ವೇಗದ ಅರ್ಧಶತಕ ಬೆನ್ನಲ್ಲೇ ಕೃನಾಲ್, ಟಾಮ್ ಕುರ್ರನ್ ಮಾತಿನ ಸಮರ; ಗೊಂದಲಕ್ಕೊಳಗಾದ ಕೊಹ್ಲಿ, ವಿಡಿಯೋ ವೈರಲ್!

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಕೃನಾಲ್ ಪಾಂಡ್ಯ ವೇಗದ ಅರ್ಧ ಶತಕ ಸಿಡಿಸಿದ ಬೆನ್ನಲ್ಲೇ ಎದುರಾಳಿ ಬೌಲರ್ ಟಾಮ್ ಕರ್ರನ್ ಕೃನಾಲ್ ರನ್ನು ನಿಂದಿಸಿದ್ದು ಇದರಿಂದ ಕೆರಳಿದ ಕೃನಾಲ್ ರನ್ನು ಅಂಪೈರ್ ಸಮಾಧಾನಪಡಿಸಿದರು.

Published: 24th March 2021 04:34 PM  |   Last Updated: 24th March 2021 05:50 PM   |  A+A-


Kohli-Tom-Curran-Krunal

ಕೊಹ್ಲಿ-ಟಾಮ್-ಕುರ್ರನ್-ಕೃನಾಲ್

Posted By : Vishwanath S
Source : Online Desk

ಪುಣೆ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಕೃನಾಲ್ ಪಾಂಡ್ಯ ವೇಗದ ಅರ್ಧ ಶತಕ ಸಿಡಿಸಿದ ಬೆನ್ನಲ್ಲೇ ಎದುರಾಳಿ ಬೌಲರ್ ಟಾಮ್ ಕರ್ರನ್ ಕೃನಾಲ್ ರನ್ನು ನಿಂದಿಸಿದ್ದು ಇದರಿಂದ ಕೆರಳಿದ ಕೃನಾಲ್ ರನ್ನು ಅಂಪೈರ್ ಸಮಾಧಾನಪಡಿಸಿದರು.

ಪುಣೆಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೃನಾಲ್ ಪಾಂಡ್ಯ 26 ಎಸೆತಗಳಲ್ಲಿ 50 ರನ್ ಬಾರಿಸಿದ್ದರು. ಇನ್ನಿಂಗ್ಸ್ ನಂತರ ಕೃನಾಲ್ ಪಾಂಡ್ಯ ತಂದೆಯ ಕುರಿತಂತೆ ಭಾವುಕರಾಗಿ ಕಣ್ಣೀರು ಹಾಕಿದ್ದನ್ನು ನೋಡಿದ್ದೇವೆ. ಅದೇ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಇಂಗ್ಲೆಂಡ್ ಆಲ್ ರೌಂಡರ್ ಟಾಮ್ ಕುರ್ರನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. 

ವೇಗದ ಅರ್ಧ ಶತಕ ಸಿಡಿಸಿದ್ದ ಕೃನಾಲ್ 49ನೇ ಓವರ್ ನಲ್ಲಿ ಟಾಮ್ ಕುರ್ರನ್ ಬೌಲಿಂಗ್ ಸಿಂಗಲ್ ತೆಗೆದುಕೊಂಡರು. ಈ ವೇಳೆ ಟಾಮ್ ಕುರ್ರನ್ ನಿಂದಿಸಿದ್ದನ್ನು ಗಮನಿಸಿದ ಕೃನಾಲ್ ತಾನೂ ಟಾಮ್ ಕುರ್ರನ್ ವಿರುದ್ಧ ಮಾತಿಗೆ ಇಳಿಯುತ್ತಾರೆ. ಈ ವೇಳೆ ಅಲ್ಲೆ ಇದ್ದ ಅಂಪೈರ್ ಕೂಡಲೇ ಮಧ್ಯಪ್ರವೇಶಿಸಿ ಕೃನಾಲ್ ರನ್ನು ಸಮಾಧಾನಪಡಿಸುತ್ತಾರೆ.

ಈ ಮಾತಿನ ಸಮರ ನಡೆಯುತ್ತಿದ್ದದ್ದನ್ನು ಲಾಬಿಯಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿ ಏನು ಆಗುತ್ತಿದೆ ಎಂದು ಗೊತ್ತಾಗದೆ ಗೊಂದಲಕ್ಕೊಳಗಾಗಿದ್ದರು. ಅಂಪೈರ್ ಮಧ್ಯಸ್ಥಿಕೆಯಿಂದಾಗಿ ಮಾತಿನ ಚಕಮಿಕಿ ತಣ್ಣಗಾಯಿತು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ 66 ರನ್ ಗಳಿಂದ ಗೆಲುವು ಸಾಧಿಸಿದೆ.

Stay up to date on all the latest ಕ್ರಿಕೆಟ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp