ವಿಜಯ್ ಹಜಾರೆ ಟ್ರೋಫಿ: ಸಮರ್ಥ್ 192, ಪಡಿಕಲ್ ಸತತ 4ನೇ ಶತಕ; ಸೆಮಿಫೈನಲ್ಸ್ ಗೆ ಕರ್ನಾಟಕ

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಆಡುತ್ತಿರುವ ದೇವದತ್ ಪಡಿಕ್ಕಲ್ ಸತತ ನಾಲ್ಕು ಶತಕ ಸಿಡಿಸಿದ್ದಾರೆ. ವಿಶೇಷವೆಂದರೆ ಇಂತಹಾ ಸಾಧನೆ ಮಾಡಿದ ವಿಶ್ವರ ಮೂರನೇ ಆಟಗಾರ ಇವರಾಗಿದ್ದಾರೆ.

Published: 08th March 2021 05:20 PM  |   Last Updated: 08th March 2021 07:01 PM   |  A+A-


ದೇವದುತ್ ಪಡಿಕ್ಕಲ್

Online Desk

ಬೆಂಗಳೂರು: ಆರಂಭಿಕ ದೇವದತ್ ಪಡಿಕ್ಕಲ್ ಸಿಡಿಸಿದ ಸತತ 4ನೇ ಶತಕ ಹಾಗೂ ನಾಯಕ ರವಿಕುಮಾರ್ ಸಮರ್ಥ್ ಅವರ 192 ರನ್ ನೆರವಿನಿಂದ ಕರ್ನಾಟಕ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 80 ರನ್ ಗಳಿಂದ ಕೇರಳ ತಂಡವನ್ನು ಬಗ್ಗುಬಡಿದು ಸಮಿಫೈನಲ್ಸ್ ಪ್ರವೇಶಿಸಿದೆ.

ದೆಹಲಿಯಲ್ಲಿ ಸೋಮವಾರ ನಡೆದ ಕೇರಳ ವಿರುದ್ಧದ 2ನೇ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕ 50 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿದರೆ, ಕೇರಳ ತಂಡ ರೋನಿತ್ ಮೋರೆ ದಾಳಿಗೆ ತತ್ತರಿಸಿ 43.4 ಓವರ್ ಗಳಲ್ಲಿ 258 ರನ್ ಗಳಿಗೆ ಪತನಗೊಂಡಿತು.

ಕೇರಳ ಪರ ವತ್ಸಲ್ ಗೋವಿಂದ್ 92 ರನ್ ಗಳಿಸಿದರೆ, ಮೊಹಮದ್ ಅಜರುದ್ದೀನ್ 52 ರನ್ ಗಳಿಸಿ ಹೋರಾಟ ನಡೆಸಿದ್ದು ಫಲ ನೀಡಲಿಲ್ಲ. ಕರ್ನಾಟಕದ ರಾಬಿನ್ ಉತ್ತಪ್ಪ 2 ರನ್ ಗೆ ಔಟಾಗಿ ನಿರಾಸೆ ಮೂಡಿಸಿದರು. ರೋನಿತ್ ಮೋರೆ 5 ವಿಕೆಟ್ ಪಡೆದು ಮಿಂಚಿದರು.

ಅದ್ಭುತ ಫಾರ್ಮ್ ನಲ್ಲಿರುವ ದೇವದತ್ ಪಡಿಕಲ್ ಮತ್ತು ನಾಯಕ ಸಮರ್ಥ್ ಮೊದಲ ವಿಕೆಟ್ ಗೆ 249 ರನ್ ಜೊತೆಯಾಟದ ಮೂಲಕ ಬೃಹತ್ ಮೊತ್ತ ಪೇರಿಸಲು ನೆರವಾದರು.

ಪಡಿಕಲ್ 119 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ಔಟಾದರು. ಈ ಮೂಲಕ ಪಡಿಕಲ್ ವಿಜಯ್ ಹಜಾರೆ ಟೂರ್ನಿಯಲ್ಲಿ ಸತತ 4ನೇ ಶತಕದ ದಾಖಲೆ ಬರೆದರು. ಮತ್ತೊಂದು ತುದಿಯಲ್ಲಿ ಸಮರ್ಥ್ ನಾಯಕನ ಆಟವಾಡಿ 158 ಎಸೆತಗಳಲ್ಲಿ 22 ಬೌಂಡರಿ ಹಾಗೂ 3 ಸಿಕ್ಸರ್ ಸಹಾಯದಿಂದ 192 ರನ್ ಗಳಿಸಿದ್ದಾಗ ಔಟಾಗಿ ದ್ವಿಶತಕದ ವಂಚಿತರಾದರು.

20 ವರ್ಷದ ಪಡಿಕಲ್ ಒಡಿಶಾ ವಿರುದ್ಧ ಜೀವನಶ್ರೇಷ್ಠ 152 ರನ್ ಬಾರಿಸಿದರೆ, ಕೇರಳ ವಿರುದ್ಧ ಅಜೇಯ 126 ಮತ್ತು ರೈಲ್ವೆಸ್ ವಿರುದ್ಧ ಅಜೇಯ 145 ರನ್ ಸಿಡಿಸಿದ್ದರು. 

ಸಂಕ್ಷಿಪ್ತ ಸ್ಕೋರು:
ಕರ್ನಾಟಕ 50 ಓವರ್ ಗಳಲ್ಲಿ 3 ವಿಕೆಟ್ ಗೆ 338
ಕೇರಳ 43.4 ಓವರ್ ಗಳಲ್ಲಿ 258

ಪಡಿಕ್ಕಲ್ ಸತತ 4ನೇ ಶತಕ

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಆಡುತ್ತಿರುವ ದೇವದತ್ ಪಡಿಕ್ಕಲ್ ಸತತ ನಾಲ್ಕು ಶತಕ ಸಿಡಿಸಿದ್ದಾರೆ. ವಿಶೇಷವೆಂದರೆ ಇಂತಹಾ ಸಾಧನೆ ಮಾಡಿದ ವಿಶ್ವರ ಮೂರನೇ ಆಟಗಾರ ಇವರಾಗಿದ್ದಾರೆ.

ಇಂದು ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಪಡಿಕ್ಕಲ್ ಕೇರಳ ವಿರುದ್ಧ 101 ರನ್ ಗಳಿಸಿ ಆರು ಪಂದ್ಯಗಳಲ್ಲಿ ನಾಲ್ಕು ಶತಕ ಮತ್ತು ಎರಡು ಅರ್ಧ ಶತಕ ಗಳಿಸಿದ್ದಾರೆ.

ಪಡಿಕ್ಕಲ್ ಇದುವರೆಗೆ ಆರು ಪಂದ್ಯಗಳಲ್ಲಿ 673 ರನ್ ಗಳಿಸಿದ್ದಾರೆ. ನಾಲ್ಕು ಶತಕಗಳಲ್ಲಿ ಅವರು 152 ರನ್ ಗಳಿಸಿದ್ದು ಗರಿಷ್ಠ ಮೊತ್ತವಾಗಿದೆ. ಪಡಿಕ್ಕಲ್ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇದಕ್ಕೆ ಮುನ್ನ ಪಡಿಕ್ಕಲ್ ಒಡಿಶಾ ವಿರುದ್ಧ 152, ಕೇರಳ ವಿರುದ್ಧ ಅಜೇಯ 126, ರೈಲ್ವೇಸ್ ವಿರುದ್ಧ ಔಟಾಗದೆ 145 ರನ್ ಸಿಡಿಸಿದ್ದರು.

ಪಡಿಕ್ಕಲ್ ಮೊದಲು, ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕರ ಅವರು 2015 ರ ವಿಶ್ವಕಪ್‌ನಲ್ಲಿ ಸತತ ನಾಲ್ಕು ಶತಕಗಳನ್ನು ಗಳಿಸಿದ್ದರೆ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಅಲ್ವಿರೋ ಪೀಟರ್‌ಸನ್ 2015-16ರ ಮೊಮೆಂಟಮ್ ಏಕದಿನ ಕಪ್‌ನಲ್ಲಿ ಸತತ ನಾಲ್ಕು ಶತಕ ದಾಖಲಿಸಿದ್ದರು.


Stay up to date on all the latest ಕ್ರಿಕೆಟ್ news
Poll
Priyanka Gandhi

ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸುವುದರಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಭವಿಷ್ಯ ಸುಧಾರಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp