾರತೀಯ ಕಾಲಮಾನ) ಆರಂಭಗೊಳ್ಳುತ್ತದೆ.

"ಕಳೆದ ವರ್ಷ ಯುಎಇಯಲ್ಲಿ ಎಲ್ಲಾ ಸುರಕ್ಷತಾ ಪ್ರೋಟೋಕಾಲ್ ಗಳೊಂದಿಗೆ ಪಂದ್ಯಾವಳಿಯನ್ನು ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ಆಯೋಜಿಸಿದ ನಂತರ, ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯೊಂದಿಗೆ ನಮ್ಮದೇ ದೇಶದಲ್ಲಿ ಐಪಿಎಲ್ ಅನ್ನು ನಡೆಸುವ ವಿಶ್ವಾಸವನ್ನು ಬಿಸಿಸಿಐ ಹೊಂದಿದೆ ಮತ್ತು ಭಾಗವಹಿಸುವ ಎಲ್ಲ ಜನರು ಅತ್ಯುನ್ನತ ಸ್ಥಾನದಲ್ಲಿರಲಿದ್ದಾರೆ."ಪ್ರಕಟಣೆ ಹೇಳೀದೆ.

Stay up to date on all the latest ಕ್ರಿಕೆಟ್ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp