ಕೊನೆಗೂ ಮೊದಲ ಪಂದ್ಯದ ಸೋಲಿನ ಸರಪಳಿ ಕಳಚಿಕೊಂಡ ಭಾರತ

ಮೊದಲ ಪಂದ್ಯದ ಸೋಲಿನ ಕರಾಳ ಛಾಯೆಯಿಂದ ಕೊನೆಗೂ ಭಾರತ ಹೊರಬಂದಿದ್ದು, ಇಂದು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದೆ.

Published: 23rd March 2021 11:05 PM  |   Last Updated: 23rd March 2021 11:05 PM   |  A+A-


Finally india Breaks 1st Match Defeat Chain

ಭಾರತಕ್ಕೆ ಗೆಲುವು

Posted By : Srinivasamurthy VN
Source : Online Desk

ಪುಣೆ: ಮೊದಲ ಪಂದ್ಯದ ಸೋಲಿನ ಕರಾಳ ಛಾಯೆಯಿಂದ ಕೊನೆಗೂ ಭಾರತ ಹೊರಬಂದಿದ್ದು, ಇಂದು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 66ರನ್ ಗಳ ಭರ್ಜರಿ ಜಯ ಸಾಧಿಸಿತು. ಇದು ಭಾರತ ಕಳೆದ ಐದು ಏಕದಿನ ಸರಣಿಗಳಲ್ಲಿ ನಡೆದ ಮೊದಲ ಏಕದಿನ ಪಂದ್ಯಗಳಲ್ಲಿ ಮೊದಲ ಗೆಲುವಾಗಿದೆ. ಈ ಹಿಂದೆ ನಡೆದ ನಾಲ್ಕು ಏಕದಿನ ಸರಣಿಗಳ ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು.

ಈ ಹಿಂದೆ ಚೆನ್ನೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಅಂತರದ ಸೋಲು ಕಂಡಿತ್ತು. ಬಳಿಕ ಮುಂಬೈನಲ್ಲಿ ಆರಂಭವಾಗಿದ್ದ ಆಸ್ಟ್ರೇಲಿಯಾ ವಿರುದ್ಧದ ಎಕದಿನ ಸರಣಿಯ ಮೊದಲ ಪಂದ್ಯದಲ್ಲೂ ಭಾರತ 10 ವಿಕೆಟ್ ಗಳ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ಹ್ಯಾಮಿಲ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆರಂಭವಾಗಿದ್ದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್ ಗಳ ಸೋಲು ಕಂಡಿತ್ತು. ಬಳಿಕ ಮತ್ತೆ ಆಸ್ಚ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಆರಂಭವಾಗಿದ್ದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 66ರನ್ ಗಳ ಹೀನಾಯ ಸೋಲುಕಂಡಿತ್ತು.

ಇದೀಗ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 66ರನ್ ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಈ ಹಿಂದಿನ ತನ್ನ ಮೊದಲ ಪಂದ್ಯದ ಸೋಲಿನ ಸರಪಳಿಯನ್ನು ಭಾರತ ಕಳಚಿಕೊಂಡಿದೆ. ಅಲ್ಲದೆ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದೆ.  
 


Stay up to date on all the latest ಕ್ರಿಕೆಟ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp