ನರ್ವಸ್ ನೈಂಟಿ: ಇಂಗ್ಲೆಂಡ್ ವಿರುದ್ಧ 98 ರನ್ ಗೆ ಔಟಾದ ಧವನ್, ಶತಕದ ಅಂಚಿನಲ್ಲಿ ಎಡವಿದ್ದೆಷ್ಟು ಬಾರಿ!

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದು ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಶತಕದ ಅಂಚಿನಲ್ಲಿ ಔಟಾಗಿದ್ದಾರೆ.

Published: 23rd March 2021 05:03 PM  |   Last Updated: 23rd March 2021 05:05 PM   |  A+A-


Shikhar Dhawan

ಶಿಖರ್ ಧವನ್

Posted By : Vishwanath S
Source : Online Desk

ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದು ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಶತಕದ ಅಂಚಿನಲ್ಲಿ ಔಟಾಗಿದ್ದಾರೆ. 

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 106 ಎಸೆತಗಳಲ್ಲಿ 2 ಸಿಕ್ಸ್, 11 ಬೌಂಡರಿ ಸೇರಿದಂತೆ 98 ರನ್ ಬಾರಿಸಿದ್ದಾರೆ. 

ಇದರೊಂದಿಗೆ ಶಿಖರ್ ಧವನ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬರೋಬ್ಬರಿ 6ನೇ ಬಾರಿಗೆ ನರ್ವಸ್ 90ಗೆ ಬಲಿಯಾಗಿದ್ದಾರೆ. ಇನ್ನು 2 ರನ್ ಗಳ ಅಂತರದೊಂದಿಗೆ 18ನೇ ಶತಕವನ್ನು ಕಳೆದುಕೊಂಡಿದ್ದಾರೆ. 

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪ್ರಸ್ತುತ ಟೀಂ ಇಂಡಿಯಾ 42 ಓವರ್ ಗಳ ಮುಕ್ತಾಯಕ್ಕೆ 5 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿದೆ. ಕೆಎಲ್ ರಾಹುಲ್ ಅಜೇಯ 18 ಮತ್ತು ಕೃಣಾಲ್ ಪಾಂಡ್ಯ ಅಜೇಯ 13 ರನ್ ಬಾರಿಸಿ ಆಡುತ್ತಿದ್ದಾರೆ. 

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp