ಆಫ್ರಿಕಾ ಮಹಿಳೆಯ ವಿರುದ್ಧ ಅಂತಿಮ ಟಿ20 ಪಂದ್ಯ ಗೆದ್ದ ಭಾರತದ ವನಿತೆಯರ ತಂಡ

ಮೊದಲೆರಡು ಟಿ20 ಪಂದ್ಯದಲ್ಲಿ ಸೋತು ಸರಣಿ ಕಳೆದುಕೊಂಡಿದ್ದ ಭಾರತ ವನಿತೆಯರ ತಂಡ ಕೊನೆಯ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮಾನ ಉಳಿಸಿಕೊಂಡಿದೆ.

Published: 24th March 2021 12:24 AM  |   Last Updated: 24th March 2021 12:24 AM   |  A+A-


India Women won

ಭಾರತ ವನಿತೆಯರ ತಂಡಕ್ಕೆ ಜಯ

Posted By : Srinivasamurthy VN
Source : Online Desk

ಲಖನೌ: ಮೊದಲೆರಡು ಟಿ20 ಪಂದ್ಯದಲ್ಲಿ ಸೋತು ಸರಣಿ ಕಳೆದುಕೊಂಡಿದ್ದ ಭಾರತ ವನಿತೆಯರ ತಂಡ ಕೊನೆಯ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮಾನ ಉಳಿಸಿಕೊಂಡಿದೆ.

ಉತ್ತರ ಪ್ರದೇಶದ ಲಖನೌನಲ್ಲಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ವನಿತೆಯರ ತಂಡ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ ತನ್ನ ಸೋಲನ್ನು 2-1 ಅಂತರಕ್ಕೆ ಇಳಿಸಿಕೊಂಡಿದೆ. ವೈಟ್ ವಾಶ್ ಸೋಲನ್ನು ಭಾರತ ತಪ್ಪಿಸಿಕೊಂಡಿದೆ. 

ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ ವನಿತೆಯರ ತಂಡ 7 ವಿಕೆಟ್ ಗೆ ಕೇವಲ 112 ರನ್‌ ಗಳಿಸಿತು. ಭಾರತದ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ ಅಮೋಘ ಸ್ಪೆಲ್‌ ಮಾಡಿ 3 ವಿಕೆಟ್ ಪಡೆದರು. ಆ ಮೂಲಕ ಆಫ್ರಿಕಾ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು. ಆಫ್ರಿಕಾ ನೀಡಿದ 113ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಕೇವಲ 11 ಓವರ್ ನಲ್ಲಿಯೇ 1 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿ ವಿಜಯ ಸಾಧಿಸಿತು.

ಭಾರತದ ಚೇಸಿಂಗ್‌ ವೇಳೆ ಶಫಾಲಿ ವರ್ಮ ಸಿಡಿದು ನಿಂತರು. ಬರೀ 30 ಎಸೆತ ಗಳಿಂದ 60 ರನ್‌ ಬಾರಿಸಿದರು. ಬಳಿಕ ನಾಯಕಿ ಸ್ಮತಿ ಮಂಧಾನ 28 ಎಸೆತಗಳಿಂದ ಅಜೇಯ 48 ರನ್‌ ಸಿಡಿಸಿದರು.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp