ಭಾರತ ವಿರುದ್ಧದ ಸರಣಿ: ಏಕಾಏಕಿ ಇಂಗ್ಲೆಂಡ್ ಆಟಗಾರರ ತೂಕ ಇಳಿಕೆ!

ಭಾರತದ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್ ತಂಡ ಸೋತು ಹೈರಾಣಾಗಿರುವುದು ಕೇವಲ ಕ್ರೀಡೆಯಲ್ಲಿ ಅಷ್ಟೇ ಅಲ್ಲ ಇಂಗ್ಲೆಂಡ್ ಕ್ರೀಡಾಪಟುಗಳೂ ಹೈರಾಣಾಗಿದ್ದಾರೆ. 

Published: 10th March 2021 12:11 AM  |   Last Updated: 10th March 2021 12:11 AM   |  A+A-


I lost 5 kg in a week, Anderson lost 3 kg: Ben Stokes reveals England players suffered weight loss during India series

ಭಾರತ ವಿರುದ್ಧದ ಸರಣಿ: ಏಕಾಏಕಿ ಇಂಗ್ಲೆಂಡ್ ಆಟಗಾರರ ತೂಕ ಇಳಿಕೆ!

Posted By : Srinivas Rao BV
Source : The New Indian Express

ಅಹ್ಮದಾಬಾದ್: ಭಾರತದ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್ ತಂಡ ಸೋತು ಹೈರಾಣಾಗಿರುವುದು ಕೇವಲ ಕ್ರೀಡೆಯಲ್ಲಿ ಅಷ್ಟೇ ಅಲ್ಲ ಇಂಗ್ಲೆಂಡ್ ಕ್ರೀಡಾಪಟುಗಳೂ ಹೈರಾಣಾಗಿದ್ದಾರೆ. 

ಇಂಗ್ಲೆಂಡ್ ನ ಸ್ಟಾರ್ ಆಟಗಾರ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಕ್ರೀಡಾಪಟುಗಳು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು ಒಂದೇ ವಾರದಲ್ಲಿ ತೂಕ ಕಳೆದುಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. 

41 ಡಿಗ್ರಿ ತಾಪಮಾನದಲ್ಲಿ ಪಂದ್ಯವನ್ನಾಡಿದ್ದರ ಪರಿಣಾಮವಾಗಿ ಇಂಗ್ಲೆಂಡ್ ಆಟಗಾರರಿಗೆ ಆರೋಗ್ಯ ಹದಗೆಟ್ಟು ತೂಕ ಇಳಿಕೆಯಾಗಿದೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ. 

ಬ್ರಿಟನ್ ನ ಡೈಲಿ ಮಿರರ್ ಜೊತೆಗೆ ಮಾತನಾಡಿರುವ ಸ್ಟೋಕ್ಸ್ ಕ್ರೀಡಾಪಟುಗಳು ಎದುರಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳಿದ್ದು, "ಒಂದು ವಾರದಲ್ಲಿ ನಾನು 5 ಕೆ.ಜಿ ಇಳಿಕೆಯಾಗಿದ್ದೇನೆ, ಡಾಮ್ ಸಿಬ್ಲೇ 4 ಕೆ.ಜಿ ಹಾಗೂ ಜೇಮ್ಸ್ ಆಂಡ್ರಸನ್ 3 ಕೆ.ಜಿ ತೂಕ ಇಳಿಕೆಯಾಗಿದ್ದಾರೆ. ಜಾಕ್ ಲೀಚ್ ಸಹ ಅನಾರೋಗ್ಯದಿಂದ ಬಳಲಿದ್ದರು ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.


Stay up to date on all the latest ಕ್ರಿಕೆಟ್ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp