ಪಾದಾರ್ಪಣೆ ಪಂದ್ಯದಲ್ಲೇ ವೇಗದ ಅರ್ಧಶತಕ ದಾಖಲೆ ಬರೆದ ಕೃನಾಲ್; ಇಂಗ್ಲೆಂಡ್‌ಗೆ 318 ರನ್ ಗುರಿ ನೀಡಿದ ಭಾರತ

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಪಾದಾರ್ಪಣೆ ಪಂದ್ಯದಲ್ಲಿ ವೇಗದ ಅರ್ಧ ಶತಕ ಸಿಡಿಸಿದ್ದಾರೆ.

Published: 23rd March 2021 06:15 PM  |   Last Updated: 23rd March 2021 06:35 PM   |  A+A-


Krunal Pandya

ಕೃನಾಲ್ ಪಾಂಡ್ಯ

Posted By : Vishwanath S
Source : UNI

ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಪಾದಾರ್ಪಣೆ ಪಂದ್ಯದಲ್ಲಿ ವೇಗದ ಅರ್ಧ ಶತಕ ಸಿಡಿಸಿದ್ದಾರೆ. 

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 317 ರನ್ ಕಲೆ ಹಾಕಿತು.

ಆರಂಭಿಕರಾದ ರೋಹಿತ್ ಶರ್ಮಾ (28) ಹಾಗೂ ಶಿಖರ್ ಧವನ್ ಜೋಡಿ ತಂಡಕ್ಕೆ ಸಮಯೋಚಿತ ಜೊತೆಯಾಟದ ಕಾಣಿಕೆ ನೀಡಿದರು. 15.1 ಓವರ್ ಗಳಲ್ಲಿ ಈ ಜೋಡಿ 64 ರನ್ ಸೇರಿಸಿತು. 

ಎರಡನೇ ವಿಕೆಟ್ ಗೆ ವಿರಾಟ್ ಕೊಹ್ಲಿ ಹಾಗೂ ಧವನ್ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಲ್ಲದೆ ಪ್ರವಾಸಿ ತಂಡದ ಬೌಲರ್ ಗಳನ್ನು ಕಾಡಿ ರನ್ ಗುಡ್ಡೆ ಹಾಕಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಇಂಗ್ಲೆಂಡ್ ತಂಡ ಮಾಡಿಕೊಂಡ ಪ್ಲಾನ್ ಕೈ ಕೊಟ್ಟಿತು. ಧವನ್-ಕೊಹ್ಲಿ ಶತಕದ ಜೊತೆಯಾಟ ನೀಡಿದರು. ಕೊಹ್ಲಿ 56 ರನ್ ಗಳಿಸಿದ್ದಾಗ ಮಾರ್ಕ್ ವುಡ್ ಗೆ ವಿಕೆಟ್ ಒಪ್ಪಿಸಿದರು. 

ಶ್ರೇಯಸ್ ಅಯ್ಯರ್ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಶಿಖರ್ ಧವನ್ ಮನಮೋಹಕ ಬ್ಯಾಟಿಂಗ್ ನಡೆಸಿದರೂ, ಎರಡು ರನ್ ಗಳಿಂದ ಶತಕ ವಂಚಿತರಾದರು. ಇವರ ಇನ್ನಿಂಗ್ಸ್ ನಲ್ಲಿ 11 ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿವೆ. ಹಾರ್ದಿಕ್ ಪಾಂಡ್ಯ ಆಟ ಒಂದು ರನ್ ಗೆ ಸೀಮಿತವಾಯಿತು. 

ಟಿ-20 ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಕೆ.ಎಲ್ ರಾಹುಲ್ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದರು. ಆರನೇ ವಿಕೆಟ್ ಗೆ ರಾಹುಲ್ ಹಾಗೂ ಚೊಚ್ಚಲ ಪಂದ್ಯ ಆಡಿದ ಕೃನಾಲ್ ಜೊತೆಗೂಡಿ ಶತಕದ ಜೊತೆಯಾಟ ನೀಡಿದರು. ಅಲ್ಲದೆ ಕೃನಾಲ್ (ಅಜೇಯ 58) ಪದಾರ್ಪಣಾ ಪಂದ್ಯದಲ್ಲಿ ವೇಗವಾಗಿ ಅರ್ಧಶತಕ ಬಾರಿಸಿದ ದಾಖಲೆಗೆ ಪಾತ್ರರಾದರು. ರಾಹುಲ್ ಅಜೇಯ 62 ರನ್ ಸಿಡಿಸಿದರು.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp