ಪಾದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಕೃನಾಲ್ ಸಹೋದರ ಹಾರ್ದಿಕ್ ತಬ್ಬಿ ಕಣ್ಣೀರಿಟ್ಟ ವಿಡಿಯೋ ವೈರಲ್!

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದ ಕೃನಾಲ್ ಪಾಂಡ್ಯ ಚೊಚ್ಚಲ ಪಂದ್ಯದಲ್ಲೇ ವೇಗದ ಅರ್ಧ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.

Published: 23rd March 2021 08:27 PM  |   Last Updated: 23rd March 2021 08:29 PM   |  A+A-


Krunal Pandya

ಕೃನಾಲ್ ಪಾಂಡ್ಯ

Posted By : Vishwanath S
Source : Online Desk

ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದ್ದ ಕೃನಾಲ್ ಪಾಂಡ್ಯ ಚೊಚ್ಚಲ ಪಂದ್ಯದಲ್ಲೇ ವೇಗದ ಅರ್ಧ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. 

ಹಾರ್ದಿಕ್ ಪಾಂಡ್ಯ ಔಟಾದ ಬಳಿಕ ಕ್ರೀಸ್ ಗೆ ಬಂದ ಕೃನಾಲ್ ಮೊದಲ ಎಸೆತದಿಂದಲೇ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದರು. ಇನ್ನು 31 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸೇರಿದಂತೆ ಅಜೇಯ 58 ರನ್ ಬಾರಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡಿದ ಆಟಗಾರನೊಬ್ಬ ವೇಗದ ಅರ್ಧ ಶತಕ ಬಾರಿಸಿದ ದಾಖಲೆಯನ್ನು ಕೃನಾಲ್ ತಮ್ಮದಾಗಿಸಿಕೊಂಡರು. 

ಪಾದಾರ್ಪಣೆ ಪಂದ್ಯದಲ್ಲೇ ಅತ್ಯಂತ ವೇಗವಾಗಿ ಅರ್ಧ ಶತಕ ಸಿಡಿಸಿದ ಆಟಗಾರನಾಗಿ ಕೃನಾಲ್ ದಾಖಲೆ ನಿರ್ಮಿಸಿದರು. ಇನ್ನು ಟೀಂ ಇಂಡಿಯಾ ಇನ್ನಿಂಗ್ಸ್ ಬಳಿಕ ಮಾತನಾಡಿದ ಕೃನಾಲ್, ಇದು ನನ್ನ ತಂದೆಗೆ ಅರ್ಪಣೆ ಎಂದು ಹೇಳಿ ಕಣ್ಣೀರಿಟ್ಟರು. ಮಾತನ್ನು ಅರ್ಧಕ್ಕೆ ನಿಲ್ಲಿಸಿ ಅಳುತ್ತಾ ತೆರಳಿದ ಕೃನಾಲ್ ಸಹೋದರ ಹಾರ್ದಿಕ್ ಪಾಂಡ್ಯರನ್ನು ತಪ್ಪಿ ಕಣ್ಣೀರು ಹಾಕಿದರು. 

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp