ಮ್ಯಾಚ್ ಫಿಕ್ಸಿಂಗ್: ಯುಎಇಯ ಇಬ್ಬರು ಕ್ರಿಕೆಟಿಗರ ಮೇಲೆ 8 ವರ್ಷ ನಿಷೇಧ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಾಯಕ ಮೊಹಮ್ಮದ್ ನವೀದ್ ಮತ್ತು ಆರಂಭಿಕ ಆಟಗಾರ ಶೈಮಾನ್ ಅನ್ವರ್ ಬಟ್ ಅವರ ಮೇಲಿನ ಭ್ರಷ್ಟಾಚಾರದ ಆರೋಪ ಸಾಬೀತಾದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಎಂಟು ವರ್ಷಗಳ ಕಾಲ ನಿಷೇಧಿಸಿದೆ.

Published: 17th March 2021 02:47 PM  |   Last Updated: 17th March 2021 02:47 PM   |  A+A-


ICC1

ಐಸಿಸಿ

Posted By : Vishwanath S
Source : UNI

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಾಯಕ ಮೊಹಮ್ಮದ್ ನವೀದ್ ಮತ್ತು ಆರಂಭಿಕ ಆಟಗಾರ ಶೈಮಾನ್ ಅನ್ವರ್ ಬಟ್ ಅವರ ಮೇಲಿನ ಭ್ರಷ್ಟಾಚಾರದ ಆರೋಪ ಸಾಬೀತಾದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಎಂಟು ವರ್ಷಗಳ ಕಾಲ ನಿಷೇಧಿಸಿದೆ.

ಈ ವರ್ಷದ ಜನವರಿಯಲ್ಲಿ, ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕವು ಈ ಇಬ್ಬರೂ ಕ್ರಿಕೆಟಿಗರನ್ನು ಭ್ರಷ್ಟಾಚಾರದ ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ತಿಳಿಸಿತ್ತು. ಕ್ರಿಕೆಟ್‌ನ ವಿಶ್ವ ಸಂಸ್ಥೆ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್‌ರನ್ನು ಎಂಟು ವರ್ಷಗಳಿಂದ ಎಲ್ಲಾ ರೀತಿಯ ಕ್ರಿಕೆಟ್‌ಗಳಿಂದ ನಿಷೇಧಿಸಿದೆ.

2019ರಲ್ಲೇ ಈ ಇಬ್ಬರು ಆಟಗಾರರನ್ನು ಅಮಾನತು ಮಾಡಲಾಗಿತ್ತು. ಹೀಗಾಗಿ 2019ರ ಅಕ್ಟೋಬರ್ 16ರಿಂದಲೇ ಈ ನಿಷೇಧ ಜಾರಿಗೊಳ್ಳಲಿದೆ. 

ಮೊಹಮ್ಮದ್ ನವೀದ್ ಯುಎಇ ತಂಡದ ಮಾಜಿ ನಾಯಕನಾಗಿದ್ದುದ 39 ಏಕದಿನ ಪಂದ್ಯ, 31 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು ಶೈಮಾನ್ 40 ಏಕದಿನ ಪಂದ್ಯ ಹಾಗೂ 32 ಟಿ20 ಪಂದ್ಯಗಳನ್ನು ಆಡಿದ್ದಾರೆ. 


Stay up to date on all the latest ಕ್ರಿಕೆಟ್ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp