ಐಪಿಎಲ್‌ಗೆ ಮುನ್ನ ಡೆಲ್ಲಿಗೆ ಶಾಕ್: ಅಯ್ಯರ್ ಏಕದಿನ ಸರಣಿಯಿಂದ ಔಟ್, ಐಪಿಎಲ್ ಆಡುವುದೂ ಡೌಟ್?

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಎಂಟನೇ ಓವರ್‌ನಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮುಂದಿನ ಏಕದಿನ ಸರಣಿಯಿಂದ ಔಟಾಗಿದ್ದಾರೆ. ಇನ್ನು ಗಂಭೀರ ಗಾಯಗೊಂಡಿರುವುದರಿಂದ ಮುಂಬರುವ ಐಪಿಎಲ್ ಟೂರ್ನಿ ಆಡುವುದು ಡೌಟ್ ಎನ್ನಲಾಗಿದೆ. 

Published: 24th March 2021 08:28 PM  |   Last Updated: 25th March 2021 12:48 PM   |  A+A-


Shreyas Iyer

ಶ್ರೇಯಸ್ ಅಯ್ಯರ್

Posted By : Vishwanath S
Source : UNI

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಎಂಟನೇ ಓವರ್‌ನಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮುಂದಿನ ಏಕದಿನ ಸರಣಿಯಿಂದ ಔಟಾಗಿದ್ದಾರೆ. ಇನ್ನು ಗಂಭೀರ ಗಾಯಗೊಂಡಿರುವುದರಿಂದ ಮುಂಬರುವ ಐಪಿಎಲ್ ಟೂರ್ನಿ ಆಡುವುದು ಡೌಟ್ ಎನ್ನಲಾಗಿದೆ. 

ಫಿಸಿಯೋ ಸ್ಕ್ಯಾನಿಂಗ್ ನಲ್ಲಿ ಶ್ರೇಯಸ್ ಅಯ್ಯರ್ ಗೆ ಭುಜ ಡಿಸ್ ಲೊಕೆಟ್ ಆಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸುದೀರ್ಘ ವಿಶ್ರಾಂತಿಗೆ ಕಳುಹಿಸುವ ಸಾಧ್ಯತೆ ಇದೆ. 

ಅಯ್ಯರ್ ಗೆ ಗಾಯ, ಏಕದಿನ ಸರಣಿಯಿಂದ ಔಟ್
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ಎಂಟನೇ ಓವರ್‌ನಲ್ಲಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರನ್ನು ಮಂಗಳವಾರ ಇಲ್ಲಿ ಸ್ಕ್ಯಾನ್ ಗೆ ಒಳಪಡಿಸಲಾಗಿದೆ. ಗಾಯ ಗಂಭೀರವಾದ ನಂತರ ಮೂರು ಪಂದ್ಯಗಳ ಏಕದಿನ ಸರಣಿಯ ಉಳಿದ ಎರಡು ಪಂದ್ಯಗಳಿಂದ ಮತ್ತು ಐಪಿಎಲ್ 2021 ರ ಕೆಲವು ಪಂದ್ಯಗಳಲ್ಲಿ ಅವರಿಗೆ ಆಡಲು ಸಾಧ್ಯವಾಗುವುದಿಲ್ಲ. ಫೀಲ್ಡಿಂಗ್ ಸಮಯದಲ್ಲಿ ಶ್ರೇಯಾಸ್ ಅವರ ಎಡ ಭುಜಕ್ಕೆ ಗಾಯವಾಗಿತ್ತು.
  
ಜಾನಿ ಬೈರ್‌ಸ್ಟೋವ್‌ ಬಾರಿಸಿದ ಚೆಂಡನ್ನು ಬೌಂಡರಿಗೆ ಹೋಗದಂತೆ ತಡೆಯುವ ಪ್ರಯತ್ನದಲ್ಲಿ ಅಯ್ಯರ್‌ನ ಎಡ ಭುಜಕ್ಕೆ ಗಾಯವಾಗಿದೆ. ಈ ವೇಳೆ ಅವರು ತಂಡಕ್ಕಾಗಿ ಕೆಲವು ರನ್ ಗಳನ್ನು ಉಳಿಸುವಲ್ಲಿ ಯಶಸ್ವಿಯಾದರು. ಆದರೆ ಅವರಿಗೆ ತುಂಬ ನೋವು ಕಾಣಿಸಿಕೊಂಡಿತ್ತು. ಮತ್ತು ಎಡ ಭುಜವನ್ನು ಹಿಡಿದುಕೊಂಡು ಮೈದಾನದಿಂದ ಹೊರಬರಬೇಕಾಯಿತು. ಅಯ್ಯರ್ ಅನುಪಸ್ಥಿತಿಯಲ್ಲಿ, ಐಪಿಎಲ್‌ ಪಂದ್ಯಗಳಲ್ಲಿ ದೆಹಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ರಿಷಭ್ ಪಂತ್, ಅಜಿಂಕ್ಯ ರಹಾನೆ, ಸ್ಟೀವನ್ ಸ್ಮಿತ್ ಅಥವಾ ರವಿಚಂದ್ರನ್ ಅಶ್ವಿನ್ಗೆ ನೀಡಬಹುದು. ಅವರ ಗಾಯದ ವಿವರಗಳು ಇನ್ನೂ ತಿಳಿದುಬಂದಿಲ್ಲ.
  
ಆರಂಭಿಕ ರೋಹಿತ್ ಶರ್ಮಾ ಕೂಡ ಮುಂದಿನ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಬ್ಯಾಟಿಂಗ್ ಮಾಡುವಾಗ, ಇಂಗ್ಲೆಂಡ್ ವೇಗದ ಬೌಲರ್ ಮಾರ್ಕ್ ವುಡ್ ಅವರ 148 ಕಿ.ಮೀ ಚೆಂಡನ್ನು ರೋಹಿತ್ ಅವರ ಮೊಣಕೈಗೆ ಬಡೆಯಿತು, ನಂತರ ಅವರಲ್ಲಿ ನೋವು ಕಾಣಿಸಿಕೊಂಡಿತು.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp